Breaking News

ದೇಶ-ವಿದೇಶ

ಎದೆಯುಬ್ಬಿಸಿ ಹೆಮ್ಮೆಯಿಂದ, ಮಗನಿಗೆ ಸೆಲ್ಯೂಟ್​ ಹೊಡೆಯುವ ಪೇದೆ ಅಪ್ಪ..!

ಲಖನೌ: ಅಪ್ಪ ಅಂದ್ರೆ ಅಕಾಶ ಅಂತಾರೇ, ಇನ್ನು ಅಪ್ಪ ಕೂಡ ಮಕ್ಕಳನ್ನು ಆಕಾಶಕ್ಕಿಂತ ಎತ್ತರ ಬೆಳಸುವ ಕನಸು ಕಂಡು ಮಗನ ಬೆಳವಣಿಗೆಗೆ ಬುನಾದಿ ಹಾಕುತ್ತಾರೆ. ಎಂಥಾ ತಂದೆಗೂ ಕೂಡ ತನ್ನ ಮಕ್ಕಳು ಒಳ್ಳೆಯವರಾಗಲಿ, ಜೀವನದಲ್ಲಿ ಉನ್ನತಿ ಸಾಧಿಸಲಿ ಎಂಬ ಆಶಯ ಇದ್ದೇ ಇರುತ್ತದೆ. ಇಂತಹುದೇ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸ್​ ಕಾನ್​ಸ್ಟೇಬಲ್​ ಆಗಿದ್ದ ತಂದೆ, ತನ್ನ ಮಗನನ್ನು ಐಪಿಎಸ್​​ ಮಾಡಿಸಿದ್ದಾರೆ. ಇದೀಗ ವೃತ್ತಿ ನಿಷ್ಠೆ ಮೆರೆಯುತ್ತಾ.. ಎದೆಯುಬ್ಬಿಸಿ ಹೆಮ್ಮೆಯಿಂದ …

Read More »

ಸೆಲ್ಫಿ ಸಾವು ನಿಯಂತ್ರಣಕ್ಕೆ ಐಐಐಟಿ-ದೆಹಲಿ ಕಂಡುಹಿಡಿದ ಆಪ್ ಯಾವುದು ಗೊತ್ತೇ?

ನವದೆಹಲಿ: ಇತ್ತೀಚಿಗೆ ಸೆಲ್ಪಿ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.ಈಗ ಅದಕ್ಕೆ ತಡೆಯೋಡ್ದುವ ನಿಟ್ಟಿನಲ್ಲಿ ಐಐಐಟಿ-ದೆಹಲಿ ನೂತನ ಸೇಪ್ಟೆ(Saftie) ಆಪ್ ವೊಂದನ್ನು ಕಂಡುಹಿಡಿದಿದೆ.ಈಗ ಈ ಆಪ್ ಕುರಿತಾಗಿ ಪ್ರತಿಕ್ರಿಸಿರುವ ಐಐಐಟಿ-ದೆಹಲಿ ಪ್ರಾಧ್ಯಾಪಕ ಪೋನ್ನುರಂಗಮ ಕುಮಾರಗುರು “ಈ ಆಪ್ ನ್ನು ಸೆಲ್ಪಿ ಸಂಬಂಧಿಸಿ ಸಾವುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಇದರಲ್ಲಿನ ಕ್ಯಾಮರಾ ನೈಜ ಚಿತ್ರವನ್ನು ವಿಶ್ಲೇಷಣೆ ಮಾಡುತ್ತದೆ, ಒಂದು ವೇಳೆ ಆಪಾಯಕಾರಿ ಎನಿಸಿದರೆ ಅದರ ಬಗ್ಗೆ ಸೂಚನೆ ನೀಡುತ್ತದೆ ಎಂದು ಅವರು …

Read More »

ಇಂದಿನಿಂದ ಸುಪ್ರೀಂನಲ್ಲಿ ರಾಮ ಜನ್ಮ ಭೂಮಿ ವಿವಾದ ಅಂತಿಮ ವಿಚಾರಣೆ; ಯಾರ ಪಾಲಾಗುತ್ತೆ ಅಯೋಧ್ಯೆ?

ನವದೆಹಲಿ: ಎರಡು ದಶಕಗಳಿಂದ ಹಿಂದೂ-ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದದ ಅರ್ಜಿಗಳ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರದಿಂದ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ವಾದ ಮತ್ತು ಪ್ರತಿವಾದಕ್ಕೆ ಸಂಪೂರ್ಣ ಸಿದ್ಧತೆ ನಡೆಸಿವೆ.2.77 ಎಕರೆ ವಿವಾದಿತ ಸ್ಥಳದ ಮಾಲೀಕತ್ವದ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರ ನೀಡಲು ಇಂದಿನಿಂದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ …

Read More »

ಹಣ ಬಲ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ: ಚುನಾವಣಾ ಆಯೋಗ

ನವದೆಹಲಿ: ತೆಲಂಗಾಣ ರಾಜ್ಯ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಆಯೋಗಕ್ಕೆ ಇದೀಗ ಹಣದ ಬಲ ಹಾಗೂ ಮಾಧ್ಯಮಗಳ ದುರ್ಬಳಕೆಗಳು ದೊಡ್ಡ ಸವಾಲಾಗಿ ಪರಿಣಮಿಸಿದೆ.ತೆಲಂಗಾಣ ರಾಜ್ಯದಲ್ಲಿ ಡಿಸೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚುನಾವಣಾ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಅವರು, ಹಣ ಬಲ ಹಾಗೂ ಅದರ ದುರ್ಬಳಕೆ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ …

Read More »

ಮುಂಚೆ ಪ್ರಧಾನಿ ಪ್ರಧಾನಿಗೆ, ಸಿಎಂ ಸಿಎಂಗೆ ಜನ್ಮ ನೀಡುತ್ತಿದ್ದರು, ನಾವು ಅದನ್ನು ಬದಲಿಸಿದ್ದೇವೆ-ಗಡ್ಕರಿ

ಮುಂಚೆ ಪ್ರಧಾನಿ ಪ್ರಧಾನಿಗೆ, ಸಿಎಂ ಸಿಎಂಗೆ ಜನ್ಮ ನೀಡುತ್ತಿದ್ದರು, ನಾವು ಅದನ್ನು ಬದಲಿಸಿದ್ದೇವೆ-ಗಡ್ಕರಿಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.ನವದೆಹಲಿ: ಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.ಹೈದರಾಬಾದ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಗಡ್ಕರಿ “ನಾವು …

Read More »

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರಲ್ವಂತೆ ಟ್ರಂಪ್​​​​​​​​​!

ನವದೆಹಲಿ: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಭಾರತ ನೀಡಿದ ಆಮಂತ್ರಣವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್​ನ ಆರಂಭದಲ್ಲಿ, ಟ್ರಂಪ್​​​​ಗೆ ಭಾರತಕ್ಕೆ ಬರಲು ಆಮಂತ್ರಣ ನೀಡಿರುವುದನ್ನ ವೈಟ್​ ಹೌಸ್​​​ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್​​ ದೃಢಪಡಿಸಿದ್ದರು. ಆಮಂತ್ರಣ ನೀಡಿರುವುದು ನನಗೆ ಗೊತ್ತಿದೆ. ಆದ್ರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ. …

Read More »

48 ಗಂಟೆಯಲ್ಲಿ ಬರೋಬ್ಬರಿ ನೂರು ಕೆ.ಜಿ ಚಿನ್ನ ಸಿಕ್ತು..!

ಡೈರಕ್ಟೇಟ್​ ಆಫ್​ ರೆವಿನ್ಯೂ ಇಂಟಲಿಜೆನ್ಸ್​ನ ಇಂದು ದೇಶದ ಐದು ಮಹಾನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಚೆನೈ, ನವದೆಹಲಿ, ಮಧುರೈ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ದಾಳಿ ನಡೆಸಿದ್ರು. ಕಳೆದ 48 ಗಂಟೆಯ ಸತತ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬರೋಬ್ಬರಿ ನೂರು ಕೆ.ಜಿ ಚಿನ್ನದ ಬಿಸ್ಕೆಟ್ಸ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಸ್ಟಮ್ಸ್ ಌಕ್ಟ್​ನಡಿಯಲ್ಲಿ ಈ ಸಂಬಂಧ ಐವರನ್ನ ಬಂಧಿಸಲಾಗಿದೆ. ಇವರೆಲ್ಲಾ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಚಿನ್ನ ಸರಬರಾಜು …

Read More »

ಪಾನ್​ಕಾರ್ಡ್ ಮಾಹಿತಿ ಕೊಡದ ಶಾಸಕರು, ಸಂಸದರು ಎಷ್ಟು ಮಂದಿ ಗೊತ್ತಾ?

ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಸಲ್ಲಿಸುವ ಅಫಿಡವಿಟ್​ನಲ್ಲಿ ದೇಶದ 7 ಜನ ಸಂಸದರು ಹಾಗೂ 199 ಜನ ಶಾಸಕರು ಪಾನ್​ಕಾರ್ಡ್ ವಿವರಗಳನ್ನ ನೀಡಿಲ್ಲ ಅಂತಾ ಎಡಿಆರ್​​ ಸಂಸ್ಥೆ ಮಾಹಿತಿ ಬಿಡುಗಡೆ ಮಾಡಿದೆ. ಈ ಮಾಹಿತಿ ಪ್ರಕಾರ ಪಾನ್​ಕಾರ್ಡ್​​ ವಿವರ ಸಲ್ಲಿಸದೇ ಇರುವ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಇರುವುದು ಕಾಂಗ್ರೆಸ್​ ಪಕ್ಷದವರು.ಅಸೋಸಿಯೇಶನ್ ಫಾರ್​​ ಡೆಮಾಕ್ರೆಟಿಕ್​​​ ರಿಫಾರ್ಮ್ಸ್​​ ಮತ್ತು ನ್ಯಾಷನಲ್​ ಎಲೆಕ್ಷನ್​ ವಾಚ್​ ಸಂಸ್ಥೆಗಳು ನಡೆಸಿದ್ದ ಸಮೀಕ್ಷೆಯಿಂದ ಈ ಬಗ್ಗೆ ತಿಳಿದುಬಂದಿದೆ. 542 …

Read More »

ಪ್ರಧಾನಿ ಪಟ್ಟ ಬೇಕಿಲ್ಲ, ಮೋದಿ ವಿರುದ್ಧ ನಾವೆಲ್ಲ. ಒಂದಾಗೋಣ..’

ನವದೆಹಲಿ: ಕೇಂದ್ರ ಸರ್ಕಾರ ಆಂಧ್ರ ಸರ್ಕಾರವನ್ನು ಮುಳುಗಿಸಲು ಯತ್ನಿಸುತ್ತಿದೆ ಅಂತ ಮೊನ್ನೆಯಷ್ಟೆ ಸಿಎಂ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ಹರಿಹಾಯ್ದಿದ್ದರು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರದ ವಿರುದ್ಧ ಹೊಸ ತಂಡವನ್ನ ಕಟ್ಟಲು ಮುಂದಾಗಿದ್ದಾರೆ.ನಿನ್ನೆ ದೆಹಲಿಯಲ್ಲಿ ಆಮ್​ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​​, ಬಿಎಸ್​ಪಿ ನಾಯಕಿ ಮಾಯಾವತಿ, ಎಲ್​ಜೆಡಿ ಮುಖಂಡ ಶರದ್​ ಯಾದವ್​ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾರನ್ನ ಚಂದ್ರಬಾಬು …

Read More »

ದಾವೂದ್​ ಸೋದರನಿಗೆ ಹೈಫೈ ಸೌಲಭ್ಯ ಕೊಟ್ಟಿದ್ದಕ್ಕೆ ಐವರು ಪೊಲೀಸರು ಅಮಾನತು..

ಮುಂಬೈ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಸಹೋದರ ಇಕ್ಬಾಲ್​ ಕಸ್ಕರ್​ನಿಗೆ ಜೈಲಿನಲ್ಲಿ ವಿಐಪಿ ಸೌಲಭ್ಯಗಳನ್ನ ನೀಡಿದ್ದ ಆರೋಪದಡಿ ಐವರು ಪೊಲೀಸ್​ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ.ಸುಲಿಗೆ ಪ್ರಕರಣವೊಂದರಲ್ಲಿ ಥಾಣೆ ಜೈಲು ಸೇರಿದ್ದ ಇಕ್ಬಾಲ್​​ ಕಸ್ಕರ್​, ಜೈಲಿನಲ್ಲೇ ವೆರೈಟಿ ಬಿರಿಯಾನಿ ತಿನ್ನುತ್ತಿರುವ ಹಾಗೂ ಪೊಲೀಸ್ರ ಜೊತೆಯಲ್ಲಿ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ವೈರಲ್​ ಆಗಿದ್ದವು. ಈ ಹಿನ್ನೆಲೆ ತನಿಖೆ ನಡೆಸಿದ ಥಾಣೆ ಪೊಲೀಸ್​ ಆಯುಕ್ತ ವಿವೇಕ್​ ಫನ್ಸಾಲ್ಕರ್​, ಜೈಲಿನಲ್ಲಿ ಕಸ್ಕರ್​ಗೆ ವಿಶೇಷ ಸೌಲಭ್ಯ ಒದಗಿಸಿದ್ದ, …

Read More »