Breaking News

ಬೆಂಗಳೂರಲ್ಲಿ ಪೊಲೀಸ್​ ಮೇಲೆ ಮಾರಣಾಂತಿಕ ಹಲ್ಲೆ, ನಡುರಸ್ತೆಯಲ್ಲೇ ಅಟ್ಯಾಕ್​

ಬೆಂಗಳೂರು: ಜನರಿಗೆ ರಕ್ಷಣೆ ನೀಡೋ ಖಾಕಿಗೇ ರಕ್ಷಣೆ ಇಲ್ವಾ? ಪೊಲೀಸ್​ ಕಾನ್ಸ್​​ಟೇಬಲ್​​ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರೋ ಘಟನೆ ಮೇಕ್ರಿ ಸರ್ಕಲ್​ ಬಳಿ ನಡೆದಿದೆ. ನಡು ರಸ್ತೆಯಲ್ಲೇ ಪೊಲೀಸ್​​ ಅಧಿಕಾರಿಗೆ ಟೂಲ್ಸ್​ನಿಂದ ಮನಬಂದಂತೆ ಹಲ್ಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಡಿಜೆ ಹಳ್ಳಿ ಠಾಣೆ ಕಾನ್ಸ್‌ಟೇಬಲ್ ವಿಜಯ್ ರಾಥೋಡ್ ಹಲ್ಲೆಗೆ ಒಳಗಾಗಿದ್ದಾರೆ. ಕಾನ್ಸ್‌ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ಮೇಖ್ರಿ ಸರ್ಕಲ್ ಬಳಿ ನಡುರಸ್ತೆಯಲ್ಲಿ ನಡೆದಿದೆ. ಡಿಜೆ ಹಳ್ಳಿ ಠಾಣೆ ಕಾನ್ಸ್‌ಟೇಬಲ್ ವಿಜಯ್ ರಾಥೋಡ್ ಮೇಲೆ ಹಲ್ಲೆ ನಡೆಸಿದ್ದು, ಆರೋಪಿ ಎಸ್ಕೇಪ್​ ಆಗಿದ್ದಾರೆ. ಕಾನ್ಸ್‌ಟೇಬಲ್ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಆರ್​ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಆರ್ ಟಿ ನಗರ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *