Breaking News

ಧಾರವಾಡ

ಗಾಂಧೀಜಿ ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಎನ್.ಹೆಚ್.ಕೋನರಡ್ಡಿ

ನವಲಗುಂದ: ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಹ್ಮಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬೆಳಗಾವಿ ಅಧಿವೇಶನಕ್ಕೆ ನೂರ ವರ್ಷಗಳ ಸಂಭ್ರಮ ಆಚರಿಸುವ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಗಾಂಧಿ ಜಯಂತಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿರ್ದೇಶನದಂತೆ ಆಚರಿಸಿ ಗಾಂಧೀಜಿ ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಶಾಸಕ ಎನ್.ಹೆಚ್.ಕೋನರಡ್ಡಿ ಕರೆ ನೀಡಿದರು. ಪಟ್ಟಣದ ಗಣೇಶ ದೇವಸ್ಥಾನದಿಂದ ಗಾಂಧಿ ನಡಿಗೆ ಪ್ರಾರಂಭವಾಗಿ ಗಾಂಧಿ ಮಾರ್ಕೆಟ್, ಲಿಂಗರಾಜ್ ಸರ್ಕಲ್, ಶಿಕ್ಷಕರ …

Read More »

ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಜಿಲ್ಲಾ ಪ್ರವಾಸ

ಧಾರವಾಡ : ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಅಕ್ಟೋಬರ್ 2 ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 2 ರಂದು ಬೆಳಿಗ್ಗೆ 7. 35 ಗಂಟೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ ಅವರು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮತ್ತು ಅವರು ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Read More »

ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

ಧಾರವಾಡ: ಮಹಾತ್ಮ ಗಾಂಧಿ ಅವರ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

Read More »

ನಿಗದಿ ಗ್ರಾಮದ ರೈತರ ಹೊಲದಲ್ಲಿ ಪತ್ತೆಯಾದ ಬೃಹತ್ ಗಾತ್ರದ ಹೆಬ್ಬಾವು

ಧಾರವಾಡ: ತಾಲೂಕಿನ ನಿಗದಿ ಗ್ರಾಮದ ರೈತರ ಕಬ್ಬಿನ ಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಮರಳಿ ಅರಣ್ಯಕ್ಕೆ ಬಿಡಲಾಗಿದೆ. ನಿಗದಿ ಗ್ರಾಮದ ರೈತ ಸಿದ್ಧಬಸಪ್ಪ ಹಳಿಯಾಳ ಎಂಬ ರೈತ ಅಂಬ್ಲಿಕೊಪ್ಪ ಗ್ರಾಮದ ಹದ್ದಿನಲ್ಲಿ ಕಬ್ಬಿನ ಜಮೀನು ಹೊಂದಿದ್ದು, ಕಬ್ಬಿನ ಸೋಗೆ ಸುಲಿಯುವ ಸಂದರ್ಭದಲ್ಲಿ ಈ ಹೆಬ್ಬಾವು ರೈತನ ಕಣ್ಣಿಗೆ ಬಿದ್ದಿದೆ. ಕೂಡಲೇ ಈ ಮಾಹಿತಿಯನ್ನು ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರ ಗಮನಕ್ಕೆ ತಂದಾಗ …

Read More »

ಶಾಲೆಯ ಎರಡು ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ ಜೋಶಿ

ಧಾರವಾಡ: ಕಲಘಟಗಿ ತಾಲೂಕಿನ ಮುರಕಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭೂಮಿಪೂಜೆ ನೆರವೇರಿಸಿದರು. ಎರಡು ಕೊಠಡಿ ನಿರ್ಮಾಣಕ್ಕೆ 29 ಲಕ್ಷ ರೂಪಾಯಿ ಸಿಎಸ್‌ಆ‌ರ್ ಅನುದಾನ ದೊರೆತಿದ್ದು, ಆ ಅನುದಾನದಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ಮುರಕಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು. ಮುರಕಟ್ಟಿ ಗ್ರಾಮದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ …

Read More »

ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು : ಪ್ರಸಾದ್‌ ಅಬ್ಬಯ್ಯ

ಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯುತ್ತಮ ಹಾಗೂ ಮಾದರಿಯಾದಂತಹ ಬಡಾವಣೆ ನಿರ್ಮಿಸಲು ದೂರದೃಷ್ಟಿಯನ್ನು ಇಟ್ಟುಕೊಳ್ಳಲಾಗಿತ್ತು. ಆ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆದಿವೆ. ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ್‌ ಅಬ್ಬಯ್ಯ ಹೇಳಿದ್ದಾರೆ. ಇಂದು ಮಂಟೂರು ರಸ್ತೆಯಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ 1300 ಮನೆಗಳನ್ನು ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು. ಈ ಭಾಗದಲ್ಲಿ ಅದರಲ್ಲೂ ಕೊಳಚೆ ಪ್ರದೇಶದಲ್ಲಿ ಹೆಚ್ಚಿನ ಜನರು …

Read More »

ಹೆಸರು ಖರೀದಿ ಕೇಂದ್ರ ತೆರೆದ ಸದುಪಯೋಗ ಆಗಬೇಕು : ಎಂ.ಆರ್.ಪಾಟೀಲ್

ಕುಂದಗೋಳ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರೆದ ಸದುಪಯೋಗ ಆಗಬೇಕು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಬೆಳೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡದೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು. ಅವರು ಯಲಿವಾಳ ಗ್ರಾಮದಲ್ಲಿ ಹೆಸರು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಬಳಿಕ ತಹಶೀಲ್ದಾ‌ರ್ ರಾಜು ಮಾವರಕರ ಮಾತನಾಡಿ ಹೆಸರು ಖರೀದಿ ಕೇಂದ್ರದ ನಂತರದಲ್ಲಿ ಉದ್ದು, ಸೋಯಾಬಿನ್ ಖರೀದಿ ಸಹ ಆರಂಭವಾಗಲಿದೆ …

Read More »

ಬಡ್ಡಿ ಕಿರುಕುಳ : ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ

ಧಾರವಾಡ: ಗೊಲ್ಲರ ಕಾಲೊನಿಯ ನಜೀರಸಾಬ್‌ ಅತ್ತಾರ (68) ಎಂಬ ವ್ಯಕ್ತಿಯೇ ಬಡ್ಡಿ ಕಿರುಕುಳದಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾರೆ. ನಜೀರಸಾಬ್‌ ಚುರುಮುರಿ ವ್ಯಾಪಾರಸ್ಥರು. ಖಾಸಗಿ ವ್ಯಕ್ತಿ ಕಡೆಯಿಂದ 1.20 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಪ್ರತಿಯಾಗಿ ನಜೀರ್‌ಸಾಬ್ ಕಳೆದ ಎರಡು ವರ್ಷಗಳಿಂದ 2.50 ಲಕ್ಷ ರೂಪಾಯಿ ಬಡ್ಡಿಯನ್ನೇ ಕಟ್ಟಿದ್ದರು. ಕಳೆದ ಎರಡು ತಿಂಗಳಿನಿಂದ ಬಡ್ಡಿ ಕಟ್ಟಿಲ್ಲ ಎಂದು ಆ ಖಾಸಗಿ ವ್ಯಕ್ತಿ …

Read More »

ಮುರುಘಾಮಠಕ್ಕೆ ನಮಸ್ಕರಿಸಲೆಂದು ಬಂದ ಯುವಕರು ಹಣ‌ ಕದ್ದು ಪರಾರಿ

ಧಾರವಾಡ: ಮುರುಘಾಮಠಕ್ಕೆ ನಮಸ್ಕರಿಸಲೆಂದು ಬರುತ್ತಿದ್ದ ಇಬ್ಬರು ಬಾಲಕರು ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕದ್ದು ಪರಾರಿಯಾಗುತ್ತಿದ್ದರು.ಈ ದೃಶ್ಯವನ್ನು ಇಂದು ಸಿಸಿಟಿವಿಯಲ್ಲಿ ಗಮನಿಸಿದ ಮಠದ ಸಿಬ್ಬಂದಿ ಹಾಗೂ ಸಾರ್ವಜನಿಕರು, ಆ ಬಾಲಕರನ್ನು ಹಿಡಿದು ಅವರ ಬಟ್ಟೆ ಬಿಚ್ಚಿಸಿ ಬುದ್ಧಿವಾದ ಹೇಳಿದ್ದಾರೆ. ಪ್ರತಿದಿನ ನಮಸ್ಕಾರ ಮಾಡಲೆಂದು ಈ ಬಾಲಕರು ಬರುತ್ತಿದ್ದರು. ವಾಪಸ್ ಹೋಗುವಾಗ ಹುಂಡಿಯಲ್ಲಿ ಹಣ ಕದ್ದು ಪರಾರಿಯಾಗುತ್ತಿದ್ದರು. ಕಳೆದ ಎರಡು ವರ್ಷದಿಂದ ಇವರು ಆಗಾಗ ಮಠಕ್ಕೆ ಬಂದು ಕಳ್ಳತನ ಮಾಡುತ್ತಿದ್ದರು. ಹಾಗೂ ಮಠದ …

Read More »

ಸಿದ್ದರಾಮಯ್ಯನವರ ಮೇಲೆ ಎಫ್ ಐ ಆರ್ ಆಗಿದೆ : ಜೋಶಿ

ಹುಬ್ಬಳ್ಳಿ: ಸಿದ್ದರಾಮಯ್ಯನವರ ಮೇಲೆ ಎಫ್ ಐ ಆರ್ ಆಗಿದೆ. ಆದರೆ ಅರೆಸ್ಟ್ ಮಾಡುವ ವಿಷಯ ಲಾ ಎನ್ಫೋರ್ಸ್ಕೆಂಟ್ ಗೆ ಬಿಟ್ಟಿದ್ದು. ಆದರೆ ನಾವು ಕಾನೂನು ರೀತಿಯಲ್ಲಿ ಹಾಗೂ ಪಕ್ಷದಿಂದ ತಾರ್ಕಿಕ ಅಂತ್ಯದವರೆಗೂ ಹೋರಾಟ ಮಾಡುತ್ತೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೈ ಕೋರ್ಟ್ ಆದೇಶ ಬಂದ ಮೇಲೆಯೂ ಕೂಡ ಕುರ್ಚಿಗೆ ಅಂಟಿಕೊಂಡು ಕುಳಿತುಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಹೈ ಕಮಾಂಡ್ ವೈಫಲ್ಯವನ್ನು …

Read More »