Breaking News

ಧಾರವಾಡ

ತಾಲೂಕು ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನ

ನವಲಗುಂದ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪಟ್ಟಣದ ಪಿ ಎಲ್ ಡಿ ಬ್ಯಾಂಕ್‌ ಹಾಲ್‌ನಲ್ಲಿ ನವಲಗುಂದ ತಾಲೂಕು ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನ ನಡೆಯಿತು ಇದೇ ಸಂದರ್ಭದಲ್ಲಿ ಸಮಿತಿ ರಚನೆ ಮಾಡಲಾಯಿತು. ಸಂಘಟನೆಯ ಧಾರವಾಡ ಜಿಲ್ಲಾ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿದರು.ತಾಲೂಕುಮಟ್ಟದ ಆಶಾ ಕಾರ್ಯಕರ್ತೆಯರ ಸಮಿತಿಯ ಅಧ್ಯಕ್ಷರಾಗಿ ಸರೋಜಾ ಮಡಿವಾಳರ, ಉಪಾಧ್ಯಕ್ಷರಾಗಿ ರೇಣುಕಾ ಬೋಗಾರ್, ರೇಣುಕಾ ಹಣಸಿ, ರೇಣುಕಾ ಕುಂಬಾರ, ವಿಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು.

Read More »

ಪ್ರತಿಭಾ ಕಾರಂಜಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

2024-2025 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಆ‌ರ್ ಎಲ್ ಎಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಧಾರ್ಮಿಕ ಪಠಣ, ಕನ್ನಡ ಪ್ರಬಂಧ ಸ್ಪರ್ಧೆ, ಕನ್ನಡ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಕ್ಲಸ್ಟರ್ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿತು.

Read More »

ಕುಂದಗೋಳದಲ್ಲಿ ರೇಬಿಸ್ ಲಸಿಕೆ ಕಾರ್ಯಕ್ರಮ

ಕುಂದಗೋಳ : ಇಂದಿನಿಂದ ಸೆ.13 ವರೆಗ ಕುಂದಗೋಳ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ರೇಬಿಸ್ ಪ್ರತಿಬಂಧಕ ಲಸಿಕಾ ಕಾರ್ಯಕ್ರಮ ಆರಂಭವಾಗಿದೆ. ಕುಂದಗೋಳ ನಗರ ಮತ್ತು ತಾಲೂಕಿನ ಹಳ್ಳಿಯ ಜನತೆ ಸಾಕು ಪ್ರಾಣಿಗಳ ಪ್ರೀಯರು ತಮ್ಮ ಶ್ವಾನಗಳಿಗೆ ರೇಬಿಸ್ ಲಸಿಕೆ ಹಾಕಿಸಲು ತಿಳಿಸಲಾಗಿದೆ.

Read More »

ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಜನರಿಗೆ ಸಕಾಲಕ್ಕೆ ಸೀಗಲು ಪಾರದರ್ಶಕ, ಜನಸ್ನೇಹಿ ಮತ್ತು ಸರಳ ಆಡಳಿತ ಇರಬೇಕು: ಆ.ಸು.ಆ. ಅಧ್ಯಕ್ಷ ಆರ್.ವಿ.ದೇಶಪಾಂಡೆ

ಧಾರವಾಡ: ಆಡಳಿತದಲ್ಲಿ ಸರಳತೆ ಮತ್ತು ಜನಸ್ನೇಹಿ ಆಗಿದ್ದಾಗ ಮಾತ್ರ ಸರಕಾರದ ಜನಕಲ್ಯಾಣ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳು ಅರ್ಹರಿಗೆ ತಲುಪಲು ಸಾಧ್ಯವಾಗುತ್ತದೆ. ಆಡಳಿತದಲ್ಲಿ ಸುಧಾರಣೆಯೊಂದಿಗೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅಗತ್ಯವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜಿಲ್ಲಾಮಟ್ಟದ ಅಧಿಕಾರಿಗಳ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಮತ್ತು ಸಲಹೆ …

Read More »

ಜಿಲ್ಲಾ ಕೌಶಲ್ಯ ಸಮಿತಿ ಸಭೆ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ: ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ

ಧಾರವಾಡ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳೊಂದಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆಯು ಜರುಗಿತು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಸೂಚಿಸಿದರು. 2024 ರಲ್ಲಿ ಪದವಿ ಪಾಸಾದ, ಡಿಪ್ಲೋಮಾ ವಿದ್ಯಾರ್ಥಿಗಳು ಎನ್‍ಎಡಿ ದಲ್ಲಿ ನೋಂದಣೆ ಮಾಡಿಕೊಳ್ಳಲು ಹೆಚ್ಚು …

Read More »

ಹಿರಿಯ ವೈದ್ಯ ಡಾ.ಎಸ್.ಎಂ.ಕಗ್ಗಲಗೌಡರ ಸೇವಾ ಪದೋನ್ನತಿ ಮತ್ತು ವರ್ಗಾವಣೆ

ಕುಂದಗೋಳ : ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಮತ್ತು ಹಿರಿಯ ವೈದ್ಯ ಡಾ.ಎಸ್.ಎಂ.ಕಗ್ಗಲಗೌಡರ ಸೇವಾ ಪದೋನ್ನತಿ ಮತ್ತು ವರ್ಗಾವಣೆ ಏಕೆ ಕಾಲಕ್ಕೆ ಲಭಿಸಿದೆ. ಹುಬ್ಬಳ್ಳಿ ಪಟ್ಟಣದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಕಿಮ್ಸ್ ಆವರಣದ, ಪ್ರಾಂಶುಪಾಲರ ಹುದ್ದೆಗೆ ಡಾ.ಎಸ್.ಎಂ. ಕಗ್ಗಲಗೌಡರ ಪದೋನ್ನತಿ ಮತ್ತು ವರ್ಗಾವಣೆ ಆಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೆಪ್ಟೆಂಬ‌ರ್ 03.2024 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ವಿಷಯ ತಿಳಿಸಲಾಗಿದೆ.

Read More »

ಸಿಎಂ ಗೆ ಕ್ಷಮೆಯಾಚಿಸಿದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ

ಧಾರವಾಡ : ಜಿಂದಾಲ್ ಕಂಪೆನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು ಅದೇನು ಸಿದ್ದರಾಮಯ್ಯನವರ ಅಪ್ಪನ ಮನೆ ಆಸ್ತಿನಾ ಎಂಬ ತಮ್ಮ ಹೇಳಿಕೆ ಕುರಿತು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಷಮೆ ಕೇಳಿದ್ದಾರೆ. ಜಿಂದಾಲ್ ಕಂಪೆನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು “ಇದೇನು ನಿಮ್ಮ ಅಪ್ಪನ ಮನೆ ಆಸ್ತಿನಾ” ಎಂಬ ಹೇಳಿಕೆಯ ಬಗೆಗೆ ಮುಖ್ಯಮಂತ್ರಿಗಳಿಗೆ ಲಿಖಿತ ಪತ್ರ ಬರೆದು ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ. ಕಳೆದ ಆ.24 …

Read More »

ವಲಯಮಟ್ಟದ ಕ್ರೀಡಾಕೂಟದಲ್ಲಿ ಕೋನರಡ್ಡಿ ಭಾಗಿ

ಅಣ್ಣಿಗೇರಿ: ತಾಲೂಕಿನ ಕೊಂಡಿಕೊಪ್ಪ ಗ್ರಾಮದ ಶ್ರೀ ಗೊವಿಂದಗೌಡ ಬ ಭರಮಗೌಡ್ರ ಸರಕಾರಿ ಪ್ರೌಡ ಶಾಲೆಯಲ್ಲಿ ನಡೆದ ವಲಯಮಟ್ಟದ ಕ್ರೀಡಾಕೂಟದ ಉದ್ಘಾಟನೆಯನ್ನು ಸಸ್ಕ ಎನ್ ಹೆಚ್ ಕೊನರಡ್ಡಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ವೆಂಕಮ್ಮ ಮಾಡೂಳ್ಳಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷ ರಮೇಶ ಸಂಗಳದ, ಮಲ್ಲಿಕಾರ್ಜುನ ಶೇಷನಗೌಡ್ರ, ಧರ್ಮಗೌಡ ಭರಮಗೌಡ್ರ, ಪ್ರಮುಖರಾದ ವಿ.ಡಿ.ಅಂದಾನಿಗೌಡರ ದೇವಕ್ಕ ಕುರಿ, ಸದಸ್ಯರಾದ ಗಿರೀಶ ಕಿರೇಸೂರ, ಮಾಬುಸಾಬ ನಾಗಾವಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮುದ್ದು ವಿದ್ಯಾರ್ಥಿಗಳು …

Read More »

ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ವಾರ್ಡ ನಂಬರ್ 23ರ ಯಾಲಕ್ಕಿ ಶೆಟ್ಟ‌ರ್ ಕಾಲೋನಿ ಹಾಗೂ ಅಂಬೇಡ್ಕರ ನಗರದಲ್ಲಿ ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಬಿಜೆಪಿ ಮುಖಂಡ ಸಂಜಯ ಕಪಟಕರ, ಕರಿಯಪ್ಪ ಸುಣ್ಣಗಾರ ಸೇರಿದಂತೆ ಹಲವರು

Read More »

ಜೋಶಿ, ಎಂ. ಆರ್ ಪಾಟೀಲ್ ಗೆ ಸನ್ಮಾನಿಸಿ ಗೌರವ ಸಲ್ಲಿಕೆ

ಕುಂದಗೋಳ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕುಂದಗೋಳ ತಾಲೂಕಿನ ಶಾಸಕ ಎಂ. ಆರ್ ಪಾಟೀಲ್ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನ ಮಾಡಿ ಗೌರವಿಸಿದರು. ನಂತರ ಕುಂದಗೋಳ ತಾಲೂಕಿನ ಅಭಿವೃದ್ಧಿ ಶ್ರಮಿಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಿನ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಇತರರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Read More »