Breaking News

ಧಾರವಾಡ

ಇಂದು ಮಾನಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮ

ಕುಂದಗೋಳ : ತಾಲೂಕಿನ ಗುಡಗೇರಿ ಗ್ರಾಮದ ಶ್ರೀ 1008 ಶಾಂತಿನಾಥ ಸ್ವಾಮಿ ಜೈನ್ ಟ್ರಸ್ಟ್ ವತಿಯಿಂದ ನೂತನ ಮಾನಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮ ನಾಳೆ ನವೆಂಬ‌ರ್ 8ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ್ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪೂರದ ಲಕ್ಷ್ಮೀ ಸೇನ್ ಭಟ್ಟಾರಕ ಸ್ವಾಮೀಜಿ ಆಗಮಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಸಮಾಜದ ಶ್ರಾವಕ ಶ್ರಾವಕಿಯರು ಪಾಲ್ಗೊಳ್ಳಬೇಕೆಂದು ಸಮಿತಿಯ ಅಧ್ಯಕ್ಷ ದಯಾನಂದ ಕಂದೂರ ಪ್ರಕಟಣೆಗೆ ತಿಳಿಸಿದ್ದಾರೆ.

Read More »

ವಿಶೇಷ ಅಲಂಕಾರಗೊಳಿಸಿದ ಛತ್ರಪತಿ ಶಿವಾಜಿ ಮಹಾರಾಜ ಆತನ ರಾಯಗಡ ಕೋಟೆ

ಕುಂದಗೋಳ : ಛತ್ರಪತಿ ಶಿವಾಜಿ ಮಹಾರಾಜ ಆತನ ರಾಯಗಡ ಕೋಟೆ ಇತಿಹಾಸ ಸಾರುವ ಅದೇ ಮಾದರಿಯ ಕೋಟೆಯೊಂದನ್ನ ಇಲ್ಲೊಂದು ಕುಟುಂಬದ ಪುಟಾಣಿಗಳು ತಯಾರಿ ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಯುದ್ಧದ ವಿಜಯದ ಸಂಕೇತವಾಗಿ ಕುಂದಗೋಳ ಪಟ್ಟಣದ ಮರಾಠಾ ಸಮಾಜದವರು ದೀಪಾವಳಿ ಹಬ್ಬದಿಂದ ಗೌರಿ ಹುಣ್ಣಿಮೆವರೆಗೆ ಛತ್ರಪತಿ ಶಿವಾಜಿ ಮಹಾರಾಜ ಕೋಟೆಯನ್ನು ಅಲಂಕಾರಿಕ ವಸ್ತುಗಳಿಂದ ನಿರ್ಮಿಸಿ ಪೂಜೆ ಮಾಡುತ್ತಾರೆ. ಅದರಂತೆ ಕುಂದಗೋಳ ಪಟ್ಟಣದ ಕೈರಾಯಿ ಕುಟುಂಬದ ಭರತ್, ಶರತ್, ಮಾರ್ತಾಂಡ ಎಂಬ …

Read More »

ದೊಡ್ಡಹಳ್ಳಕ್ಕೆ ಸೇತುವೆ ಲೋಕಾರ್ಪಣೆ ಮಾಡಿದ ಕೋನರಡ್ಡಿ

ಹುಬ್ಬಳ್ಳಿ : ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಹತ್ತಿರ ಇರುವ ದೊಡ್ಡಹಳ್ಳಕ್ಕೆ ಸೇತುವೆ ಲೋಕಾರ್ಪಣೆಯನ್ನು ನಿನ್ನೆ ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಮಾಡಿದರು. ನಂತರ ಮಾತಾನಾಡಿದ ಅವರು, ಬ್ಯಾಹಟ್ಟಿ-ಕಿರೆಸೂರ-ಇಂಗಳಹಳ್ಳಿ ರಸ್ತೆಯಲ್ಲಿ ಗ್ರಾಮದ ರೈತರೆಲ್ಲರೂ ತಮ್ಮ ಜಮೀನುಗಳಿಗೆ ಹೋಗಿ ಬರಲು ಮಳೆ ಬಂದಾಗ ಹಳ್ಳ ಕಟ್ಟಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಸೇತುವೆ ನಿರ್ಮಾಣಕ್ಕಾಗಿ ಕಳೆದ 10-15 ವರ್ಷಗಳಿಂದ ಗ್ರಾಮಸ್ಥರು ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದರು ಎಂದರು.

Read More »

ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಪತ್ರ ವಿತರಣೆ

ನವಲಗುಂದ: ನಗರದ ಅಣ್ಣಿಗೇರಿ ರಸ್ತೆಯಲ್ಲಿ ಇರುವ ಆಶ್ರಯ ಬಡಾವಣೆಯಲ್ಲಿ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಲು ಆಶ್ರಯ ಯೋಜನೆಯಡಿ ಹಕ್ಕುಪತ್ರ ಪಡೆದಂತಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಶಿವಾನಂದ ತಡಸಿ, ಶ್ರೀ ಜೀವನ ಪವಾರ, ಅಪ್ಪಣ್ಣ ಹಳ್ಳದ, ಮೋದಿನ ಶಿರೂರ, ಮಂಜುನಾಥ ಜಾಧವ, ಹನುಮಂತ ವಾಲಿಕರ, ಬಾಬಾಜಾನ ಮಕಾನದಾರ, ಆಶ್ರಯ ಸಮಿತಿ ಸದಸ್ಯರಾದ ಮದರಸಾಬ ಉಗುರಗೋಳ ಸೇರಿದಂತೆ ಇನ್ನು ಮುಂತಾದವರು …

Read More »

ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ

ನವಲಗುಂದ: ಅಂಗವಿಕಲರನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವಲ್ಲಿ ಆರೈಕೆದಾರರ ಪಾತ್ರ ಮಹತ್ವದ್ದಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗವಿಕಲರ ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಅವರ ಸಾಧನೆ ಆರೋಗ್ಯವಂತರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿದೇವಿ ಪಾಟೀಲ ಮಾತನಾಡಿ, ಅಂಗವಿಕಲ ಮಕ್ಕಳ …

Read More »

ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ

ನವಲಗುಂದ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಶಿಶು ಅಭಿವೃದ್ಧಿ ಯೋಜನೆ, ತಾಲೂಕಾ ಕಾನೂನು ಸೇವಾ ಸಮೀತಿ ಹಾಗೂ ತಾಲೂಕಾ ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ನ.5 ರಂದು ಜನಿಸಿದ ಹೆಣ್ಣು ಮಕ್ಕಳ ತಾಯಂದಿರಿಗೆ ಪ್ರೋತ್ಸಾಹ ನೀಡಲು ಹಾಗೂ ಅವರ ರಕ್ಷಣೆ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮ ಹಿರಿಯ ದಿವಾಣಿ ನ್ಯಾಯಾಧಿಶರಾದ ಮಂಜುನಾಥ ಪಾನಘಂಟಿ ಅವರು ಭಾಗಿಯಾಗಿದ್ದರು. ಇದೆ ವೇಳೆ …

Read More »

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ-ನಂತರದ ವಿದ್ಯಾರ್ಥಿಗಳ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ಅವಧಿ ನ.10 ರವರೆಗೆ ವಿಸ್ತರಣೆ

ಧಾರವಾಡ : 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, ವೃತ್ತಿ ಪರ ಪದವಿ ಹಾಗೂ ವೃತ್ತಿ ಪರ ಸ್ನಾತಕೋತ್ತರ ಪದವಿಗಳ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ …

Read More »

ಟ್ರ್ಯಾಕ್ಟ‌ರ್ ಮೇಲೆ ಹತ್ತಿ ಆಟ ಆಡುತ್ತಿದ್ದ ಬಾಲಕ ಸಾವು

ನವಲಗುಂದ : ದೀಪಾವಳಿ ಹಬ್ಬದ ಪ್ರಯುಕ್ತ ಮನೆಯಲ್ಲಿ ವಾಹನ ಪೂಜೆಗೆಂದು ಟ್ರ್ಯಾಕ್ಟರನ್ನು ತಯಾರಿ ಮಾಡುತ್ತಿರುವಾಗ ಟ್ರ್ಯಾಕ್ಟ‌ರ್ ಮೇಲೆ ಹತ್ತಿ ಆಟ ಆಡುತ್ತಿರುವಾಗ ಆಕಸ್ಮಿಕವಾಗಿ ಮೂರು ವರ್ಷದ ಬಾಲಕ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಣ್ಣಿಗೇರಿ ತಾಲೂಕಿನ ನಾವಳ್ಳಿ ಗ್ರಾಮದ ಅಗಸ್ಯ ಪ್ರವೀಣ ಮಣಕವಾಡ(3) ಈತನು ಶುಕ್ರವಾರದಂದು ದೀಪಾವಳಿ ಹಬ್ಬಕ್ಕಾಗಿ ಟ್ರ್ಯಾಕ್ಟರನ್ನು ಶೃಂಗರಿಸುವ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಯ ಎಡಭಾಗದಲ್ಲಿ ಭಾರಿ …

Read More »

ನ. 6 ರಿಂದ ಹತ್ತಿ ಖರೀದಿ ಪ್ರಾರಂಭ

ಅಣ್ಣಿಗೇರಿ: ಭಾರತೀಯ ಹತ್ತಿ ನಿಗಮದಿಂದ ನವಂಬ‌ರ್ 6 ರಿಂದ ಹತ್ತಿ ಖರೀದಿ ಮಾಡಲಾಗುವುದು ಎಂದು ಭಾರತೀಯ ಹತ್ತಿ ನಿಗಮದ ಅಧಿಕಾರಿ ಜಿ ರಮೇಶ್ ಅವರು ಹೇಳಿದರು. ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ಪ್ರತಿ ಕ್ವಿಂಟಲ್ ಗೆ ರೂ. 7521 ನಿಗದಿ ಮಾಡಿದ್ದು, ರೈತರು ಉತಾರ ಹಾಗೂ ಮೊಬೈಲ್ ಸಂಖ್ಯೆ ಜೋಡಿನೆ ಆಗಿರುವ ಆಧಾರ್‌ ತರಬೇಕು ಹಾಗೂ ಒಂದು ವಾರದ ಒಳಗೆ ಖಾತೆಗೆ …

Read More »

ಗ್ರಾಪಂ ನೂತನ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ

ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಪಂ ನೂತನ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ಎನ್. ಎಚ್. ಕೋರನರಡ್ಡಿ ಉದ್ಘಾಟಿಸಿದರು. ಈ ವೇಳೆ ತಹಶೀಲ್ದಾರ ಸುಧೀರ ಸಾವಕಾರ, ತಾಪಂ ಇಓ ಭಾಗ್ಯಶ್ರೀ ಜಾಗೀರದಾರ, ಲೋಕೋಪಯೋಗಿ ಎಇಇ ಎಸ್‌.ಎನ್‌. ಸಿದ್ದಾಪೂರ, ಪಿ.ಆರ್.ಇ.ಡಿ. ಎಇಇ ಎಂ.ಜಿ. ಶಿಂಧೆ, ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸದಸ್ಯರುಗಳು ಇದ್ದರು.

Read More »