Breaking News

ಧಾರವಾಡ

ಐಐಟಿಯ ಕುರಿತು ವಿಡಿಯೋ ಸಂದೇಶ ನೀಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ

ಧಾರವಾಡ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ಧಾರವಾಡಕ್ಕೆ ಐಐಟಿ ಮಂಜೂರಾಗಿತ್ತು. ಇದು ಧಾರವಾಡದಲ್ಲಿ ಸ್ಥಾಪನೆಯಾಗಬೇಕು ಎಂದು ಭದ್ರ ಬುನಾದಿ ಹಾಕಿದ್ದೇ ಕಾಂಗ್ರೆಸ್ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ವೀಡಿಯೋ ಸಂದೇಶವೊಂದನ್ನು ಹರಿಬಿಟ್ಟಿರುವ ಮಾಜಿ ಸಚಿವರು, ವಿದ್ಯಾಕಾಶಿ ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ಐಐಟಿಯನ್ನು ಕರ್ನಾಟಕಕ್ಕೆ ಕೊಟ್ಟ ವೇಳೆ ಇದು ರಾಯಚೂರಿಗೆ ಹೋಗಬೇಕು ಎಂದು ಚರ್ಚೆಗಳಾಗಿದ್ದವು. ಆಗ ನಾವೆಲ್ಲರೂ ಒಂದಾಗಿ ಹೋಗಿ ಈ …

Read More »

ರಂಗ ಪಂಚಮಿ ಹಿನ್ನಲೆಯಲ್ಲಿ ನಿಷೇಧಾಜ್ಞೆ ಮಧ್ಯ ಮಾರಾಟ..

ಹುಬ್ಬಳ್ಳಿ ನಗರದಲ್ಲಿ ರಂಗ ಪಂಚಮಿ ಹಿನ್ನಲೆಯಲ್ಲಿ ಮಾನ್ಯ ಪೊಲೀಸ್ ಆಯುಕ್ತರು ಮಧ್ಯ ಮಾರಾಟ ನಿಷೇಧಾಜ್ಞೆ ಹೊರಡಿಸಿದ್ದರು. ನಿಷೇಧಾಜ್ಞೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದಾಗ, ಹುಬ್ಬಳ್ಳಿ ನಗರದ ಕಸಬ ಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ನೇಕಾರ ನಗರದಲ್ಲಿ ಅಂಬಿಕಾ ಸಾವಜಿ ಖಾನಾವಳಿಯಲ್ಲಿ ಅಕ್ರಮವಾಗಿ ಯಾವುದೇ ಲೈಸೆನ್ಸ್ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟದಲ್ಲಿ ತೊಡಗಿದ್ದು ಕಂಡು ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ್ ಬಸವ ಮತ್ತು ಕಾಶೀನಾಥ್ …

Read More »

ಸಂಸದ ಧೃವನಾರಾಯಣ್ ಅವರ ಅಗಲಿಕೆಗೆ ಭಾವುಕರಾದ ಸಿಎಂ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಮಾಜಿ ಸಂಸದ ಧೃವನಾರಾಯಣ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿದೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಚಿಂತನೆಯಲ್ಲಿ ಸಾಮ್ಯ ಧೃವ ನಾರಾಯಣ್ ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ವಿರೋಧ ಪಕ್ಷದಲ್ಲಿದ್ದರೂ ಕೂಡ ರಾಜ್ಯದ ಅಭಿವೃದ್ಧಿಯಲ್ಲಿ ಸಾಕಷ್ಟು ಬಾರಿ ಮುಕ್ತವಾಗಿ ಚರ್ಚೆ ಮಾಡಿದ್ದೆವು. ಅವರ ಚಿಂತನೆ ಮತ್ತು ನಮ್ಮ ಚಿಂತನೆಯಲ್ಲಿ ಸಾಮ್ಯವಿತ್ತು. ಎರಡು ಬಾರಿ ಶಾಸಕರಾಗಿ ಹಾಗೂ ಸಂಸದರಾಗಿದ್ದ ಅವರು ಈ ರಾಜ್ಯದ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಿಧಿವಶ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೃದಯಾಘಾತದಿಂದ ವಿಧಿವಶರಾಗಿದ್ದು ವಿಧಾನ ಸಭಾ ಚುನಾವಣೆ ಆರಂಭವಾಗುವ ಹೊತ್ತಲ್ಲೇ ಕಾಂಗ್ರೆಸ್ ಗೆ ಆಘಾತವಾಗಿದೆ. ಧ್ರುವನಾರಾಯಣ ಅವರಿಗೆ ಇದ್ದಕ್ಕಿದ್ದಂತೆ ರಕ್ತವಾಂತಿ ಆರಂಭವಾದ ಕಾರಣ ತೀವ್ರ ರಕ್ತಸ್ರಾವದಿಂದ ಕೋಮಾಸ್ಥಿತಿ ತಲುಪಿದ್ದರು ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಧ್ರುವನಾರಾಯಣ ಅವರು ತೀವ್ರ ರಕ್ತಸ್ರಾವದಿಂದ  ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ಡಾ.ಮಂಜುನಾಥ್ ತಿಳಿಸಿದ್ದಾರೆ. ಧ್ರುವನಾರಾಯಣ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. …

Read More »

ಹೋಳಿ ಹಬ್ಬದ ನಿಮಿತ್ತ ಚಿಗರಿ ಬಸ್ ಬಂದ್

ಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ನಗರದಲ್ಲಿ ಹೋಳಿ ಹಬ್ಬ ಇರುವುದರಿಂದ ಅಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಬಿಆರ್ ಟಿಎಸ್ ಬಸ್ ಗಳ ಕಾರ್ಯಾಚರಣೆ ಇರುವುದಿಲ್ಲ. ಬಣ್ಣದ ಕಾರ್ಯಕ್ರಮ ಮುಗಿದ ಬಳಿಕ ಬಿಆರ್ ಟಿಎಸ್ ಬಸ್ ಗಳನ್ನು ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಕಾರ್ಯಾಚರಣೆ ಮಾಡಲಾಗುವುದು. ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಧಾರವಾಡ ನಾನ್ ಬಿಆರ್ ಟಿಎಸ್ ಬಸ್ ಗಳಲ್ಲಿ ಬಿಆರ್ ಟಿಎಸ್ ಮಾಸಿಕ ಪಾಸ್ ಸ್ಮಾರ್ಟ್ …

Read More »

ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಮೋದಿ ಆಗಮನ

ಮಾರ್ಚ್ 12ರಂದು ಮಂಡ್ಯ ಜಿಲ್ಲೆಗೆ ಪ್ರಧಾನಮಂತ್ರಿಗಳು ಆಗಮಿಸಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ದಶಪಥ ರಸ್ತೆಯಾದ ಬೆಂಗಳೂರು- ಮೈಸೂರು ಎಕ್ಸಪ್ರೆಸ್ ವೇ ಅನ್ನು ಉದ್ಘಾಟಿಸಲಿದ್ದಾರೆ. ಬಳಿಕ ಮಂಡ್ಯ ಜಿಲ್ಲೆ ಮದ್ದೂರು ಸಮೀಪದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಆಗಮನದ ಹಿನ್ನಲೆಯಲ್ಲಿ ಸಕ್ಕರೆ ನಾಡು ಮಂಡ್ಯ ಕೇಸರಿಮಯವಾಗಿದ್ದು, ಮಂಡ್ಯ ನಗರದಲ್ಲಿ ಮೋದಿಯವರು ರೋಡ್ ಶೋ ನಡೆಸಿದ್ದಾರೆ.

Read More »

ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ ನರ್ಸ್‌

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನೊರ್ವ ಪತಲಿ ಕಮರಿಯಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ,ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿ ನಿನ್ನೆ ತಾನೇ ರೀಲ್ಸ್ ಮಾಡಲು ಹೋಗಿ ವೈರಲ್ ಆಗಿದ್ದರು. ಇಂದು ನರ್ಸ್ “ನಂದೇ ಈ ಸ್ವತ್ತು ಬಿಟ್ಟುಇರಲಾರೆ” ರೀಲ್ಸ್ ಮಾಡಿ ವೈರಲ್ ಆಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಮುಂದೆಯೇ ರೀಲ್ಸ್ ಮಾಡಿದ ನರ್ಸ್‌ ರೇಣುಕಾ ಸುಂಕದ ವಿರುದ್ದ ನೆಟ್ಟಿಗರ ಆಕ್ರೋಶ. ವೈದ್ಯ …

Read More »

ಹುಬ್ಬಳ್ಳಿ: ಕೆರೆಯಲ್ಲಿ ಯುವಕನ ಶವ ಪತ್ತೆ, ಕೊಲೆಯೋ ಅಥವಾ ಆತ್ಮಹತ್ಯೆಯೋ ?

ಹುಬ್ಬಳ್ಳಿ: ತಾಲೂಕಿನ ಗಾಮಣಗಟ್ಟಿ ಗ್ರಾಮದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ, ಮೃತ ಯುವಕನ ಹೆಸರು ಸದ್ದಾಂ ಸವಾಂತನವರ್ ಎಂದು ತಿಳಿದುಬಂದಿದೆ. ಮೃತ ಯುವಕ ಮೂರು ದಿನದಿಂದ ನಾಪತ್ತೆಯಾಗಿದ್ದು ಇವತ್ತು ಶವವಾಗಿ ಪತ್ತಯಾಗಿದ್ದಾನೆ, ಇದು ಆತ್ಮಹತ್ಯೆಯೋ ಅಥವಾ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಸಂಬಂಧ ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More »

ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ
ನೀಡಿರುವುದು ಸ್ವಾಹತಾರ್ಹ : ಶಾಸಕ ಅಮೃತ ದೇಸಾಯಿ.

ಧಾರವಾಡ : ನೆನೆಗುದಿಗೆ ಬಿದ್ದಿರುವ ಯೋಜನೆಗೆ ಅನುಮೋದನೆ ನೀಡಿರುವುದು ಕೇಂದ್ರ ಸರಕಾರಕ್ಕೆ ಉತ್ತರ ಕರ್ನಾಟಕದ ಜನರ ಬಗೆಗಿನ ಕಾಳಜಿ ಬಿಂಬಿಸುತ್ತದೆ. ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿ, ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರಸಿಂಗ ಶೇಖಾವತ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಶಾಸಕ ಅಮೃತ ದೇಸಾಯಿತಿಳಿಸಿದ್ದರು. ಕಳಸಾ ಬಂಡೂರಿ ಯೋಜನೆಯ ಅನುಮೋದನೆಯ ವಿಸ್ತೃತ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ನೀರಾವರಿ …

Read More »

ಆಭರಣದ ಹಾವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಧಾರವಾಡ: ತಲೆಯ ಮೇಲೆ ಗಂಟಿನಾಕಾರದ ಗಾಯದಿಂದ ಬಳಲುತ್ತಿದ್ದ ಆಭರಣದ ಹಾವಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಹಾವಿಗೆ ಮರು ಜನ್ಮ ನೀಡಿದ್ದಾರೆ. ಧಾರವಾಡದ ಅಣ್ಣಿಗೇರಿ ಕಾಲೇಜು ಬಳಿ ಈ ಆಭರಣದ ಹಾವು ಕಾಣಿಸಿಕೊಂಡಿತ್ತು. ಉರಗ ತಜ್ಞ ಸೋಮಶೇಖರ ಚೆನ್ನಶೆಟ್ಟಿ ಅವರು, ಈ ಹಾವನ್ನು ರಕ್ಷಣೆ ಮಾಡಿದ್ದರು. ಆದರೆ, ಈ ಹಾವಿನ ತಲೆಯ ಮೇಲೆ ಗಂಟಿನಾಕಾರದ ಗಾಯವಾಗಿದ್ದನ್ನು ಕಂಡ ಸೋಮಶೇಖರ ಅವರು, ಆ ಹಾವನ್ನು ಕೃಷಿ …

Read More »