Breaking News

ಆಭರಣದ ಹಾವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಧಾರವಾಡ: ತಲೆಯ ಮೇಲೆ ಗಂಟಿನಾಕಾರದ ಗಾಯದಿಂದ ಬಳಲುತ್ತಿದ್ದ ಆಭರಣದ ಹಾವಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಹಾವಿಗೆ ಮರು ಜನ್ಮ ನೀಡಿದ್ದಾರೆ.

ಧಾರವಾಡದ ಅಣ್ಣಿಗೇರಿ ಕಾಲೇಜು ಬಳಿ ಈ ಆಭರಣದ ಹಾವು ಕಾಣಿಸಿಕೊಂಡಿತ್ತು. ಉರಗ ತಜ್ಞ ಸೋಮಶೇಖರ ಚೆನ್ನಶೆಟ್ಟಿ ಅವರು, ಈ ಹಾವನ್ನು ರಕ್ಷಣೆ ಮಾಡಿದ್ದರು. ಆದರೆ, ಈ ಹಾವಿನ ತಲೆಯ ಮೇಲೆ ಗಂಟಿನಾಕಾರದ ಗಾಯವಾಗಿದ್ದನ್ನು ಕಂಡ ಸೋಮಶೇಖರ ಅವರು, ಆ ಹಾವನ್ನು ಕೃಷಿ ವಿಶ್ವವಿದ್ಯಾಲಯದ ವೈದ್ಯರ ಬಳಿ ತೆಗೆದುಕೊಂಡು ಹೋಗಿ ಅದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ವೈದ್ಯರು ಆ ಹಾವಿನ ತಲೆಯ ಮೇಲಿದ್ದ ಗಂಟನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಹಾವು, ಪ್ರಾಣಾಪಾಯದಿಂದ ಪಾರಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *