Breaking News

ಧಾರವಾಡ

ಕುಡಿಯುವ ನೀರು ಪೂರೈಸದ ಹಿನ್ನಲೆ ವಿಭಿನ್ನ ಪ್ರತಿಭಟನೆ

ಧಾರವಾಡ : ಕಳೆದ 10 ದಿನಗಳಿಂದ ಕುಡಿಯುವ ನೀರು ಪೂರೈಸದ ಹಿನ್ನೆಲೆಯಲ್ಲಿ ಸಾಧನಕೇರಿ ಸೇರಿದಂತೆ ವಿವಿಧ ಏರಿಯಾ ನಿವಾಸಿಗಳು ಗೋವಾ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಎಲ್‌ ಆ್ಯಂಡ್ ಟಿ ಕಂಪನಿಗೆ ಜಲಮಂಡಳಿ ನಿರ್ವಹಣೆ ಜವಾಬ್ದಾರಿ ವಹಿಸಿದಾಗಿನಿಂದ ಹುಬ್ಬಳ್ಳಿ, ಧಾರವಾಡ ಅವಳಿನಗರದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಎಲ್ ಆ್ಯಂಡ್ ಟಿ ಕಂಪೆನಿ ವಿರುದ್ಧ ಧಿಕ್ಕಾರ ಕೂಗಿದರು. ಮಹಾನಗರ ಪಾಲಿಕೆ ಕೂಡಲೇ ಕುಡಿಯುವ …

Read More »

ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ: ನೀರಲಕೇರಿ

ಧಾರವಾಡ: ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಸಂದರ್ಭದಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಕರ್ನಾಟಕ ಶುಷ್ರ್ರೂಷಕರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ, ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಆಪಾದಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕಳೆದ ದಿ.೧೭ ರಿಂದ ಒಟ್ಟು ೧೦ ದಿನಗಳಲ್ಲಿ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು. ಆರೋಗ್ಯ ಇಲಾಖೆಯಲ್ಲಿ ಒಟ್ಟು ೧೦೪೮ ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿಗೆ ಡಿ.೧೭ ರಂದು ಅಧಿಸೂಚನೆ ಹೊರಡಿಸಿ …

Read More »

ಕುಂದಗೋಳ ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ

ಧಾರವಾಡ : ತಾಲೂಕಿನ ಕುಂದಗೋಳ ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ದಾಸ ಶ್ರೇಷ್ಠ ಕನಕ ದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಸಂಶಿ ಗ್ರಾಮದಲ್ಲಿರುವ ಶ್ರೀ ಕರಿ ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಶಾಸಕರಾದ ಕುಸುಮಾ ಶಿವಳ್ಳಿ, ಮಾಜಿ ಶಾಸಕ ಕೋನರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್ ಹಾಜರಿದ್ದರು.

Read More »

ಪಾಕಿಸ್ತಾನದ ಧ್ವಜ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು

ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ಕೊಟ್ಟ ಪಾಕಿಸ್ತಾನದ ಸಚಿವ ಭಿಲಾವಲ್ ಭುಟ್ಟೋ ಅವರ ವಿರುದ್ಧ ಧಾರವಾಡದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧಾರವಾಡದ ವಿವೇಕಾನಂದ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಭುಟ್ಟೋ ಹಾಗೂ ಪಾಕಿಸ್ತಾನ ಧ್ವಜದ ಪೋಸ್ಟರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಇನ್ನೂ ಜೀವಂತವಾಗಿದ್ದಾನೆ ಎಂಬ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಭುಟ್ಟೋ ನೀಡಿದ್ದು, …

Read More »

ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ: ಡಿಕೆಶಿ ಹೇಳಿಕೆಗೆ ಮುತಾಲಿಕ್ ಪ್ರತಿಕ್ರಿಯೆ

ಧಾರವಾಡ : ಶ್ರೀರಾಮಸೇನೆ ಸಂಘಟನೆ ಇದನ್ನು ವಿರೋಧ ಮಾಡುತ್ತವೆ. ಟೆರರಿಸ್ಟ ಪೂರಕವಾಗಿ ಹೇಳಿಕೆ ಕೊಟ್ಟಿದ್ದು ಅಕ್ಷಮ್ಯ ಅಪರಾಧವಾಗಿದೆ.‌ಮುಸ್ಲಿಂ ವೋಟಿಗಾಗಿ ಕಾಂಗ್ರೆಸ್ ತುಷ್ಟೀಕರಣ ಮಾಡಿದ‌ ಪರಿಣಾಮ ಇಡೀ ದೇಶದಲ್ಲಿ ಕಸದ ಬುಟ್ಟಿಯಲ್ಲಿ ಬಿದ್ದಿದೆ ಎಂದು ಕುಕ್ಕರ್ ಬಾಂಬ್ ಬ್ಲಾಸ್ಟ್ ಕುರಿತು ಡಿಕೆಶಿ‌ ಹೇಳಿದ ವಿಚಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾತನಾಡಿದ ಅವರು, ಆದರೂ‌ ಇವರಿಗೆ ಬುದ್ಧಿ ಬಂದಿಲ್ಲಾ. ಕಾಂಗ್ರೆಸ್ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ‌ ಕೊಡೋದು ಸರಿಯಲ್ಲ. ಟೆರರಿಸ್ಟ್ …

Read More »

ತಡಕೋಡ ಗ್ರಾಮದಲ್ಲಿ ಬಸ್‌ಗೆ ಆಗ್ರಹಿಸಿ ಪ್ರತಿಭಟನೆ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಧಾರವಾಡ: ತಾಲೂಕಿನ ತಡಕೋಡ ಗ್ರಾಮದಲ್ಲಿ ಬಸ್ಸಿಗಾಗಿ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆಗಿಳಿದಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಬಾರದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲೇ ಟೈರ್‌ಗೆ ಬೆಂಕಿ ಹಚ್ಚಿ ಕೆಎಸ್‌ಆರ್‌ಟಿಸಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ದಿನನಿತ್ಯ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯವಿಲ್ಲದೇ ಪರದಾಡುವಂತಾಗಿದೆ. ಬಸ್ಸುಗಳಿದ್ದರೂ ಅವುಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಈ ಸಮಸ್ಯೆಯನ್ನು ಹಲವು ಬಾರಿ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ ಎಂದು ಆಕ್ರೋಶಗೊಂಡ ಸ್ಥಳೀಯರು ಟೈರ್‌ಗೆ …

Read More »

ವಿದ್ಯಾರ್ಥಿಗೆ ಹಾರ್ಟ್ ಅಟ್ಯಾಕ್”; ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಮಕ್ತುಂ

! ಕಲಘಟಗಿ :ಪಟ್ಟಣದ ಸರಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಇಂದು ಮುಂಜಾನೆ ವಿದ್ಯಾರ್ಥಿ ಕ್ಲಾಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯಾರ್ಥಿ ಮುಕ್ತುಂ ಮಹ್ಮದರಫಿ ಮನಿಯಾರ ಎಂದು ತಿಳಿದುಬಂದಿದ್ದು ನಾಲ್ಕನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ ವಿದ್ಯಾರ್ಥಿ ಕಲಘಟಗಿ ನಿವಾಸಿಯಾಗಿದ್ದು ಬಾಲಕನಿಗೆ ಮುಂಚೆಯೇ ಹೃದಯದಲ್ಲಿ ತೊಂದರೆ ಇರುವುದು ತಿಳಿದು ಬಂದಿದೆ.ಇಂದು ಮುಂಜಾನೆ ಎಂದಿನಂತೆ ಶಾಲೆಗೆ ಬಂದಿದ್ದು ಕ್ಲಾಸಿನಲ್ಲಿ ಕುಸಿದು ಬಿದ್ದಿದ್ದಾನೆ ನಂತರ ಶಿಕ್ಷಕರು ಕೂಡಲೆ ಅವನನ್ನು ಸ್ಥಳೀಯ ಸರಕಾರಿ …

Read More »

ಬೈಕ್‌ನಿಂದ‌ ಇಳಿಯುವಾಗ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಂದ ಕೀಚಕರು

ಧಾರವಾಡ : ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಘಟನೆ ನಡೆದಿದೆ. ಧಾರವಾಡ ಸಾಮಾನ್ಯವಾಗಿ ನಾವು ನೀವು ಇತ್ತಿಚಿನ ದಿನಗಳಲ್ಲಿ ಕೊಲೆಗಳು ಚಿಕ್ಕ‌ ಚಿಕ್ಕ ವಿಷಯಕ್ಕೆ ಕೊಲೆ ಆಗುತ್ತಿವೆ ಎಂಬುದನ್ನ ನೋಡಿದ್ದೇವೆ ಖಂಡಿದ್ದೇವೆ. ಸಿಗರೇಟ್ ವಿಚಾರವಾಗಿ, ಅನೇಕ ವಿಚಾರವಾಗಿ, ಕೇವಲ ಹತ್ತು ರೂಪಾಯಿ ಕೊಡುವುದರ ವಿಚಾರವಾಗಿ ಹಲ್ಲೆ ಮಾಡಿ‌ ಕೊಲೆಗಳು ಆಗಿವೆ. ಆದರೆ ವಿದ್ಯಾಕಾಶಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಕೇವಲ ಬೈಕ್ ನಿಂದ ಇಳಿಯುವಾಗ ನೋಡಿಕೊಂಡು …

Read More »

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ಧಾರವಾಡ: ಕೃಷಿ ಸಾಲಕ್ಕೆ ಹೆದರಿದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಯರಿಹಕ್ಕಲ ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತ ಬ್ಯಾಂಕ್ ಆಫ್ ಬರೋಡಾದಲ್ಲಿ ಕೃಷಿ ಸಾಲ ಸೇರಿದಂತೆ ಬೇರೆಯವರ ಬಳಿಯೂ ಕೈಗಡ ಸಾಲ ಮಾಡಿದ್ದ. ಎರಡು ಎಕರೆ ಜಮೀನು ಹೊಂದಿರುವ ಇತ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮೀಣ ಪೊಲೀಸ್ ಠಾಣಾ …

Read More »

ಧಾರವಾಡದಲ್ಲಿ ಗಮನಸೆಳೆದ ಎಮ್ಮೆ ಓಡಿಸುವ ಸ್ಪರ್ಧೆ

ಧಾರವಾಡ: ಮನರಂಜನೆಗಾಗಿ ಟಗರಿನ ಕಾಳಗ, ಚಕ್ಕಡಿ ಓಡಿಸುವ ಸ್ಪರ್ಧೆ ಹೀಗೆ ಅನೇಕ ಸ್ಪರ್ಧೆಗಳನ್ನು ಅಲ್ಲಲ್ಲಿ ಆಯೋಜನೆ ಮಾಡಲಾಗಿರುತ್ತದೆ. ಆದರೆ ಧಾರವಾಡದಲ್ಲಿ ವಿಭಿನ್ನವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿತ್ತು. ಅದುವೇ ಎಮ್ಮೆ ಓಡಿಸುವ ಸ್ಪರ್ಧೆ. ಎಮ್ಮೆ ಎಂದರೆ ಕೇವಲ ಎಮ್ಮೆ ಓಡಿಸುವ ಸ್ಪರ್ಧೆಯಲ್ಲ. ಬೈಕ್ ಹಿಂದೆ ಎಮ್ಮೆ ಬೆನ್ನಟ್ಟಿಸಿಕೊಂಡು ಓಡಿಸುವ ಸ್ಪರ್ಧೆಯನ್ನು ಧಾರವಾಡದ ಗೌಳಿಗಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಗೌಳಿಗಲ್ಲಿಯ ಸಾಯಿ ನಗರ ಹನುಮಂತನಗರದ ಹತ್ತಿರ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕರು ತಮ್ಮ ಎಮ್ಮೆಗಳ ಸಮೇತ …

Read More »