Shaikh BigTv
October 26, 2024
Breaking News, ಧಾರವಾಡ
ಕಲಘಟಗಿ: ಕಲಘಟಗಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ ಎಪ್ಪತ್ತಕ್ಕೂ ಅಧಿಕ ಜನರು ವಾಂತಿಭೇದಿಯಿಂದ ಆಸ್ವಸ್ಥಗೊಂಡಿದ್ದು ಇಂದು ಜಿಲ್ಲಾಧಿಕಾರಿಗಳು ಮುತ್ತಗಿ ಗ್ರಾಮಕ್ಕೆ ಆಗಮಿಸಿ ಗ್ರಾಮದ ಒಣಿಗಳಲ್ಲಿ ಭೇಟಿ ನೀಡಿ ಸಾರ್ವಜನಿಕರಲ್ಲಿ ಮಾಹಿತಿ ಪಡೆದರು. ನಂತರ ಕಲಘಟಗಿ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ರೋಗಿಗಳ ಅರೋಗ್ಯ ವಿಚಾರಿಸಿದರು.
Read More »
Shaikh BigTv
October 25, 2024
Breaking News, ಧಾರವಾಡ
ಧಾರವಾಡ : ಬರುವ ನವೆಂಬರ ಹಾಗೂ ಡಿಸೆಂಬರ ತಿಂಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಆಗಿ ಮಾಡಲು ಕ್ರಮವಹಿಸಲಾಗುವುದು. ಮಾದಕವಸ್ತು ಮುಕ್ತ ಜಿಲ್ಲೆಗಾಗಿ ಶಾಲಾ ಕಾಲೇಜುಗಳಲ್ಲಿ ಒಂದು ತಿಂಗಳ ಪರಿಯಂತರ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾದಕವಸ್ತು ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತು ಜಿಲ್ಲಾ ಮಟ್ಟದ ವಿವಿಧ …
Read More »
Shaikh BigTv
October 25, 2024
Breaking News, ಧಾರವಾಡ
ಧಾರವಾಡ: ಭಾರತೀಯ ಸೇನೆಯಲ್ಲಿ ಸತತ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧರೊಬ್ಬರು ವಯೋಸಜಹ ಕಾಯಿಲೆಯಿಂದ ಅಸುನೀಗಿದ್ದು, ಅವರಿಗೆ ಇಡೀ ಗ್ರಾಮಸ್ಥರೆಲ್ಲ ಸೇರಿ ಗೌರವಪೂರ್ವಕ ವಿದಾಯ ಹೇಳಿದ್ದಾರೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯಲ್ಲಪ್ಪ ಭೋವಿ ಎಂಬುವವರೇ ತಮ್ಮ 77 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದವರು.ಯಲ್ಲಪ್ಪ ಅವರು ಭಾರತೀಯ ಸೇನೆ ಸೇರಿ ಸಧೀರ್ಘ 28 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿದ್ದರು. 1987 ರಲ್ಲಿ ಸೇನೆಯಿಂದ ನಿವೃತ್ತರಾಗಿ …
Read More »
Shaikh BigTv
October 25, 2024
Breaking News, ಧಾರವಾಡ
ನವಲಗುಂದ: ತಾಲೂಕು ಆಡಳಿತ ಅಧಿಕಾರಿಗಳು ಮನೆ ಬಿದ್ದು ಸಾವನ್ನಪ್ಪಿರುವ ಮಂಗಳಾ ಪಾಟೀಲ ಅವರ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲು ವಿಳಂಬ ಮಾಡಿದ್ದನ್ನು ಖಂಡಿಸಿ ಹಾಗೂ ಕೂಡಲೇ ಚೆಕ್ ನೀಡುವಂತೆ ಆಗ್ರಹಿಸಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕಾರ್ಯಕರ್ತರು ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು. ತಾಲೂಕಿನ ಹನಸಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆ ಬಿದ್ದು, ಸಾವನ್ನಪ್ಪಿರುವ ಮಂಗಳಾ ಪಾಟೀಲ ಕುಟುಂಬಕ್ಕೆ ಒಂದು ವಾರವಾದರೂ ಪರಿಹಾರ ನೀಡದೇ ಕುಂಟು ನೆಪ …
Read More »
Shaikh BigTv
October 25, 2024
Breaking News, ಧಾರವಾಡ
ಕಲಘಟಗಿ: ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ ಎಪ್ಪತ್ತಕ್ಕೂ ಅಧಿಕ ಜನರು ವಾಂತಿಭೇದಿಯಿಂದ ಆಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನಗಳಿಂದಲೂ ಗ್ರಾಮದ ಜನರು ವಾಂತಿಭೇದಿಯಿಂದ ಬಳಲುತ್ತಿದ್ದು, ಇಂದು ಸಾಯಂಕಾಲ ಹೆಚ್ಚಾದ ಕಾರಣ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಳವೆ ಬಾವಿಯಿಂದ ನೀರಿನ ಟ್ಯಾಂಕ್ ಗೆ ನೀರನ್ನು ಸಂಗ್ರಹ ಮಾಡಿ ನಂತರ ಗ್ರಾಮಸ್ಥರಿಗೆ ನೀರು ಬಿಡಲಾಗುತ್ತದೆ. ಆದರೆ, ಹಲವಾರು ವರ್ಷಗಳಿಂದ ನೀರಿನ ಟ್ಯಾಂಕ್ ನ್ನು ಸ್ವಚ್ಛತೆ ಮಾಡದೇ ಇರುವುದರಿಂದ ಈ …
Read More »
Shaikh BigTv
October 24, 2024
Breaking News, ಧಾರವಾಡ
ಕಲಘಟಗಿ: ಸಚಿವ ಸಂತೋಷ ಲಾಡ್ ಅವರಿಗೆ ರಾಜಕೀಯದಲ್ಲಿ ಮರುಜನ್ಮ ನೀಡಿದ ಕಲಘಟಗಿ ಮತಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆರೋಪಿಸಿದ್ದಾರೆ. ತಾಲೂಕಾನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾಳಾಗಿ ರೈತರು ಬೀದಿಪಾಲಾಗಿದ್ದಾರೆ. ಬ್ಯಾಂಕ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿಯಿಂದ ರೈತರ ಕುಟುಂಬಗಳು ತತ್ತರಿಸಿ ಹೋಗಿವೆ. ಅಷ್ಟೆ ಅಲ್ಲದೆ ಕಲಘಟಗಿ ತಾಲ್ಲೂಕಿನಾದ್ಯಂತ ಮಳೆಯ ಅವಾಂತರಕ್ಕೆ …
Read More »
Shaikh BigTv
October 24, 2024
Breaking News, ಧಾರವಾಡ
ಧಾರವಾಡ: ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಟಾಟಾ ಏಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕೆಲವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿ, ಧಾರವಾಡ ಬೈಪಾಸ್ ಬಳಿ ಇರುವ ಮಿಶ್ರಾ ಪೇಡಾದ ಹತ್ತಿರ ನಿನ್ನೆ ರಾತ್ರಿ ಸಂಭವಿಸಿದೆ. ಯಲ್ಲಮ್ಮನ ಗುಡ್ಡಕ್ಕೆ ಹೊರಟಿದ್ದ ಟಾಟಾ ಏಸ್ ವಾಹನವು ಮುಂದೆ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಾಟಾ ಏಸ್‌ನಲ್ಲಿ ಮೂರ್ನಾಲ್ಕು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ನಿನ್ನೆ ರಾತ್ರಿಯೇ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ …
Read More »
Shaikh BigTv
October 24, 2024
Breaking News, ಧಾರವಾಡ
ಧಾರವಾಡ : ದೇಶದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ. ಅವರ ಹೋರಾಟ, ಧೈರ್ಯ, ಸ್ಥೈರ್ಯ ಮತ್ತು ಸ್ವಾಭಿಮಾನಗಳು ಪ್ರತಿಯೊಬ್ಬ ಮಹಿಳೆಯಲ್ಲಿ ಇರಬೇಕು. ನಮ್ಮ ಹೆಣ್ಣುಮಕ್ಕಳಿಗೆ ರಾಣಿ ಚನ್ನಮ್ಮನ ಗುಣಗಳನ್ನು ಬೆಳೆಸಬೇಕು. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ಸ್ವಾಭಿಮಾನಿ ಕಿತ್ತೂರು ರಾಣಿ ಚನ್ನಮ್ಮ ಆದರ್ಶ ಪ್ರಾಯಳಾಗಿದ್ದು, ಅವರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಪ್ರೇರಕ ಶಕ್ತಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ …
Read More »
Shaikh BigTv
October 24, 2024
Breaking News, ಧಾರವಾಡ
ಧಾರವಾಡ: ಅಕ್ಟೋಬರ್ 25 ರಂದು ಧಾರವಾಡದಲ್ಲಿ ರಾಜ್ಯ ಸರಕಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿಗಣತಿ ಬಹಿರಂಗಪಡಿಸದೇ ಒಳಮೀಸಲಾತಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ. ಲಂಬಾಣಿ, ಕೊರಮ, ಕೊರಚ, ಭೋವಿ, ಒಡ್ಡರ ಸೇರಿದಂತೆ 99 ಜಾತಿಗಳ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
Read More »
Shaikh BigTv
October 23, 2024
Breaking News, ಧಾರವಾಡ
ಕುಂದಗೋಳ : ಬಸಾಪುರ ಗ್ರಾಮದ ಹತ್ತಿರ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನದ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒರ್ವ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ವಡ್ಡಿಕೊಪ್ಪ ಗ್ರಾಮದ ಸುರೇಶ ಬಸಪ್ಪ ಮ್ಯಾಗೇರಿ(45) ಮೃತಪಟ್ಟ ವ್ಯಕ್ತಿ . ಸವಣೂರ ತಾಲೂಕಿನ ವಡ್ಡಿಕೊಪ್ಪ ಗ್ರಾಮದಿಂದ 12 ಜನ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಕುಂದಗೋಳ ತಾಲೂಕಿನ ಸಂಶಿ ಹತ್ತಿರ ಶೇಂಗಾ ಬಣವಿ ಒಟ್ಟಲು ಹೊರಟ ಟಾಟಾ ಏಸ್ ವಾಹನ …
Read More »