Breaking News

ದೆಹಲಿ

ಗುಜರಾತ್​ ಹೈಕೋರ್ಟ್​ ನ್ಯಾಯಮೂರ್ತಿಯನ್ನು ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ ಮಾಡಲು ಶಿಫಾರಸು….

ದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್​ ಹೈಕೋರ್ಟ್​ ನ್ಯಾಯಮೂರ್ತಿ ಎಚ್​ ಎಂ ಪ್ರಚ್ಚಕ್​ ಅವರನ್ನು ‘ಉತ್ತಮ ನ್ಯಾಯ ನಿರ್ವಹಣೆ’ಗಾಗಿ ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​, ನೇತೃತ್ವದ ಸುಪ್ರೀಂ ಕೋರ್ಟ್​ ಕೊಲಿಜಿಯಂ ಶಿಫಾರಸು ಮಾಡಿದೆ. 2019 ರಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕುರಿತು …

Read More »

ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು ಭಾರತಕ್ಕೆ ಕಳವಳ…

ನವದೆಹಲಿ: ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಚೀನಾದ ಇಂಥದೇ ಹಡಗೊಂದು ಶ್ರೀಲಂಕಾ ಬಂದರಿನಲ್ಲಿ ಲಂಗರು ಹಾಕಿ ನಿಂತಿತ್ತು. ಈಗ ಅಂಥದೇ ಘಟನೆ ಮರುಕಳಿಸಿದೆ. ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ …

Read More »

ಆಪ್ ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಿಂದ ಅಮಾನತು…

ನವದೆಹಲಿ : ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರನ್ನು ಇಂದು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಅನುಮತಿ ಇಲ್ಲದೆ ನಾಲ್ವರು ಸಂಸದರ ಸಹಿಗಳನ್ನು ನಕಲು ಮಾಡಿದ ಆರೋಪದ ಹಿನ್ನೆಲೆ ರಾಘವ್ ಚಡ್ಡಾ ಅವರನ್ನು ಅಮಾನತು ಮಾಡಲಾಗಿದೆ. ಹಕ್ಕುಬಾಧ್ಯತಾ ಸಮಿತಿಯು ವರದಿ ಸಲ್ಲಿಸುವವರೆಗೆ ಸದನದಿಂದ ಅಮಾನತುಗೊಳಿಸಲಾಗಿದೆ. ಮುಂಗಾರು ಅಧಿವೇಶನದ ಕೊನೆಯ ದಿನ ಈ ಬೆಳವಣಿಗೆ ನಡೆದಿದೆ

Read More »

ಹೊರ ರಾಷ್ಟ್ರಗಳಲ್ಲೂ ದೊಡ್ಡ ಫ್ಯಾನ್ಸ್​ ಫಾಲೋವರ್ಸ್​ ಹೊಂದಿದ ವಿರಾಟ್​ ಕೊಹ್ಲಿ…

ನವದೆಹಲಿ: ಭಾರತದಲ್ಲಿ ಕ್ರಿಕೆಟ್‌ ಮತ್ತು ಅದನ್ನು ಆಡುವ ಆಟಗಾರರ ಬಗ್ಗೆ ಜನರಿಗೆ ಎಲ್ಲಿಲ್ಲದ ಕ್ರೇಜ್​. ಇದರಿಂದಾಗಿ ಕ್ರಿಕೆಟ್​ ಆಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಹಿಂಬಾಲಕರಿದ್ದಾರೆ. ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಕೋಟಿಗಟ್ಟಲೆ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇದರಿಂದ ಅವರು ಅಷ್ಟೇ ಸಂಪಾದನೆಯನ್ನೂ ಮಾಡುತ್ತಿದ್ದಾರೆ ಭಾರತ ತಂಡದ ಮಾಜಿ ನಾಯಕ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಆಟಗಾರ ವಿರಾಟ್​ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಭಾರತದಲ್ಲಿ ಅಷ್ಟೇ ಅಲ್ಲದೇ ಹೊರ ರಾಷ್ಟ್ರಗಳಲ್ಲೂ …

Read More »

ರಾಹುಲ್‌ ಫ್ಲೈಯಿಂಗ್‌ ಕಿಸ್‌ ಆರೋಪ; ಎನ್‌ಡಿಎ ಸಂಸದೆಯರಿಂದ ದೂರು

ನವದೆಹಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಫ್ಲೈಯಿಂಗ್‌ ಕಿಸ್‌ ನೀಡುವ ಮೂಲಕ ಅನುಚಿತ ವರ್ತನೆ ತೋರಿದ್ದಾರೆ ಎಂದು ಎನ್‌ಡಿಎ ಸಂಸದೆಯರು ಕಿಡಿಕಾರಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಎನ್‌ಡಿಎ ಮಹಿಳಾ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಲೋಕಸಭೆ ಅಧಿವೇಶನದಲ್ಲಿಂದು ರಾಹುಲ್ ಗಾಂಧಿ ಭಾಗಿಯಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸಂಸದರ ಹುದ್ದೆ …

Read More »

ಸಂಸತ್ ಇತಿಹಾಸದಲ್ಲೇ ಈ ರೀತಿ ಆಗಿಲ್ಲ: ರಾಹುಲ್ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ನವದೆಹಲಿ : ಸದನದಲ್ಲಿಂದು ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡುತ್ತಿದ್ದು, ಈ ಸಂಬಂಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫ್ಲೈಯಿಂಗ್ ಕಿಸ್ ನೀಡಿ ರಾಹುಲ್ ಸದನದಿಂದ ಹೊರನಡೆದಿದ್ದಾರೆ. ಇದು ಸಂಸದರ ಅನುಚಿತ ವರ್ತನೆ ಎಂದಿದ್ದಾರೆ. ಭಾರತದ ಸಂಸತ್ ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಇದು ಅನುಚಿತ ಮತ್ತು ಅಸಭ್ಯ ವರ್ತನೆಯಾಗಿದೆ. ಇದೆಂತ ವರ್ತನೆ..? …

Read More »

ಲೋಕಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ನವದೆಹಲಿ : ನಾನು ತುಂಬಾ ಜೋರಾಗಿ ಅದಾನಿ ವಿರುದ್ಧ ಮಾತನಾಡಿದ್ದೆ, ನಿಮ್ಮ ಹಿರಿಯ ನಾಯಕರಿಗೆ ಇದರಿಂದ ಕಷ್ಟವಾಗಿದೆ. ಇದರ ಕುರಿತು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ಬಿಜೆಪಿ ಸ್ನೇಹಿತರೆ ನೀವು ಹೆದರುವ ಅಗತ್ಯವಿಲ್ಲ ಯಾಕೆಂದರೆ ನನ್ನ ಭಾಷಣ ಅದಾನಿಯ ವಿರುದ್ಧ ಅಲ್ಲ ಎಂದು ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಅಬ್ಬರಿಸಿದ್ದಾರೆ. ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟ ಮಂಡಿಸಿರುವ ಅವಿಶ್ವಾಸ ನಿಲುವಳಿಯ ಮೇಲೆ ಮಾತನಾಡುತ್ತಿರುವ ಅವರು, ಈ ಬಾರಿಯ …

Read More »

ರಾಹುಲ್‌ ನೇತೃತ್ವದಲ್ಲಿ ಎರಡನೇ ಭಾರತ್‌ ಜೋಡೋ ಯಾತ್ರೆ ಫಿಕ್ಸ್‌

ನವದೆಹಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಗೆ ಸಜ್ಜಾಗಿದ್ದಾರೆ. ಈ ಬಾರಿ ಗುಜರಾತ್‌ನಿಂದ ಶುರುವಾಗಿ ಮೇಘಾಲಯದವರೆಗೆ ಈ ಯಾತ್ರೆ ಸಾಗಲಿದೆ ಈ ವಿಚಾರವನ್ನು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಖಚಿತಪಡಿಸಿದ್ದಾರೆ. ರಾಹುಲ್‌ ಗಾಂಧಿ ಮೊದಲ ಹಂತದಲ್ಲಿ ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗೆ ಭಾರತ್‌ ಜೋಡೋ ಯಾತ್ರೆ ನಡೆಸಿದ್ದರು. ಒಟ್ಟು ಹನ್ನೆರಡು ರಾಜ್ಯಗಳಲ್ಲಿ ಬರೋಬ್ಬರಿ ನಾಲ್ಕು ಸಾವಿರ ಕಿಲೋಮೀಟರ್‌ ಪಾದಯಾತ್ರೆಯನ್ನು ರಾಹುಲ್‌ ಮುನ್ನಡೆಸಿದ್ದರು. ಇದೀಗ ಭಾರತದ …

Read More »

ಸನ್‍ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ನೇಮಕ?

ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿ ಬ್ರಿಯಾನ್ ಲಾರಾ ಬದಲಿಗೆ ಡೇನಿಯಲ್ ವೆಟ್ಟೋರಿ ನೇಮಕಗೊಂಡಿದ್ದಾರೆ. ವೆಟ್ಟೋರಿ ಅವರು ಈ ಹಿಂದೆ 2014 ರಿಂದ 2018ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿದ್ದರು. ಪ್ರಸ್ತುತ ಆಸ್ಟ್ರೇಲಿಯಾ ಪುರುಷರ ತಂಡದೊಂದಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸನ್‍ರೈಸರ್ಸ್ ಆರು ಋತುಗಳಲ್ಲಿ ಟಾಮ್ ಮೂಡಿ (2019 ಮತ್ತು 2022), ಟ್ರೆವರ್ ಬೇಲಿಸ್ (2020 ಮತ್ತು 2021), ಮತ್ತು …

Read More »

ಪ್ರಧಾನಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ…

ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸತ್​ಗೆ ಆಗಮಿಸಿ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು. ಹೈಕಮಾಂಡ್​ ಬುಲಾವ್​ ಮೇರೆಗೆ ದಿಲ್ಲಿಯಲ್ಲಿರುವ ಸಿಎಂ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಗ್ಗೆ ಚರ್ಚಿಸಲು ಮೋದಿ ಅವರ ಭೇಟಿಗೆ ಅವಕಾಶ ಕೋರಿದ್ದರು. ಹೀಗಾಗಿ ಇಂದು ಬೆಳಗ್ಗೆ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿದ್ದು, ಸಂಸತ್ತಿನಲ್ಲಿನ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು. ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅನುದಾನ …

Read More »