Breaking News

ದೆಹಲಿ

ಎನ್​ಕೌಂಟರ್​: ಮೂವರ ಹತ್ಯೆ, ಮೂವರು ಗಂಭೀರ

ಉತ್ತರ ಪ್ರದೇಶ: ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಕ್ರಿಮಿನಲ್​​ಗಳನ್ನ ಮಟ್ಟಹಾಕಿರುವ ಘಟನೆ ಉತ್ತರಪ್ರದೇಶದ ಬಾಹಲ್ಪುರ್‌ದ ವೈಶಾಲಿ ನಗರದಲ್ಲಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಧಿಲೋನ್‌, ನಗರದಲ್ಲಿ ಕ್ರಿಮಿನಲ್ಸ್‌ ಇದ್ದರು ಎಂಬ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ. ಎನ್‌ಕೌಂಟರ್‌ನಲ್ಲಿ ಮೂವರು ಆರೋಪಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಮೂವರನನ್ನು ಬಂಧಿಸಲಾಗಿದೆ. ಎರಡು ಎಕೆ-47 ರೈಫಲ್‌ ಹಾಗೂ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

Read More »

ನರೇಂದ್ರ ಮೋದಿ ಬೆಂಬಲಿಗರನ್ನು ಮೂರ್ಖರು ಎಂದು ಕರೆದ ರಮ್ಯಾ..?

ನವದೆಹಲಿ: ವಿವಾದಾತ್ಮಕ ಟ್ವೀಟ್ ಮತ್ತು ನಡೆಗಳಿಂದ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳನ್ನು ಕೆರಳಿಸುವ ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.ಪ್ರಧಾನಿ ಮೋದಿ ಅವರ ಬೆಂಬಲಿಗರನ್ನು ‘ಮೂರ್ಖರು’ ಎಂದು ಲೇವಡಿ ಮಾಡುವ ಮೀಮ್ ಅನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಮ್ಯಾ ಅವರ ಟ್ವೀಟ್‌ಗೆ ಅಷ್ಟೇ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ದಾಂಡಿ ಸತ್ಯಾಗ್ರಹ, ಆರೆಸ್ಸೆಸ್ ಮತ್ತು ರಮ್ಯಾ …

Read More »

ವಿಮಾನ​​​ ದುರಂತ ಹಿನ್ನೆಲೆ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಹಾರಾಟ ಭಾರತದಲ್ಲಿ ಸ್ಥಗಿತ

ನವದೆಹಲಿ: ಇಥಿಯೋಪಿಯನ್​​ ಏರ್‌ಲೈನ್ಸ್‌ ದುರಂತದ ಬೆನ್ನಲ್ಲೇ ಭಾರತದಲ್ಲಿ, ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಸ್ಥಗಿತಗೊಳಿಸಿದೆ.ವಿಮಾನ ದುರಂತದಲ್ಲಿ ನಾಲ್ಕು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಹಾರಾಟ ನಿಲ್ಲಿಸಲು ನಿರ್ಧರಿಸಲಾಗಿದೆ.ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ವಿಶ್ವದಾದ್ಯಂತ ವಿಮಾನಯಾನ ತಯಾರಕರ ಜತೆ ನಿಕಟ ಸಂಪರ್ಕದಲ್ಲಿದ್ದು, ಅಗತ್ಯ ಮಾರ್ಪಾಡುಗಳು ಹಾಗೂ ಸುರಕ್ಷತಾ …

Read More »

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಯಾವುದೇ ಮೈತ್ರಿ ಇಲ್ಲ- ರಾಹುಲ್ ಗಾಂಧಿ

ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಮೈತ್ರಿ ವಿಚಾರಗಳ ಕುರಿತಾಗಿ ಹರಡಿದ್ದ ಎಲ್ಲ ಊಹಾಪೋಹಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೆರೆ ಎಳೆದಿದ್ದಾರೆ. ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ,ಆದ್ದರಿಂದ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲವೆಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.ಕಳೆದ ವಾರ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದ ಶೀಲಾ ದಿಕ್ಶಿತ ಇದುವರೆಗೆ ಯಾವುದೇ ಮೈತ್ರಿ ಇಲ್ಲವೆಂದು …

Read More »

ಉಗ್ರರ ವಿರುದ್ಧ ಭಾರತೀಯ ಸೇನೆಯ ಕ್ಷಿಪ್ರ ಕಾರ್ಯಚರಣೆ: 200-300 ಉಗ್ರರ ಖಲಾಸ್

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕಿಸ್ತಾನ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 21 ನಿಮಿಷಗಳ ಕಾಲ ಯಶಸ್ವಿ ಕಾರ್ಯಚರಣೆ ನಡೆಸಿದ ಭಾರತೀಯ ವಾಯುಪಡೆ 200-300 ಉಗ್ರರನ್ನು ಖಲಾಸ್ ಮಾಡಿದೆ.ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ‘ಏರ್ ಸ್ಟ್ರೈಕ್’ ನಡೆಸುವ ಮೂಲಕ ಬಾಂಬ್‌ಗಳ ಸುರಿಮಳೆಗರೆದ ಭಾರತೀಯ ಸೇನೆ, ಜೈಶ್-ಎ-ಮೊಹಮ್ಮದ್ …

Read More »

ಕಾಶ್ಮೀರ ಕುರಿತು ಪೋಸ್ಟ್​ ಮಾಡಿದ್ದಾಕ್ಕೆಗೆ ಅತ್ಯಾಚಾರದ ಬೆದರಿಕೆ..

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೈನಿಕರು ದಾಳಿಯ ಮಾಸ್ಟರ್​ಮೈಂಡ್​ನನ್ನೇ ಹತ್ಯೆಗೈದಿದ್ದಾರೆ. ಭಯೋತ್ಪಾದಕರ ಹೆಡೆಮುರಿಕಟ್ಟಲು ಇನ್ನೂ ಕಾರ್ಯಾಚರಣೆ ನಡೆಯುತ್ತಲೇ ಇದೆ. ಪಾಕಿಸ್ತಾನದ ಪರ ಪೋಸ್ಟ್​ ಹಾಕಿದವರನ್ನೂ ಕೂಡ ಪೊಲೀಸರು ಬಂಧಿಸುತ್ತಿದ್ದಾರೆ. ಈ ಮಧ್ಯೆ ಕಾಶ್ಮೀರ ಜನರ ಪರವಾಗಿ ಪೋಸ್ಟ್​ ಮಾಡಿದ್ದ ಯುವತಿಯೊಬ್ಬಳಿಗೆ ವ್ಯಕ್ತಿಯೊಬ್ಬ ಫೇಸ್​​ಬುಕ್​ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಕೊಲ್ಕತ್ತಾದ ಯುವತಿಯೊಬ್ಬಳು ತನ್ನ ಫೇಸ್​​ಬುಕ್​ ಪೇಜ್​ನಲ್ಲಿ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಮೋದಿ ಆಡಳಿತವನ್ನ ಟೀಕಿಸಿ ಪೋಸ್ಟ್​ ಮಾಡಿದ್ದಳು. ಯುವತಿಯ …

Read More »

ಚಾಲನೆ ನೀಡಿದ ಮರುದಿನವೇ ಕೈಕೊಟ್ಟ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು!

ನವದೆಹಲಿ, ಫೆಬ್ರವರಿ 16: ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಮರುದಿನವೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಕೈಕೊಟ್ಟಿದೆ. ಪ್ರಧಾನಿ ಮೋದಿಯಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆಮೊದಲ ಸಂಚಾರ ನಡೆಸಿದ್ದ ರೈಲು, ಶನಿವಾರ ಬೆಳಿಗ್ಗೆ ವಾರಣಾಸಿಯಿಂದ ದೆಹಲಿಗೆ ಮರಳುವ ವೇಳೆ ಕೆಟ್ಟುನಿಂತಿದೆ.ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಫೆ.15ರಂದು ಮೋದಿಯಿಂದ ಹಸಿರು ನಿಶಾನೆಉತ್ತರ ಪ್ರದೇಶದ ವಾರಣಾಸಿಯಿಂದ 18 ಕಿ.ಮೀ. ದೂರದಲ್ಲಿರುವ ತುಡ್ಲಾ ಜಂಕ್ಷನ್ …

Read More »

ಪುಲ್ವಾಮಾ ದಾಳಿ :ಯೋಧರ ಪಾರ್ಥಿವ ಶರೀರ ಹೊತ್ತ ರಾಜನಾಥ್ ಸಿಂಗ್…

ನವದೆಹಲಿ, ಫೆಬ್ರವರಿ 15: “ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೆ ಅದಕ್ಕಿಂತ ಹೆಚ್ಚು ಬೆಲೆ ತೆರುತ್ತೀರಿ” ಎಂದು ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರದಲ್ಲಿ ನಡೆದ ರಣಹೇಡಿಗಳ ಹೇಯಕೃತ್ಯದಿಂದ 44 ಸೈನಿಕರು ಹುತಾತ್ಮರಾಗಿದ್ದರು. ಸದ್ಯಕ್ಕೆ ಐವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆಯಾದರೂ, ಈ ಕೃತ್ಯ ಭಾರತದ ಇತಿಹಾಸದಲ್ಲೇ ಅತ್ಯಂತ ಹೇಯ ಎನ್ನಿಸಿದೆ.19 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ದಾಳಿಇಡೀ ದೇಶವೂ …

Read More »

ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೂ ದೊಡ್ಡ ಬೆಲೆ ತೆರುತ್ತೀರಿ: ಪಾಕ್‌ಗೆ ಮೋದಿ ಎಚ್ಚರಿಕೆ…

ನವದೆಹಲಿ, ಫೆಬ್ರವರಿ 15: ಪುಲ್ವಾಮಾದಲ್ಲಿ ನಡೆದ ಸೈನಿಕರ ಮೇಲಿನ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆಯೇ ಸಂಪುಟ ಸದಸ್ಯರ ಸಭೆ ನಡೆಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಚರ್ಚಿಸಿದರು.ಬಳಿಕ ವಂದೇ ಮಾತರಂ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?ನಮ್ಮ ಭದ್ರತಾ ಪಡೆಗಳಿಗೆ …

Read More »

ರಾಜಕೀಯ ಪಕ್ಷಗಳು ಇನ್ಮುಂದೆ ವಾಟ್ಸಪ್ ನ್ನು ದುರ್ಬಳಕೆ ಮಾಡುವಂತಿಲ್ಲ !

ನವದೆಹಲಿ: ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ ಮಾಡುವ ಚಿಂತನೆಯನ್ನು ವಾಟ್ಸಪ್ ನಡೆಸಿದೆ.ಈಗ ವಾಟ್ಸಪ್ ಕಮುನಿಕೆಶನ್ ಹೆಡ್ ಕಾರ್ಲ್ ವೂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ನಾವು ಈಗಾಗಲೇ ಹಲವು ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಾಟ್ಸಪ್ ನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ನೋಡಿದ್ದೇವೆ ಒಂದು ಇದು ಮುಂದು ವರೆದಲ್ಲಿ ನಾವು ಅಂತಹ …

Read More »