Breaking News

ಹುಬ್ಬಳ್ಳಿ-ಧಾರವಾಡ

ಹೆಚ್ಚುತ್ತಿರುವ ಅನಧಿಕೃತ ಖಾಸಗಿ ಶಾಲೆಗಳು

ಬೆಂಗಳೂರಿನ ಖಾಸಗಿ ಶಾಲೆಗಳು ಸಿಬಿಎಸ್‌ಇ ಬೋರ್ಡ್‌ಗೆ ಸಂಬಂಧಿಸಿವೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕದಲ್ಲಿ ಅನಧಿಕೃತ ಖಾಸಗಿ ಶಾಲೆಗಳನ್ನು ಗುರುತಿಸಲು ಬ್ಲಾಕ್ ಮಟ್ಟದ ಶಿಕ್ಷಣ ಅಧಿಕಾರಿಗಳಿಗೆ ರಾಜ್ಯಾದ್ಯಂತ ಸಮೀಕ್ಷೆಗೆ ಆದೇಶಿಸಿತ್ತು.ಸಮೀಕ್ಷೆ ನಡೆಸಿದಾಗ ರಾಜ್ಯದಲ್ಲಿ ಒಟ್ಟು 1,316 ಖಾಸಗಿ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಕಂಡುಬಂದಿದೆ.ಉಲ್ಲಂಘನೆಗಳಲ್ಲಿ ನೋಂದಣಿ ಇಲ್ಲದೆ ಶಾಲೆಗಳನ್ನು ನಡೆಸುವುದು, ಅನಧಿಕೃತ ಪಠ್ಯಕ್ರಮವನ್ನು ಬೋಧಿಸುವುದು, ಅನುಮೋದನೆಯಿಲ್ಲದೆ ಹೆಚ್ಚುವರಿ ವಿಭಾಗಗಳನ್ನು ಅನುಮತಿಸುವುದು …

Read More »

ಕಲ್ಯಾಣ ಕರ್ನಾಟಕ ನುಂಗಿದವ ರೆಡ್ಡಿ: ಟಪಾಲ ಗಣೇಶ್ ಆರೋಪ!

ಜನಾರ್ಧನರೆಡ್ಡಿ ಗಂಗಾವತಿಯಿಂದ ಕಂಟೆಸ್ಟ್ ಮಾಡ್ತಾರೆಂದು ಹೇಳಿದ್ದಾರೆ ಆದರೆ ಕಲ್ಯಾಣ ರಾಜ್ಯವನ್ನೇ ನುಂಗಿದವರು ಜನಾರ್ಧನರೆಡ್ಡಿ. ಭ್ರಷ್ಟಾಚಾರದ ಜನಕ ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ಕಟ್ಟಿಕೊಂಡಿದ್ದಾರೆ. ರಾಜ್ಯದ ಪ್ರಜ್ಞಾನವಂತ ಮತದಾರರು ಅರ್ಥ ಮಾಡಿಕೊಳ್ಳಬೇಕು ಇವರ ಈ ನಾಟಕವನ್ನಾಎಂದು ಕೊಪ್ಪಳದ ಗಂಗಾವತಿಯಲ್ಲಿ ಟಪಾಲ್ ಗಣೇಶ್ ಹೇಳಿಕೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಒಂದು ಸಣ್ಣ ಗಣಿಗಾರಿಕೆ ಮಾಡದವರು ಸಾವಿರಾರು‌ ಕೋಟಿ ಆಸ್ತಿ ಮಾಡಿದ್ದಾರೆ,ಇದೇ ಸಾವಿರಾರು ಕೂಟಿಯಿಂದ ಚುನಾವಣೆಯಲ್ಲಿ ನಿಂತಿದ್ದಾರೆ ಹಾಗಾಗಿ ಪ್ರಜ್ಞಾನವಂತ ಮತಪ್ರಭುಗಳು ಇಂತಹ …

Read More »

ಅಧಿಕಾರಿಗಳು ರಸ್ತೆಯಲ್ಲಿ ನಿಂತು ಜಗಳ ಮಾಡುವುದು ಸರಿಯಲ್ಲ – ಕೇಂದ್ರ ಸಚಿವ ಜೋಶಿ

ಧಾರವಾಡ : ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಈ ರೀತಿ ರಸ್ತೆಯಲ್ಲಿ ನಿಂತು ಜಗಳ ಮಾಡುವುದು ಸರಿಯಲ್ಲ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮಧ್ಯೆ ನಡೆದಿರುವ ಸಮರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಅನಾರೋಗ್ಯಕರ ಬೆಳವಣಿಗೆ. ನಾನು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೇಳುತ್ತೇನೆ. ಮೇಲೆ ಕಟ್ಟು ನಿಟ್ಟಿನ …

Read More »

ದೊಡ್ಡ ಸಿಟಿಗಳಲ್ಲಿ ಕೊಲೆ ಆಗುವದು ಸಹಜ: ಪೊಲೀಸ್ ಕಮೀಷನರ್ ಹೇಳಿಕೆ….

ಹುಬ್ಬಳ್ಳಿ ನೇಕಾರನಗರದಲ್ಲಿ ಭಾನುವಾರ ನಡೆದ ಹಾಡುಹಗಲೇ ನಾಗರಾಜ ಚಲವಾದಿ ಎಂಬ ಯುವಕನ ಕೊಲೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಮಿಷನರ್ ರಮನ್ ಗುಪ್ತಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಆತಂಕ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.ಹುಬ್ಬಳ್ಳಿಯಂತ ದೊಡ್ಡ ನಗರದಲ್ಲಿ ಎರಡು ತಿಂಗಳಿಗೊಮ್ಮೆ ಕೊಲೆಗಳು ಆಗುವುದು ಸಹಜ‌. ಇದರಿಂದ ಯಾವುದೇ ರೀತಿಯಾದ ಕಾನೂನು ಸುವ್ಯಸ್ಥೆಗೆ ದಕ್ಕೆ ಬರುವುದಿಲ್ಲ. ಈಗಾಗಲೇ ಈ ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಏನೂ ಹೇಳಲು ಬರೋದಿಲ್ಲ . ಕೊಲೆಗೆ …

Read More »

ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪ್ರಮುಖರ ಸೇರ್ಪಡೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆಯೇ ,ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹಾಗೂ ಕೋಲಾರದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮತ್ತು ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‍ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.ವೀರಭದ್ರಪ್ಪ ಹಾಲರವಿ ಅವರು ಬಿಜೆಪಿ ತೊರೆದು ಜೆಡಿಎಸ್ …

Read More »

ಹುಬ್ಬಳ್ಳಿಯಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡ ಶ್ರೀ ಸಿದ್ಧಾರೂಢರ ಜಾತ್ರಾಮಹೋತ್ಸವ

ಹುಬ್ಬಳ್ಳಿಯಲ್ಲಿ ನೋಡಿದರು ಶಿವಭಕ್ತರು. ಹಣೆ ಮೇಲೆ ವಿಭೂತಿ. ಬಾಯಲ್ಲಿ ಶಿವ ಪಂಚಾಕ್ಷರಿ ಮಂತ್ರ ಜಪಿಸುತ್ತ ಆರಾಧ್ಯ ದೈವ ಗುರುದ್ವಯರ ರಥವನ್ನು ಎಳೆಯುವ ಸಂಭ್ರಮ ಹೇಳತೀರದು. ಸಾಕ್ಷಾತ್ ಕೈಲಾಸವೇ ಭುವಿಗಿಳಿದ ಅನುಭವ. ಇಷ್ಠಾರ್ಥ ಸಿದ್ಧಿಗಾಗಿ ತೇರಿಗೆ ಹಣ್ಣು, ಉತತ್ತಿ ಎಸೆದು ಸಿದ್ದಾರೂಡರ ತೇರನ್ನು ಅದ್ದೂರಿಯಾಗಿ ಇಂದು ಎಳೆಲಾಯಿತು‌. ಹೌದು… ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿಯ ವತಿಯಿಂದ ಶಿವರಾತ್ರಿ ಮಹೋತ್ಸವದ ನಿಮಿತ್ತ ಇಂದು ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ಸಿದ್ಧಾರೂಢ …

Read More »

ನಾನು ಮುಖ್ಯಮಂತ್ರಿ ಆಗ್ತಿನಿ ಅನ್ನೋ ಬಾಲಿಷ ಹೇಳಿಕೆಗೆ ನಾನು ಉತ್ತರ ಕೊಡಲ್ಲ,ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ

ನಾನು ಮುಖ್ಯಮಂತ್ರಿ ಆಗ್ತಿನಿ ಅನ್ನೋ ಹೇಳಿಕೆ ಬಾಲಿಷ, ಈ ಹೇಳಿಕೆಗೆ ನಾನು ಉತ್ತರ ಕೊಡಲ್ಲ..ಶತಮಾನಕ್ಕೊಮ್ಮೆ ಮೋದಿ ಅಂತ ನಾಯಕರು ಸಿಗ್ತಾರೆ.ಅವರ ಕೈ ಕೆಳಗೆ ಕೆಲಸ ಮಾಡೋದು ನನ್ನ ಸೌಭಾಗ್ಯ.ಜಗತ್ತು ಮೋದಿ ಸ್ವೀಕಾರ ಮಾಡಿದೆ. ಇಂತಹ ಬಾಲಿಷ ಅಪ್ರಬುದ್ದ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ…ಮಾಜಿ ಸಿಎಂ ಕುಮಾರಸ್ವಾಮಿ ಆರೋಪಗಳಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು,ನಾನು ನರೇಂದ್ರ ಮೋದಿ ಕೆಳಗೆ ಕೆಲಸ ಮಾಡ್ತೀದಿನಿ, …

Read More »

ʼಸಾಕಪ್ಪ ಸಾಕು ಕಿವಿ ಮೇಲೆ ಹೂ ಅಭಿಯಾನʼ!

ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಮಂಡಿಸುವ ವೇಳೆ ಕಿವಿ ಮೇಲೆ ಹೂಯಿಟ್ಟುಕೊಂಡು ಘೋಷಿಸಿದ ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕರುಗಳು ವ್ಯಂಗ್ಯವಾಡಿದ್ದರು. ಈಗ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಿಂದ ʼಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂಬ ಅಭಿಯಾನʼ ಆರಂಭವಾಗಿದೆ. ಪೇ ಸಿಎಂ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ವಿಭಿನ್ನ ಅಭಿಯಾನವನ್ನು ಕಾಂಗ್ರೆಸ್ ಪ್ರಾರಂಭ ಮಾಡಿದ್ದು, ಬಿಜೆಪಿ ಈಗಾಗಲೇ ಅಂಟಿಸಿರುವ ಬಿಜೆಪಿಯೇ ಭರವಸೆಯಿಂದ ಪೋಸ್ಟರ್ ಗಳ ಮೇಲೆ ಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂಬ …

Read More »

ಶಿವಾಜಿ ಜಯಂತಿ, ಮಹಾಶಿವರಾತ್ರಿ ಆಚರಣೆ ಹಿನ್ನಲೆ ಹುಬ್ಬಳ್ಳಿಯಲ್ಲಿ ಪೊಲೀಸ್ ಫಥಸಂಚಲನ…

ಹುಬ್ಬಳ್ಳಿ: ಛತ್ರಪತಿ ಶಿವಾಜಿ ಜಯಂತಿ, ಮಹಾ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಿಂದ ಹುಬ್ಬಳ್ಳಿಯ ಆಯಕಟ್ಟಿನ ಜಾಗಗಳಲ್ಲಿ ಪಥಸಂಚಲನ ಮಾಡುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ಮೂಡಿಸಲಾಯಿತು.ಹೌದು… ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿನ ಹುಬ್ಬಳ್ಳಿಯ ಎಲ್ಲ ಠಾಣೆಯ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು. ಇನ್ನೂ ಚೆನ್ನಮ್ಮ ವೃತ್ತದಿಂದ ರೈಲ್ವೆ ನಿಲ್ದಾಣ, ಗಣೇಶ …

Read More »

ಕಿವಿ ಮೇಲೆ ಹೂವಿಟ್ಟ ಬಜೆಟ್, ಸುಳ್ಳಿನ ಸರಮಾಲೆಯ ಬಜೆಟ್: ಸುರ್ಜೆವಾಲಾ ವ್ಯಂಗ್ಯ…

ಹುಬ್ಬಳ್ಳಿ: ಬಜೆಟ್ ಅಂದರೆ ಕಿವಿ ಮೇಲೆ ಹೂವು. ಬಿಜೆಪಿಯವರು ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳುತ್ತಾರೆ. ಸಿಎಂ ಬಂಜೆಟ್ ಮಂಡನೆ ಸುಳ್ಳು ಕಂತೆಯಾಗಿದೆ. ಬಜೆಟ್ ಸುಳ್ಳು.. ಸುಳ್ಳು.. ಸುಳ್ಳು… ಪ್ರಧಾನಿ ಮೋದಿ ಅವರಿಂದ ಬೊಮ್ಮಾಯಿ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ. ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳಿದ್ದಾರೆ. ಆದರೇ ನಕಲು ಮಾಡಲು ಕೂಡ ಅಕ್ಕಲು ಬೇಕು ಆದರೆ ಬಿಜೆಪಿಯವರು ಕಳ್ಳಬೇಕ್ಕಿನಂತೆ ಕಾಂಗ್ರೆಸ್ ಯೋಜನೆ ಕಾಪಿ ಮಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ …

Read More »