Breaking News

ಹುಬ್ಬಳ್ಳಿ-ಧಾರವಾಡ

ವರ್ಡ್ಸ್ ಸ್ಕ್ವೇರ್ ಚೇರ್ಮನ್ ಯೋಗಿಶ್ ಹಬೀಬ ಅವರಿಗೆ ಗೌರವ ಸನ್ಮಾನ

ಹುಬ್ಬಳ್ಳಿ- ಸಹಸಾರ್ಜುನ ಜಯಂತಿ ನಿಮಿತ್ತವಾಗಿ, ವರ್ಡ್ಸ್ ಸ್ಕ್ವೇರ್‌ ಚೇರ್ಮನ್ ಹಾಗೂ ಸಮಾಜ ಸೇವಕರಾದ ಯೋಗೇಶ್ ಅವರಿಗೆ ಎಸ್ ಎಸ್ ಕೆ ಕೇಂದ್ರ ಪಂಚಾಯತ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ನೀಲಕಂಠಸಾ ಜಡಿ, ಮತ್ತು ಕೆಪಿಸಿಸಿ ಅಧ್ಯಕ್ಷ ಸತೀಶ್ ಮೆಹರವಾಡೆ, ಮತ್ತು ಮಾಜಿ ಶಾಸಕ ಅಶೋಕ್ ಕಾಟಚೆ, ಹಾಗೂ ಮಂಜು ರತನ್ ಪ್ರವೀಣ ಹಬೀಬ್ ಮುಂತಾದವರು ಉಪಸ್ಥಿತರಿದ್ದರು.

Read More »

ಅವಳಿನಗರದಲ್ಲಿ ಹೆಚ್ಚುತ್ತಿವೆ ಸೈಬರ್‌ ಕ್ರೈಂ- ಸಾಲದ ನೆಪದಲ್ಲಿ 1.50 ಲಕ್ಷ ರೂ ಎಗರಸಿದ ಭೂಪ

ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಸೈಬರ್​ ಅಪರಾಧ ಪ್ರಕರಣಗಳು (cyber crime)ಹೆಚ್ಚಾಗುತ್ತಿವೆ. ಅಪರಿಚಿತನೊಬ್ಬ ಲೋನ್ ನೀಡುವುದಾಗಿ ಕರೆ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ 1.50 ಲಕ್ಷ ವರ್ಗಾಯಿಸಿಕೊಂಡು ಹುಬ್ಬಳ್ಳಿಯಲ್ಲಿ ವಂಚಿಸಿದರೆ, ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59 ಸಾವಿರ ರೂಪಾಯಿ ಎಗರಿಸಿದ ಘಟನೆ ಧಾರವಾಡದಲ್ಲಿ ವರದಿಯಾಗಿದೆ.ಧಾರವಾಡದ ಜೈಭೀಮ ನಗರದ ಕೃಷ್ಣ ಕಟ್ಟಿಮನಿ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಲೋನ್​ ನೀಡುವುದಾಗಿ ತಿಳಿಸಿದ್ದಾನೆ. ವಿಳಾಸ ದಾಖಲೆ, ಬ್ಯಾಂಕ್​ ಖಾತೆ, ಎಟಿಎಂ ಮತ್ತಿತರ ದಾಖಲೆಗಳನ್ನು ಪಡೆದಿದ್ದಾನೆ. …

Read More »

ಖ್ಯಾತ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ ನಿಧನ

ಧಾರವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ (74) ಇಂದು (ಗುರುವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಪಂ.ಷಡಕ್ಷರಯ್ಯ ಅವರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂದು ಬಳಗ ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ. ಪಂ.ಷಡಕ್ಷರಯ್ಯ ಅವರು ರಾಜ್ಯ ಹಾಗೂ ದೇಶದ ವಿವಿಧ ಭಾಗದಲ್ಲಿ ತಬಲಾ ಕಾರ್ಯಕ್ರಮ ನೀಡಿದ್ದರು. ಅವರ ತಬಲಾ ಸೇವೆಗೆ ವಿವಿಧ ಪ್ರಶಸ್ತಿ, ಪುರಸ್ಕಾರ ಒಲಿದು ಬಂದಿವೆ. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ …

Read More »

ಅಕ್ರಮ ಗಾಂಜಾ ಮಾರಾಟ ಮಡುತ್ತಿದ್ದವರ ಇಬ್ಬರ ಬಂಧನ

ಗಾಂಜಾ ಮಾರುತ್ತಿದ್ದ ಆರೋಪಿಗಳು ಧಾರವಾಡ :ಧಾರವಾಡದ ಸಪ್ತಾಪುರ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.ನಗರದ ಶಿವಗಿರಿ, ಸಾಯಿ ಹಾಸ್ಟೇಲ್‌,ಜಯನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ದೃವ ಅನಿಲ್ ಮದನ್‌,ಶಿವಕುಮಾರ ಮಡಿವಾಳ ಬಂಧಿತ ಆರೋಪಿಗಳು.ವಿದ್ಯಾರ್ಥಿಗಳನ್ನು ದಾಳವಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಅಬಕಾರಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More »

ಶ್ರೀ ಸಹಸ್ರಾರ್ಜುನ ಜಯಂತಿ ಸರ್ಕಾರಿ ಆಚರಣೆಯಾಗಲಿ : ನಾರಾಯಣ್

ಹುಬ್ಬಳ್ಳಿ : ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತ್ಯೋತ್ಸವವನ್ನು ನಗರದ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ್,ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಕಛೇರಿಯಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿ ಆಚರಿಸಲಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿ ಶ್ರೀ ಸಹಸ್ರಾರ್ಜುನ ಜಯಂತಿಯನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರಿ ಜಯಂತಿಯನ್ನಾಗಿ ಆಚರಿಸುವಂತಾಗಬೇಕು ಹಾಗೂ ಜಯಂತಿ ಅಂಗವಾಗಿ ಸರ್ಕಾರಿ ರಜೆಯನ್ನು ಘೋಷಣೆ ಮಾಡಬೇಕೆಂದು ಅವರು ತಿಳಿಸಿದರು. …

Read More »

ಭೀಮಪಲಾಸ’ ಸಂಗೀತೋತ್ಸವ-ಧಾರವಾಡದಲ್ಲಿ ನ. 12 ರಂದು ಗಾನಲಹರಿ ಕಾರ್ಯಕ್ರಮ

ಧಾರವಾಡ: ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನ. ೧೩ ರಂದು ಸಂಜೆ ೫.೪೫ಕ್ಕೆ ಸೃಜನಾ ರಂಗಮAದಿರದಲ್ಲಿ ಸಂಗೀತದ ರಸಮಾಧುರ್ಯ ಹರಿದುಬರಲಿದೆ. ಮೈಸೂರಿನ ಪಿ.ಶ್ರೀಮತಿದೇವಿ ಹಾಗೂ ಪುಣೆಯ ರಮಾಕಾಂತ ಗಾಯಕವಾಡ ಅವರಿಂದ ಗಾನಸುಧೆ ಮೂಡಿಬರಲಿದೆ. ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ …

Read More »

ಹುಬ್ಬಳ್ಳಿಯಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದು ಅನಿಲ ಸೋರಿಕೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹುಬ್ಬಳ್ಳಿ: ಗ್ಯಾಸ್ ಪೈಪ್‌ಲೈನ್ ಒಡೆದು ಅನಿಲ ಸೋರಿಕೆಯಾಗಿರುವ ಘಟನೆ ಸುಳ್ಳದ ರಸ್ತೆಯ ತ್ರಿಬಿ ಹೋಟೆಲ್‌ ಮುಂಭಾಗದಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.ಮಹಾನಗರ ಪಾಲಿಕೆಯವರು ಒಳಚರಂಡಿ ದುರಸ್ತಿ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಜೆಸಿಬಿಯಿಂದ ಅಂದಾಜು 4.5 ಅಡಿ ಆಳದಲ್ಲಿ ಅಗೆಯುವಾಗ ಗ್ಯಾಸ್ ಪೈಪ್​ಗೆ ತಾಗಿ ಒಡೆದು ಹೋಗಿದೆ. ಪೈಪ್ ಒಡೆದಿದ್ದರಿಂದ ಅನಿಲ ಸೋರಿಕೆಯಾಗುತ್ತಿದೆ. ಕೂಡಲೇ ಸ್ಥಳೀಯರು ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ, ಈವರೆಗೆ ಯಾರೂ ಕೂಡ ಸ್ಥಳಕ್ಕೆ …

Read More »

ಬಿಟ್‌ ಕ್ವಾಯಿನ್‌ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲಾ-ಕೈ ನಾಯಕರಿಗೆ ಶೆಟ್ಟರ ತಿರುಗೇಟು…

ಹುಬ್ಬಳ್ಳಿ: ಬಿಟ್ ಕ್ವಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ನಾಯಕರು ಬಿಜೆಪಿ ನಾಯಕರ ಮೇಲೆ ಮಾಡಿರುವ ಆರೋಪಕ್ಕೆ ಸಂಭಂದಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣ ಸಲುವಾಗಿ ಈ ರೀತಿ ಆರೋಪ ಮಾಡೋದು‌ ಸರಿಯಲ್ಲ‌,ಸರಿಯಾದ‌ ದಾಖಲೆಗಳಿದ್ದರೆ ಬಿಡಿಗಡೆ ಮಾಡಿ,ಯಾರೋ‌ ಮಾಡ್ತಾರೆ ಅನ್ನೋ‌ ಸಲುವಾಗಿ ಬೇಜಾಬ್ದಾರಿ ಹೇಳಿಕೆ ನೀಡೋದು‌ ಸರಿಯಲ್ಲ ಎಂದು ಕಿಡಿ ಕಾರಿದರು.ಈ ರೀತಿ ಹೇಳಿಕೆ ನೀಡೋದು ರಾಜಕೀಯ ಪಕ್ಷಕ್ಕೆ …

Read More »

ವಾಣಿಜ್ಯ ನಗರಿಯಲ್ಲಿ ಬೆಳ್ ಬೆಳೆಗ್ಗೆ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ

ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯು ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಜೋರಾಗಿ ನಡೆಸಿದ್ದು, ವಲಯ ಕಚೇರಿ 5 ವ್ಯಾಪ್ತಿಯಲ್ಲಿ ಜೆಸಿಬಿ ಸದ್ದು ಜೋರಾಗಿದೆ. ಹೌದು. ಹಳೆಯ ವಾರ್ಡ್ ನಂಬರ 27ರ ವ್ಯಾಪ್ತಿಯಲ್ಲಿ ಬರುವ ಉಣಕಲ್ ಗ್ರಾಮದಲ್ಲಿ ಸಾರ್ವಜನಿಕ ಆಸ್ತಿಯನ್ನು ಆಕ್ರಮಿಸಿಕೊಂಡು ನಿರ್ಮಾಣ ಮಾಡಿದ್ದ ಮನೆ ಹಾಗೂ ಶೆಡ್ ತೆರವು ಮಾಡುವ ಮೂಲಕ ಮನೆಯ ಮಾಲೀಕರಿಗೆ ಬಿಸಿ ಮುಟ್ಟಿಸಲಾಗಿದೆ. ಪಾಲಿಕೆ ವತಿಯಿಂದ ಕೆಎಂಸಿ 1976 …

Read More »

128 ಕಳವು ಪ್ರಕರಣ ಪತ್ತೆ,

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈವರೆಗೆ ಒಟ್ಟು 312 ಕಳವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 128 ಪ್ರಕರಣಗಳನ್ನು ಭೇದಿಸಿ, 1.61 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಲಾಭೂರಾಮ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮನೆ, ಅಂಗಡಿ, ವಾಹನ ಮತ್ತಿತರ 312 ಪ್ರಕರಣಗಳಲ್ಲಿ ಒಟ್ಟು 2.6 ಕೋಟಿ ರೂ. ಮೌಲ್ಯದ ನಗದು, ವಸ್ತು ಕಳ್ಳತನವಾಗಿತ್ತು. …

Read More »