ಹುಬ್ಬಳ್ಳಿ: ಬಿಟ್ ಕ್ವಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ನಾಯಕರು ಬಿಜೆಪಿ ನಾಯಕರ ಮೇಲೆ ಮಾಡಿರುವ ಆರೋಪಕ್ಕೆ ಸಂಭಂದಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕಾರಣ ಸಲುವಾಗಿ ಈ ರೀತಿ ಆರೋಪ ಮಾಡೋದು ಸರಿಯಲ್ಲ,ಸರಿಯಾದ ದಾಖಲೆಗಳಿದ್ದರೆ ಬಿಡಿಗಡೆ ಮಾಡಿ,ಯಾರೋ ಮಾಡ್ತಾರೆ ಅನ್ನೋ ಸಲುವಾಗಿ ಬೇಜಾಬ್ದಾರಿ ಹೇಳಿಕೆ ನೀಡೋದು ಸರಿಯಲ್ಲ ಎಂದು ಕಿಡಿ ಕಾರಿದರು.ಈ ರೀತಿ ಹೇಳಿಕೆ ನೀಡೋದು ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ,ಜಾರ್ಜ್ ಶೀಟ್ ಹಾಕಿರೋದರಲ್ಲಿ ಕಾಂಗ್ರೇಸ್ ನಾಯಕೆ ಹೆಸರು ಬಂದಿದೆ ಅದಕ್ಕೆ ನೀವೇನು ಉತ್ತರ ಕೋಡುತ್ತಿರಿ ಎಂದು ಪ್ರಶ್ನೆ ಮಾಡಿದ್ದಾರೆ.ಸುಖಾ ಸುಮ್ಮನೇ ಬಿಜೆಪಿ ನಾಯಕರ ಮೇಲೆ ನಿರಾಧಾರಾವಾಗಿ ಆರೋಪ ಮಾಡೋದು ತಪ್ಪು ಹಾಗೇನಾದ್ರು ಸಾಕ್ಷಿ ಪುರಾವೆಗಳಿದ್ದರೆ ಹಾಜರು ಪಡಿಸಿ ತನಿಖೆ ಆಗಲಿ ಎಂದರು.ಬೇರೆ ಸರ್ಕಾರ ಇದ್ದಾಗಲೂ ಸಿಬಿಐಗೆ ಸಾಕಷ್ಟು ಕೇಸ್ ತನಿಖೆ ಆಗಿವೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಪ್ರತ್ಯೇಕ ವ್ಯವಹಾರ ಇರುತ್ತೆ ಅದನ್ನ ಇಟ್ಕೊಂಡು ನೀವು ಅಲಿಗೇಷನ್ ಮಾಡ್ತಿರಾ ಎಂದು ವಾಗ್ದಳಿ ನೆಡೆಸಿದರು. ಆಧಾರ ರಹಿತ ಆರೋಪ ಮಾಡುವ ಕಾಂಗ್ರೇಸ್ ಪಕ್ಷ ಬೇಜಾಬ್ದಾರಿ ಪಕ್ಷವಾಗಿದೆ. ಮತ್ತು ಎಲ್ಲರ ಬಗ್ಗೆ ಅನುಮಾನ ವ್ತಕ್ತಪಡಿಸೋದೆ ನಿಮ್ಮ ಡ್ಯೂಟಿ ಆಗಿದೆ.ಬಿಟ್ ಕ್ವಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ ಬದಲಿಗೆ ಹಲವು ನೀರಾವರಿ ಯೋಜನೆಗಗಳ ಬಗ್ಗೆ ಚರ್ಚೆ ಸಲುವಾಗಿ ದೆಹಲಿಗೆ ಹೋಗಿದ್ದಾರೆ ಇದನ್ನ ಕಾಂಗ್ರೇಸ್ನವರು ಬೇರೆ ಅರ್ಥ ಕಲ್ಪಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

