Breaking News

ಹುಬ್ಬಳ್ಳಿ-ಧಾರವಾಡ

ನಾಳೆ ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರಾರಂಭೋತ್ಸವ ..

ಹುಬ್ಬಳ್ಳಿ: ಚಾಂಪಿಯನ್ 11 ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ನ ಉದ್ಘಾಟನೆಯನ್ನು ನಗರದ ಗೋಕುಲ ರಸ್ತೆಯ ಡೆನಿಸನ್ ಹೋಟೆಲ್ ನ ಮಥುರಾ ಹಾಲ್‌ನಲ್ಲಿ ಇದೇ 24 ರಂದು ಸಂಜೆ. 5.30 ಕ್ಕೆ ಆಯೋಜಿಸಲಾಗಿದೆ ಎಂದು ಡಿ.ಬಿ.ಡಂಬಳ ಅವರು ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಉದ್ಯಮಿ ಸಿದ್ದಾರ್ಥ ಡಂಬಳ ಅವರು ಸ್ಟಾರ್ಟ್ ಅಪ್ ಮಾದರಿಯಲ್ಲಿ ಚಾಂಪಿಯನ್ಸ 11 ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್‌ ಕಂಪನಿಯನ್ನು 2018 ರಲ್ಲಿ ಪ್ರಾರಂಭಿಸಿದ್ದು,ಉತ್ತರ ಕರ್ನಾಟಕ ಕ್ರಿಕೆಟ್ ಆಟಗಾರರು …

Read More »

ಹುಬ್ಬಳ್ಳಿಯ ರಣದಮ್ಮ ಕಾಲೋನಿ ಮಹಿಳೆಯರಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಹುಬ್ಬಳ್ಳಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಹುಬ್ಬಳ್ಳಿಯ ನೇಕಾರನಗರದ ರಣದಮ್ಮ ಕಾಲೋನಿಯ ಮಹಿಳೆಯರು ಮೆಣದ ಭತ್ತಿ ಬೆಳಗಿಸುವ ಮೂಲಕ ಹುತಾತ್ಮ ವೀರಯೋಧರಿಗೆ ಶ್ರದ್ದಾಂಜಲಿ ಸಮರ್ಪಿಸಿದರು.ಜಮ್ಮು ಕಾಶ್ಮೀರದಲ್ಲಿ ಸಿಆರ್‌ಫಿ‌ಎಫ್ ಯೋಧರ ಮೇಲಿನ ಉಗ್ರರ ದಾಳಿ ಖಂಡಿಸಿ ಉಗ್ರಗಾಮಿಗಳು ಹಾಗೂ ಪಾಕಿಸ್ತಾನ ವಿರುದ್ಧ ಧಿಕ್ಕಾರ ಕೂಗಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಕಾಶ್ಮೀರದಲ್ಲಿ ಇರುವ ದೇಶದ್ರೋಹಿಗಳನ್ನು ಮಟ್ಟಾ ಹಾಕಬೇಕು. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕೆಂದು ನೀಡಬೇಕು ಎಂದು ಅಗ್ರಹಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ …

Read More »

ಸಾಧನೆಗೆ ಗುರುವಿನ ಆಶೀರ್ವಾದವೇ ಶ್ರೀರಕ್ಷೆ: ಚನ್ನಣ್ಣವರ

ಮಣಕವಾಡ: ಸಾಧನೆಗೆ ಪೂರಕ ಶಕ್ತಿಯಾಗಿ ಗುರು ಯಾವಾಗಲೂ ಜೊತೆಯಿರುತ್ತಾನೆ ಪ್ರತಿಯೊಂದು ಸಾಧನೆಯ ಹಿಂದೆ ಗುರು ಇರುವುದು ಸತ್ಯ ಸಂಗತಿ ಜಗತ್ತಿನಲ್ಲಿ ದುಡ್ಡು ಒಂದು ದಿನ ಬರಬಹುದು ಒಂದು ದಿನ ಹೋಗಬಹುದು ಆದರೆ ಗಳಿಸಿಕೊಂಡ ಜ್ಞಾನ ಎಂದಿಗೂ ಅದು ಬಾಳಿನ ಬುತ್ತಿಯಾಗಿರುತ್ತದೆ ಎಂದು ಬೆಂಗಳೂರು ಪಶ್ಚಿಮ ಪೊಲೀಸ್ ಅಧೀಕ್ಷಕರಾದ ರವಿ ಚನ್ನಣ್ಣವರ ತಿಳಿಸಿದರು.ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡ ಗ್ರಾಮದಲ್ಲಿ ಅಯೋಜಿಸಲಾಗಿರುವ ನಿರಂಜನ ಪಟ್ಟಾಧಿಕಾರ ಪ್ರಯುಕ್ತವಾಗಿ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಯುವ …

Read More »

ವಿರಶೈವ, ಲಿಂಗಾಯತ ಮಠಗಳು ಬೇರೆ ಬೇರೆ ಅಲ್ಲ: ಖಂಡ್ರೆ

ಮಣಕವಾಡ: ನಮ್ಮದೇಶದಲ್ಲಿ ಅನೇಕ ಮಠ ಮಾನ್ಯಗಳು ಹುಟ್ಟಿಕೊಂಡಿವೆ ಅಲ್ಲದೇ ಸಮಾಜದ ಅಭಿವೃದ್ಧಿಗೆ ಮಠ ಮಾನ್ಯಗಳು ಶ್ರಮಿಸುತ್ತಿವೆ. ಇಲ್ಲಿ ಯಾವುದೇ ಲಿಂಗಾಯತ, ವಿರಶೈವ ಮಠ ಎಂಬುವಂತ ಭಿನ್ನತೆಗಳಿಲ್ಲ ಇಲ್ಲಿ ಎಲ್ಲವೂ ಒಂದೆಯಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.ಸಿದ್ಧರಾಮದೇವರ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜಕ್ಕಾಗಿ ಕ್ರಾಂತಿಯಾಗಿರುವುದು ಕಲ್ಯಾಣ ಕ್ರಾಂತಿ ಬಸವಣ್ಣನವರ ನೇತೃತ್ವದಲ್ಲಿ ಆಗಿರುವ ಕ್ರಾಂತಿ ಧಾರ್ಮಿಕ ಕ್ರಾಂತಿ ಅಸ್ಪೃಶ್ಯತೆ ಮೆಟ್ಟಿ ನಿಂತು ಸಮಾಜದ …

Read More »

ಮಣಕವಾಡದಲ್ಲಿ ವಿಜೃಂಭಣೆಯ ರೈತ ಸಮಾವೇಶ

ಧಾರವಾಡ: ಜಿಲ್ಲೆಯ ಮಣಕವಾಡ ಗ್ರಾಮದಲ್ಲಿ ಆಯೋಜಿಸಲಾಗಿರುವ ದೇವಮಂದಿರದ ಸಿದ್ಧರಾಮದೇವರ ಚರಪಟ್ಟಾಧಿಕಾರ ಕಾರ್ಯಕ್ರಮದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ರೈತ ಸಮಾವೇಶ ಉದ್ಘಾಟನೆಯನ್ನು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ಮಣಕವಾಡ ಗ್ರಾಮದಲ್ಲಿ ಸಿದ್ಧರಾಮದೇವರ ಚರಪಟ್ಟಾಧಿಕಾರ ನೆರವೇರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅಲ್ಲದೇ ಬೃಹತ್ ಮಟ್ಟದಲ್ಲಿ ರೈತ ಸಮಾವೇಶ ಕೈಗೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇಂದಿನ ದಿನಮಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಜನರ ಸಹಭಾಗಿತ್ವ ನೋಡಿದರೇ ನಿಜವಾಗಿಯೂ ಅಚ್ಚರಿಯಾಗುತ್ತದೆ ಎಂದರು.ನಂತರ ಮಾತನಾಡಿದ ಕೂಡಲಸಂಗಮ …

Read More »

ಮಣಕವಾಡ ಶ್ರೀಗಳು ಸಾಮಾಜಿಕ ಕಾರ್ಯಗಳಿಂದ ಜನಜನಿತರಾಗಿದ್ದಾರೆ: ನಿರಂಜನನಂದಾಪುರಿ ಶ್ರೀಗಳು

ಮಣಕವಾಡ: ಸಿದ್ಧರಾಮದೇವರು ಈ ಭಾಗದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ತಮ್ಮ ಪ್ರವಚನದ ಶಕ್ತಿಯಿಂದ ಜನಜನಿತರಾಗಿದ್ದಾರೆ ಎಂದು ಕನಕಗುರು ಪೀಠದ ನಿರಂಜನನಂದಾಪುರಿ ಸ್ವಾಮೀಜಿ ತಿಳಿಸಿದರು.ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತ ಆಯೋಜಿಸಲಾಗಿರುವ ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ತಂದೆ ತಾಯಿ ತಮ್ಮ ಮಕ್ಕಳನ್ನು ದೇಶ ಕಾಯುವ ಸೈನಿಕ ಕೆಲಸಕ್ಕೆ ಹಾಗೂ ಸನ್ಯಾಸತ್ವ ಸ್ವೀಕಾರಕ್ಕೆ ಕಳಿಸುವುದಿಲ್ಲ ಧರ್ಮದ ಸಂಸ್ಕೃತಿ ಉಳಿಯಬೇಕು ಎನ್ನುವಂತ ಸದುದ್ದೇಶದಿಂದ ಅವರನ್ನು ಸಮಾಜಕ್ಕೆ ನೀಡಿದ ಅವರ …

Read More »

ರಸ್ತೆಗಿಳಿದು ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಹುಬ್ಬಳ್ಳಿ: ಸಾರಿಗೆ ಬಸ್ಸಿನಲ್ಲಿ ಆಗುತ್ತಿರುವ ಅವ್ಯವಸ್ಥೆ ಹಾಗೂ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಇಂದು ತಾಲೂಕಿನ ಕುಸುಗಲ್ ಗ್ರಾಮದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.ಹುಬ್ಬಳ್ಳಿ ತಾಲ್ಲೂಕು ಕುಸುಗಲ್ ಗ್ರಾಮಕ್ಕೆಸರಿಯಾದ ಸಮಯಕ್ಕೆ ವಾಯುವ್ಯ ಸಾರಗೆ ಸಂಸ್ಥೆ ಬಸ್ ಬಿಡದೇ ಕಾರಣ ವಿಧ್ಯಾರ್ಥಿಗಳು ವಾಯುವ್ಯ ಸಾರಿಗೆ ಸಂಸ್ಥೆ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಹಲವಾರು ಭಾರಿ ಮನವಿ ಸಲ್ಲಿಸಿದರು ಏನು ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಪ್ರತಿಭಟನೆ ಮಾಡಬೇಕಾಗಿದೆ ಎಂದು ಅಸಮಾಧಾನ …

Read More »

ಪೌರಾಡಳಿತ ಸಚಿವರ ತವರಲ್ಲೇ ಬಸ್ಸಿಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಕುಂದಗೋಳ: ತಾಲೂಕಿನ ಎರಗುಪ್ಪಿ ಗ್ರಾಮದಲ್ಲಿಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದನ್ನು ಖಂಡಿಸಿ ಶಾಲಾಮಕ್ಕಳು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಸರಿಯಾಗಿಲ್ಲ ಅಲ್ಲದೇ ಶಾಲಾ ಕಾಲೇಜಿಗೆ ಹೋಗುವುದು ಕಷ್ಟಕರವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರುಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ಅವರ ತವರೂರರಲ್ಲಿಯೇ ಬಸ್ ವ್ಯವಸ್ಥೆ ಸರಿಯಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು ದಿನಗಳಿಂದ ಕೂಡ ಬಸ್ಸಿಗಾಗಿ ವಿದ್ಯಾರ್ಥಿಗಳು ಮನವಿ ಸಲ್ಲಿಸುತ್ತಿದ್ದಾರೆ. ಆದರೇ ಇದುವರೆಗೂ ಯಾವುದೇ ಕ್ರಮ …

Read More »

ಭಕ್ತರ ಕಷ್ಟಗಳ ಪರಿಹರಿಸಿರುವ ದೇವ ಚೇತನ ಮೃತ್ಯುಂಜಯ ಸ್ವಾಮೀಜಿ: ಅನ್ನದಾನೇಶ್ವರ

ಧಾರವಾಡ: ಆಧ್ಯಾತ್ಮಿಕತೆಯ ಚಿಂತನೆಯತ್ತ ಸಮಾಜ ಉದ್ದಾರಕ್ಕಾಗಿ ಹಂಬಲಿಸಿದ ದೇವರು ಮಣಕವಾಡದ ಮೃತ್ಯುಂಜಯ ಸ್ವಾಮೀಜಿ. ಬಸವಾದಿ ಶರಣ ಚಿಂತನೆಗಳ ಭಕ್ತಿ ಪ್ರವಾಹದಿಂದ ಸಮಾಜದ ಉದ್ದಾರಕ್ಕಾಗಿ ಮೃತ್ಯುಂಜಯ ಶಿವಶರಣರು ತಮ್ಮ ಜೀವನದ ಆದರ್ಶಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಅನ್ನದಾನೇಶ್ವರ ಸ್ವಾಮೀಜಿ ತಿಳಿಸಿದರು.ಧಾರವಾಡ ಜಿಲ್ಲೆ ಮಣಕವಾಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸಿದ್ಧರಾಮದೇವರ ಚರಪಟ್ಟಾಧಿಕಾರ ಪ್ರಯುಕ್ತವಾಗಿ ಆಯೋಜಿಸಲಾಗಿರುವ ಬಸವ ಪುರಾಣದಲ್ಲಿ ಮಣಕವಾಡದ ಮೃತ್ಯುಂಜಯ ಸ್ವಾಮೀಗಳ ಕುರಿತಾಗಿ ಮಾತನಾಡಿದ ಅವರು, ಮಣಕವಾಡದ ಮೃತ್ಯುಂಜಯ ಅಪ್ಪಗಳು ದೇವಚೇತನ ಅವರು …

Read More »

ಪೊಲೀಸ್ ಭರ್ಜರಿ ಬೇಟೆ: ಮೊಬೈಲ್ ಕಳ್ಳನ ಬಂಧನ

ಹುಬ್ಬಳ್ಳಿ: ಬೈಕ್ ಮೇಲೆ ಬಂದು ಮೊಬೈಲ್ ಫೋನ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ನಗರದ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಧಿವಾಡ ನಿವಾಸಿ ಸಾಹಿಲ್ ಜಾ ಶೇಖ ಎಂಬಾತನೆ ಬಂಧಿತ ಆರೋಪಿ. ಮೊಬೈಲನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗಳ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಇವನ ವಿರುದ್ಧ ಕೇಶ್ವಾಪೂರ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯ ಬಂಧನಕ್ಕೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಂಧಿತನಿಂದ ಒಂದು ಡಿಸ್ಕವರಿ …

Read More »