Breaking News

ಬೆಂಗಳೂರು

ಮಹಾಮಾರಿಯ ಕುರಿತು ಮಹತ್ವ ಸಭೆ

ಕೊರೋನಾ ಕುರಿತು ಇಂದು ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಮಹತ್ವದ ನಿರ್ಧಾರಗಳನ್ನು ಸಹ ತೆಗೆದುಕೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಬೆಂಗಳೂರಿನಲ್ಲಿ 2 ಡೋಸ್ ಲಸಿಕೆ ಕಡ್ಡಾಯಕ್ಕೆ ಸಲಹೆ ಸಾಧ್ಯತೆ ಇದೆ. ದೇವಸ್ಥಾನ, ಬಸ್, ಮೆಟ್ರೋ, ಆಟೋ, ಓಲಾ, ಉಬರ್, ಸೂಪರ್‌ಮಾರ್ಕೆಟ್‌ ಎಂಟ್ರಿಗೆ ಲಸಿಕೆ ಕಡ್ಡಾಯಗೊಳಿಸಲು ಸಲಹೆ ನೀಡಬಹುದು. ಬಿಬಿಎಂಪಿ ಈ ಬಗ್ಗೆ ಇಂದಿನ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಿದೆ.

Read More »

ಬೆಂಗಳೂರುನಲ್ಲಿ ಬೆಳ್ಳಗ್ಗೆ ಬೆಳ್ಳಗ್ಗೆ ಜೆಸಿಬಿ ಘರ್ಜನೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿlandಕಾರ ತನ್ನ ಸ್ವತ್ತನ್ನು ಮರು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಇಂದು ಬೆಳಗ್ಗೆ ರಾಜಾಜಿನಗರ 6ನೆ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಬಳಿ ಇದ್ದ 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಸಂಬಂಧ ಬಿಡಿಎ ಹಲವು ದಶಕಗಳ ಹಿಂದೆ ಸರ್ವೆ ಸಂಖ್ಯೆ 18/1 ರಿಂದ 18/10ರ ವರೆಗಿನ ಸುಮಾರು ಒಂದು ಎಕರೆ ಜಾಗವನ್ನು ಸ್ವಾೀಧಿನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರವನ್ನೂ ನೀಡಿತ್ತು. ಆದರೆ, ಕೆಲವರು ಈ …

Read More »

ಶಾಲೆಗೆ ಮಕ್ಕಳನ್ನು ಕಳಿಸಲು ಪಾಲಕರು ಹಿಂದೇಟು

ಬೆಂಗಳೂರು: ರಾಜ್ಯದ ಕೊರೋನಾ ಸೋಂಕು ಹೆಚ್ಚಳ್ಳದಿಂದಾಗಿ ಎಲ್ಲರೂ ಭಯಬೀತರಾಗಿದ್ದಾರೆ.ಶಾಲಾ-ಕಾಲೇಜುಗಳ  ಮೇಲೆ ಕೊರೋನಾ ಕರಿನೆರಳು ಉಂಟಾಗಿದೆ. ಕೋವಿಡ್ 3ನೇ ಅಲೆ ಮುನ್ಸೂಚನೆಯಿಂದಾಗಿ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೇ ಕಾರಣದಿಂದಾಗಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸೋದಕ್ಕೆ ಪೋಷಕರು ಹಿಂದೇಟು ಹಾಕ್ತಾ ಇದ್ದಾರೆ.

Read More »

ಲಂಚ ಪಡೆದ ಆರೋಪ : ಇನ್ಸ್ಪೆಕ್ಟರ್ ಸಸ್ಪೆಂಡ್

ಬೆಂಗಳೂರು: ಲಂಚ ಪಡೆದ ಆರೋಪದಡಿ ಮಡಿವಾಳ ಇನ್ಸ್ಪೆಕ್ಟರ್ ಓರ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ. ಮಡಿವಾಳ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ನಾಯಕ್ ಅಮಾನತು ಆಗಿರುವ ಅಧಿಕಾರಿ ಎಂದು ಹೇಳಲಾಗಿದೆ. ವರದಕ್ಷಿಣೆ ಕಿರುಕುಳ ಸಂಬಂಧ ಅಜಯ್ ಎಂಬ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ ಗೆ ಹಾಜರಾಗದೇ ಇದುದ್ದರಿಂದ ಆರೋಪಿ ವಿರುದ್ಧ ವಾರಂಟ್ ಜಾರಿ …

Read More »

ಭಾರಿ ಮೊತ್ತದ ವಿವಿ ಕ್ಯಾಂಪಸ್ ಸ್ಥಾಪನೆ

ಬೆಂಗಳೂರು:ನೂರು ಎಕರೆ ವಿಸ್ತಾರದಲ್ಲಿ 320 ಕೋಟಿ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತಲಿದೆ .ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ   ನಿರ್ಮಾಣ ಗೊಳ್ಳಲಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸುತ್ತಾರೆ. ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ ಈ ವಿವಿ ಕ್ಯಾಂಪಸ್ ಸ್ಥಾಪನೆಯಾಗಲಿದೆ. ವೇದ, ವಿಜ್ಞಾನ, ಗಣಿತ ಹಾಗೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯ. ಇದರ ಕುರಿತು ಜಗತ್ತಿನ ವಿವಿಧ ಮೂಲೆಗಳಿಂದ ಅಧ್ಯಯನ ಮಾಡಲು …

Read More »

ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್​ಡೌನ್ ಅನಿವಾರ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ಕೊರೊನಾ ಹೆಚ್ಚಾದರೆ ಸರ್ಕಾರಕ್ಕೆ ಲಾಕ್​ಡೌನ್ ಅನಿವಾರ್ಯವಾಗಲಿದೆಯಂತ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಚಿಕ್ಕಮಗಳೂರಿನ ಜ್ಯೂನಿಯರ್ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡಿ, ಕರೊನಾ ನಿಯಂತ್ರಣ ಮಾಡುವ ಸಲುವಾಗಿ ಜನತೆ ನೆರವು ನೀಡದೇ ಹೋದಲ್ಲಿ, ಲಾಕ್‌ಡೌನ್‌ ಮಾಡುವುದು …

Read More »
Featured Video Play Icon

ದೇವಾಲಯಗಳು ಸರ್ಕಾರದ ಹಿಡಿತದಿಂದ ಮುಕ್ತಗೊಳ್ಳುವುದು ಖುಷಿಯ ಸಂಗತಿ-ಸಿದ್ಧಗಂಗಾ ಶ್ರೀ

Read More »
Featured Video Play Icon

ಸೋಲಿನ ಭಯ ಇದೆ ಅದಕ್ಕೆ ಸರ್ಕಾರ ತಾಪಂ-ಜಿಪಂ ಚುನಾವಣೆ ನೆಡಸ್ತಿಲ್ಲಾ‌-ಸಲೀಂ ಅಹ್ಮದ

Read More »

ರಾಜಸ್ಥಾನದಲ್ಲಿ ಓಮಿಕ್ರಾನ್‌ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿ ಸಾವು

ಜೈಪುರ: ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ 73 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಉದಯಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಸೆಂಬರ್ 15 ರಂದು ಈ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿತ್ತು ಮತ್ತು ಜ್ವರ, ಕೆಮ್ಮು ಹಾಗೂ ಮೂಗು ಸೋರುವಿಕೆಯಂತಹ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಡಾ ಖಾರಾಡಿ ಹೇಳಿದ್ದಾರೆ. ಮೃತ ವ್ಯಕ್ತಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿದ್ದರು. …

Read More »

ಚಿಗರಿ ಸೇವೆ ರಾತ್ರಿ 10 ಗಂಟೆಗೆ ಸ್ಥಗಿತ: ಇಯರ್ ಎಂಡ್‌ ಟಫ್ ರೂಲ್ಸ್

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆಯನ್ನು ಕಲ್ಪಿಸುತ್ತಿರುವ ಚಿಗರಿ ಸೇವೆಯನ್ನು ಬಿ.ಆರ್.ಟಿ.ಎಸ್ ವ್ಯವಸ್ಥಾಪಕರ ಹಾಗೂ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಇಂದು ರಾತ್ರಿ ಸಾರಿಗೆ ಸೇವೆಯನ್ನು ರಾತ್ರಿ 11 ಗಂಟೆಯನ್ನು ಪರಿಷ್ಕರಣೆಗೊಳಿಸಿ 10 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಹೌದು.. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು,‌ಅಲ್ಲದೇ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಯಾರೂ ಕೂಡ ನಿಯಮ ಉಲ್ಲಂಘನೆ ಮಾಡಬಾರದು ಎಂಬುವಂತ ಹಿನ್ನಲೆಯಲ್ಲಿ ಚಿಗರಿ ಸೇವೆಯನ್ನು 10 …

Read More »