BigTv News
December 8, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಾಜಿ ಸಚಿವ, ಬಿಜೆಪಿ ನಾಯಕ ಬಿ. ಶ್ರೀರಾಮುಲು ಪುತ್ರಿಯ ವಿವಾಹಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಗಮಿಸಿದರು. ನೂತನ ವಧು ವರರನ್ನು ಅವರು ಆಶೀರ್ವದಿಸಿದರು. ಮಾಜಿ ಸಚಿವ, ಬಿಜೆಪಿ ನಾಯಕ ವಿ. ಸೋಮಣ್ಣ ಮಾಜಿ ಸಚಿವ ಬಿ. ಶ್ರೀರಾಮುಲು ಪುತ್ರಿಯ ವಿವಾಹಕ್ಕೆ ಆಗಮಿಸಿ ವಧು ವರರಿಗೆ ಶುಭವನ್ನು ಹಾರೈಸಿದರು. ಬಿ. ಶ್ರೀರಾಮುಲು ಪುತ್ರಿಯ ವಿವಾಹಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ …
Read More »
BigTv News
December 8, 2023
ಕರ್ನಾಟಕ, ಬೆಂಗಳೂರು, ಸುದ್ದಿ
ನಟ ಯಶ್ ಅಂದುಕೊಂಡ ಗುರಿಯನ್ನು ಸಾಧಿಸುವ ತನಕ ನಿಲ್ಲಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದ್ರಲ್ಲೂ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನು, ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಯಶಸ್ಸು ಯಶ್‌ಗೆ ಸಲ್ಲಬೇಕು. ಯಶ್ ಇಂದು ತಮ್ಮ 19ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ‘ಹೊಡೆದರೆ ಆನೆಯನ್ನೇ ಹೊಡೆಯಬೇಕು’ ಎನ್ನುವ ಅವರದ್ದೇ ಡೈಲಾಗ್‌ನಂತೆ ‘ಆಸ್ಕರ್’ ಮೇಲೆ ಕಣ್ಣಿಟ್ಟರಾ? ಅನ್ನೋ ಪ್ರಶ್ನೆ ಭುಗಿಲೆದ್ದಿದೆ ಕೆಜಿಎಫ್-1′ ತನ್ನ ಕೆಪಾಸಿಟಿ ತೋರಿಸಿತ್ತು, ಇದಾದ ನಂತರ 2022ರಲ್ಲಿ ‘ಕೆಜಿಎಫ್-2’ಗೆ …
Read More »
BigTv News
December 8, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ಮುಂದುವರೆದಿದೆ. ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿ ತನ್ವೀರ್ ಹಾಶ್ಮಿ ಐಸಿಸಿ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸುವ ಮೂಲಕ ಯತ್ನಾಳ್ ವಿವಾದದಕ್ಕೆ ನಾಂದಿ ಹಾಡಿದ್ದರು. ಶುಕ್ರವಾರ ಯತ್ನಾಳ್ ಅವರು ಮೌಲ್ವಿ ತನ್ವೀರ್ ಹಾಶ್ಮಿ ಜೊತೆ ವ್ಯವಹಾರದಲ್ಲಿ ಪಾಲು ಹೊಂದಿದ್ದಾರೆ ಎನ್ನುವ ವರದಿ ಬಂದ ನಂತರ, ಸಾಬೀತುಪಡಿಸುವಂತೆ ಯತ್ನಾಳ್ ಸವಾಲು ಹಾಕಿದ್ದರು. ಈಗ ಅದೇ ಮೌಲ್ವಿ ಜೊತೆ …
Read More »
BigTv News
December 8, 2023
ದೆಹಲಿ, ಸುದ್ದಿ
ನವದೆಹಲಿ: ಪ್ರತಿ ಕೆಜಿ ಈರುಳ್ಳಿಗೆ 70 ರೂಪಾಯಿ ಬೆಲೆ ದಾಟಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಮುಂದಿನ ವರ್ಷ ಮಾರ್ಚ್‌ವರೆಗೂ ನಿಷೇಧಿಸಿದೆ. ದೇಶದಲ್ಲಿ ಈರುಳ್ಳಿಯ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 70 ರೂಪಾಯಿ ದಾಟಿದ ಕಾರಣ ದೇಶಿಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರವು ಶುಕ್ರವಾರ ರಫ್ತಿಗೆ 1 ವರ್ಷ ನಿಷೇಧ ಹೇರಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಡಿಸೆಂಬರ್‌ನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಬಹುದು. ನವೆಂಬರ್ ಮತ್ತು …
Read More »
BigTv News
December 7, 2023
ದೆಹಲಿ, ಸುದ್ದಿ
ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸನ್ಮಾನಿಸಿದರು. 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ ಬಳಿಕ ಮೊದಲ ಬಾರಿಗೆ ಸಂಸದೀಯ ಮಂಡಳಿ ಸಭೆ ನಡೆಯುತ್ತಿದೆ.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕಾಣಿಸಿಕೊಂಡಿದ್ದು, ಹೀಗೆ. …
Read More »
BigTv News
December 7, 2023
ಕರ್ನಾಟಕ, ಮಂಗಳೂರು, ಸುದ್ದಿ
ಮಂಗಳೂರು: ಮಂಗಳೂರಿನಲ್ಲಿ ವ್ಯಾಪಾರದಲ್ಲಿ ಧರ್ಮ ದಂಗಲ್ ಮತ್ತೆ ಮುನ್ನಲೆಗೆ ಬಂದಿದೆ. ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ ಷಷ್ಠಿ ಮಹೋತ್ಸವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರಾಕರಣೆ ಮಾಡಿರುವ ಆರೋಪ ಕೇಳಿಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 14 ರಿಂದ 19 ರವರೆಗೆ ಷಷ್ಟಿ ಮಹೋತ್ಸವ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಈ ಷಷ್ಟಿ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಕರ್ನಾಟಕ …
Read More »
BigTv News
December 7, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಪ್ರಮುಖ ಬೆಳೆಯಾದರೂ ಅಡಿಕೆ ಬೆಳೆಗಾರರು ಕೂಡ ಸಾಕಷ್ಟಿದ್ದಾರೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ಮಳೆಯೂ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಕುಂಠಿತಗೊಂಡಿದೆ. ಅಡಿಕೆ ಧಾರಣೆಯೂ ಹಾವು ಏಣಿ ಆಟ ಆಗುತ್ತಿದ್ದು, ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಚನ್ನಗಿರಿ ಅಡಿಕೆ ನಾಡು ಅಂತಾನೇ ಫೇಮಸ್. ಈ ಬಾರಿ ಮಳೆ ಕಡಿಮೆಯಾಗಿದ್ದು, ಇದರಿಂದ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳುವುದು …
Read More »
BigTv News
December 7, 2023
ಕರ್ನಾಟಕ, ಬೆಳಗಾವಿ, ಸುದ್ದಿ
ಬೆಳಗಾವಿ: ಬಿಜೆಪಿ ಅಧ್ಯಕ್ಷನಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ರಕ್ಷಣೆ ಮಾಡುವುದು ನನ್ನ ಕರ್ತವ್ಯವಾಗಿದೆ. ಇದು ನನ್ನ ಪ್ರಥಮ ಆದ್ಯತೆ. ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷ ಬಿಜೆಪಿ ಅಲ್ಲ. ರಾಜ್ಯಾಧ್ಯಕ್ಷನಾಗಿಯೂ ಹೆದರುವುದಿಲ್ಲ. ಇವೆಲ್ಲವನ್ನೂ ನಾವು ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಈ ಕುರಿತು ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಲ್ಬರ್ಗದಲ್ಲಿ ಮಣಿಕಂಠ ರಾಠೋಡ್ ವಿಚಾರದಲ್ಲಿ ಮತ್ತೊಂದೆಡೆ ಪ್ರಿಯಾಂಕ್ ಖರ್ಗೆಯವರು ಪೊಲೀಸ್ ವರದಿ ಆಧಾರದಲ್ಲಿ …
Read More »
BigTv News
December 7, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಆ ಸಿಹಿಸುದ್ದಿ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ. ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಆರೋಗ್ಯ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು, ಆಯುಷ್ಮಾನ್ …
Read More »
BigTv News
December 7, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳನ್ನು ಒಳಗೊಂಡ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. 2022 ಮತ್ತು 2023 ರಲ್ಲಿ ನಡುವಿನ ಅವಧಿಯಲ್ಲಿ ಬಿಎಂಟಿಸಿ ಬಸ್ ಅಪಘಾತಗಳಿಂದ 71 ಜನರು ಮತ್ತು ಕೆಎಸ್ಆರ್‌ಟಿಸಿ ಬಸ್ ಅಪಘಾತಗಳಿಂದ 23 ಜನರು ಸಾವನ್ನಪ್ಪಿದ್ದಾರೆ. ಇಲಾಖೆ ಮಾಹಿತಿ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಬಿಎಂಟಿಸಿ …
Read More »