Breaking News

ಚನ್ನಗಿರಿ ಅಡಿಕೆ ನಾಡು ಅಂತಾನೇ ಫೇಮಸ್….

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಪ್ರಮುಖ ಬೆಳೆಯಾದರೂ ಅಡಿಕೆ ಬೆಳೆಗಾರರು ಕೂಡ ಸಾಕಷ್ಟಿದ್ದಾರೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ಮಳೆಯೂ ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಕುಂಠಿತಗೊಂಡಿದೆ. ಅಡಿಕೆ ಧಾರಣೆಯೂ ಹಾವು ಏಣಿ ಆಟ ಆಗುತ್ತಿದ್ದು, ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಚನ್ನಗಿರಿ ಅಡಿಕೆ ನಾಡು ಅಂತಾನೇ ಫೇಮಸ್. ಈ ಬಾರಿ ಮಳೆ ಕಡಿಮೆಯಾಗಿದ್ದು, ಇದರಿಂದ ಅಡಿಕೆ ಬೆಳೆಗಾರರು ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇಳುವರಿ ತುಂಬಾನೇ ಕಡಿಮೆಯಾಗಿದೆ. ಬಹುತೇಕ ಅರ್ಧಕ್ಕರ್ಧ ಬೆಳೆ ಬಂದಿಲ್ಲ. ಅಡಿಕೆ ಧಾರಣೆಯೂ 50 ಸಾವಿರ ರೂಪಾಯಿ ಗಡಿ ದಾಟುತ್ತಿಲ್ಲ. ಒಂದು ವಾರ ಕಡಿಮೆಯಾದರೆ, ಮತ್ತೊಂದು ವಾರ ಸ್ವಲ್ಪ ಪ್ರಮಾಣದಲ್ಲಿ ಧಾರಣೆ ಏರುತ್ತಿದೆ. ಅಡಿಕೆ ಈ ಬಾರಿ ಚೆನ್ನಾಗಿ ಬರುತ್ತದೆ ಎಂದುಕೊಂಡಿದ್ದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತವಾಗಿದ್ದು, ಭದ್ರಾ ಡ್ಯಾಂ ನೀರಿನ ಮಟ್ಟ 151 ಅಡಿ ಇದೆ. ದಿನೇ ದಿನೇ ಜಲಾಶಯದ ನೀರಿನ ಮಟ್ಟವೂ ಕಡಿಮೆಯಾಗುತ್ತಿದೆ. ಈ ವರ್ಷ 167 ಅಡಿ ಮುಟ್ಟಿದ್ದ ಭದ್ರಾ ಜಲಾಶಯದಿಂದ ಎಡನಾಲೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ 151 ಅಡಿಗೆ ಕುಸಿದಿದೆ. ಮಳೆಯು ಜುಲೈ ತಿಂಗಳಿನಲ್ಲಿ ಚೆನ್ನಾಗಿ ಬಂದದ್ದು ಬಿಟ್ಟರೆ ಉಳಿದ ತಿಂಗಳು ಸುರಿದದ್ದು ಅಷ್ಟಕ್ಕಷ್ಟೇ. ಕೆಲವೆಡೆ ತೋಟಗಳು ಒಣಗಿವೆ.

Share News

About BigTv News

Check Also

ಹುಬ್ಬಳ್ಳಿಯ ಸ್ಪಾಗಳ ಕರಾಳ ಮುಖ..! ಮಸಾಜ್ ಹೆಸರಿನಲ್ಲಿ ಅಕ್ರಮ ದಂಧೆಯ ಶಂಕೆ — ಕಮಿಷನರ್ ಸಾಹೇಬರೇ, ಇತ್ತ ಗಮನ ಹರಿಸಿ!

ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ …

Leave a Reply

Your email address will not be published. Required fields are marked *