Breaking News

ಕೇರಳದಿಂದ ಅಕ್ರಮ ಕೆಂಪುಕಲ್ಲು ಸಾಗಾಟ

ಪುತ್ತೂರು: ಕರ್ನಾಟಕದ ಪರವಾನಿಗೆ ಹಿಡಿದು ಕೇರಳದಿಂದ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಪಡವನ್ನೂರು ಗ್ರಾಮದ ಸುಳ್ಯಪದವು ಚೆಕ್ ಪೋಸ್ಟ್ ನಲ್ಲಿ ತಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಭವಿತ್ ಎಂಬಾತ ಕೇರಳ ಭಾಗದಿಂದ ಲಾರಿಯಲ್ಲಿ ಕೆಂಪುಕಲ್ಲು ತುಂಬಿಕೊಂಡು ಆಗಮಿಸಿದ್ದು, ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬಂದಿ ಶಿವಪುತ್ರಮ್ಮ ಹಾಗೂ ಬಿಸ್ಮಿಲ್ಲಾ ಅವರು ಲಾರಿಯನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೆ ಮುಂದೆ ಹೋಗಿ ನಿಲ್ಲಿಸಿದ್ದಾನೆ. ಬಳಿಕ ವಿಚಾರಿಸಿದಾಗ ಕೇರಳದಿಂದ ಕೆಂಪುಕಲ್ಲನ್ನು ಪಕ್ಷಿಕೆರೆಗೆ ಸಾಗಿಸುತ್ತಿರುವುದಾಗಿ ಹೇಳಿದ್ದಾನೆ. ಪುತ್ತೂರಿನ ಬಡಗನ್ನೂರಿನ ಪರವಾನಿಗೆ ತೋರಿಸಿ, ಇಲ್ಲಿ ಸಮರ್ಪಕ ಕಲ್ಲು ಇರದೇ ಇರುವುದರಿಂದ ಕೇರಳದಿಂದ ತಂದಿರುವುದಾಗಿ ಹೇಳಿದ್ದಾನೆ. ಲಾರಿಯ ಮಾಲಕನ ಹೆಸರು ಪವನ್ ಎಂದು ತಿಳಿಸಿದ್ದು, ಬಡಗನ್ನೂರಿನ ಶಮೀರ ಅವರ ಕೆಂಪುಕಲ್ಲಿನ ಕೋರೆಯ ಪರವಾನಿಗೆ ತೋರಿಸಿದ್ದನು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ರಾಜ್ಯದಲ್ಲಿ ಹೀನ ಕೃತ್ಯ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಿದ ಶಿಕ್ಷಕ.!

ಚಿತ್ರದುರ್ಗ/ಚಳ್ಳಕೆರೆ: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *