Breaking News

ಸುದ್ದಿ

ಬಿಜೆಪಿ ಪಾಳಯದಲ್ಲಿನ ಅಸಮಾಧಾನ ಹೆಚ್ಚಾಗಿದೆ……

ಬೆಂಗಳೂರು: 2023 ರ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಆರು ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್‌ ಕರ್ನಾಟಕದ ವಿರೋಧ ಪಕ್ಷದ ನಾಯಕರನ್ನಾಗಿ ಮಾಜಿ ಉಪ ಮುಖ್ಯಮಂತ್ರಿ ಆರ್‌ ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನ ನೇಮಕ ಮಾಡಿದ್ದು, ಬಿಜೆಪಿ ಪಾಳಯದಲ್ಲಿನ ಅಸಮಾಧಾನ ಹೆಚ್ಚಾಗಿದೆ. ಉತ್ತರ ಕರ್ನಾಟಕ ಭಾಗ ಬಿಜೆಪಿ ಹಿರಿಯ ನಾಯಕರು ಸೇರಿದಂತೆ ಬೆಂಗಳೂರು ಭಾಗವ ಮಾಜಿ ಸಚಿವ ವಿ ಸೋಮಣ್ಣ ಹಾಗೂ ಅರವಿಂದ ಲಿಂಬಾವಳಿ …

Read More »

ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ….

ಮಂಡ್ಯ: ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ, ಸಂಪೂರ್ಣ ಸಿದ್ದತೆಯನ್ನೂ ಮಾಡಿಲ್ಲ. ಗೊತ್ತಿಲ್ಲದೆ ಇರೋ ಶಾಲಾ ಮಕ್ಕಳಿಂದ ಸಹಿ ಹಾಕಿಸಿಕೊಂಡು ಅವರಿಗೆ ಬೇಕಾದಂತೆ ಸಿದ್ದತೆ ಮಾಡಿರುವ ಜಾತಿಗಣತಿ ವರದಿ ಅನ್ನೋದು ಜಗಜ್ಜಾಯಿರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮುಖ್ಯಮಂತ್ರಿ ಟ್ವೀಟ್ ಗಮನಿಸಿದ್ದೇನೆ, ಅವರ ಹೆಮ್ಮೆಯ ರಾಹುಲ್ ಗಾಂಧಿ ಭಾವನೆಗೆ ಸ್ಪಂಧಿಸಿ ಜಾತಿಗಣತಿ ಪಡೆಯೋದಾಗಿ ಹೇಳಿದ್ದಾರೆ. ಈಗಾಗಲೇ ಮಾಧ್ಯಮದಲ್ಲಿ ಕಾಂತರಾಜು ಅವರ …

Read More »

ಪ್ರವಾಸಿ ತಾಣವೊಂದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಅದುವೇ ಬೇಳೂರು ಬಾಣೆ….

ಮಡಿಕೇರಿ: ಕೊಡಗಿಗೆ ಆಗಮಿಸುವ ಪ್ರವಾಸಿಗರನ್ನು ಇಲ್ಲಿನ ಬೆಟ್ಟಗುಡ್ಡಗಳು, ಜಲಪಾತಗಳು, ದೇಗುಲಗಳು, ಕೋಟೆ ಕೊತ್ತಲಗಳು, ತಿನಿಸುಗಳು ಹೀಗೆ ಹತ್ತಾರು ವಿಶೇಷತೆಗಳು ಸೆಳೆಯುತ್ತವೆ. ಇದರ ನಡುವೆಯೂ ಪ್ರವಾಸಿ ತಾಣವೊಂದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಅದುವೇ ಬೇಳೂರು ಬಾಣೆ. ಮೇಲ್ನೋಟಕ್ಕೆ ಇದು ವಿಶಾಲ ಮೈದಾನ ಪ್ರದೇಶವಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿನ ಸುಂದರ ನೋಟ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಈ ಮಾರ್ಗದಲ್ಲಿ ಹಾದು ಹೋಗುವ ಪ್ರವಾಸಿಗರು ಇಲ್ಲಿ ಒಂದಷ್ಟು ಸಮಯವನ್ನು ಕಳೆದು ಸುತ್ತಲಿನ ಪ್ರಕೃತಿಯ ಚೆಲುವನ್ನು ಸವಿದು …

Read More »

ಆಹಾರ ಜೊತೆಗೆ ಔಷಧವನ್ನು ಕೊಡುವ ಮೂಲಕ ಪ್ರಾಣಿ ಪ್ರೀತಿ ಮೆರೆದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ..

ಚಾಮರಾಜನಗರ: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಈಗ ಕೃಷಿಯಲ್ಲಿ ಸೆಕೆಂಡ್ ಇನ್ನಿಂಗ್ ಆರಂಭಿಸಿದ್ದಾರೆ. ಇದರ ಜೊತೆಗೆ, ಬೀದಿನಾಯಿಗಳ ಮೇಲೆ ವಿಶೇಷ ಅಕ್ಕರೆ ಇಟ್ಟುಕೊಂಡಿದ್ದು, ಆಹಾರ ಜೊತೆಗೆ ಔಷಧವನ್ನು ಕೊಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೃಷಿ ನಡೆಸುವ ರೋಜರ್ ಬಿನ್ನಿ ತಾವು ಬಂದಾಗಲೆಲ್ಲ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ, ಬೀದಿನಾಯಿಗಳಿಗೆ ಚುಚ್ಚುಮದ್ದನ್ನು ಕೂಡ ಹಾಕಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಾವು …

Read More »

ಇದೆಲ್ಲಾ ಮಾತನಾಡುವುದನ್ನು ಬಿಟ್ಟು ಮೊದಲು ರೈತರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ: ಶಾಸಕ ಕೆ. ಸುರೇಶ್‌ಗೌಡ.

ಮಂಡ್ಯ: ನಾವು ಚೆಡ್ಡಿ ಹಾಕಿಕೊಳ್ಳುತ್ತೇವೋ ಅಥವಾ ಬುಂಡಾ ಬುಂಡಾ ತಿರುಗುತ್ತೇವೆ ಅವರಿಗೆ ಯಾಕೆ? ಇದೆಲ್ಲಾ ಮಾತನಾಡುವುದನ್ನು ಬಿಟ್ಟು ಮೊದಲು ರೈತರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ ಎಂದು ಮಾಜಿ ಶಾಸಕ ಕೆ. ಸುರೇಶ್‌ಗೌಡ ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು. ಸುದ್ಧಿಗಾರರೊಂದಿಗೆ ಮಾತನಾಡಿ, ಬಿಜೆಯವರು ಹೇಳಿದರೆ ಜೆಡಿಎಸ್‌ನವರು ಚೆಡ್ಡಿ ಬೇಕಾದರೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಚೆಡ್ಡಿ ಹಾಕ್ತೇವೋ, ಕುಣಿತೀವೋ, ಮಲಗುತ್ತೇವೋ ಚಲುವರಾಯಸ್ವಾಮಿಗೆ ಯಾಕೆ ಬೇಕು, ರೈತರು …

Read More »

ಭಾರತದ ಮಾಜಿ ಬ್ಯಾಟರ್ ಮತ್ತು ದ್ರಾವಿಡ್ ಅವರ ಮಾಜಿ ಸಹ ಆಟಗಾರ ಲಕ್ಷ್ಮಣ್ ಮುಖ್ಯ ಕೋಚ್ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ….

ಏಕದಿನ ವಿಶ್ವಕಪ್ ಪಂದ್ಯಾವಳಿ ಬಳಿಕ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಮುಖ್ಯ ಕೋಚ್‌ ಆಗಿ ಮುಂದುವರೆಯುವುದಿಲ್ಲ ಎಂದು ಹೇಳಲಾಗಿದೆ. ಅವರು ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮುಂದಿನ ಕೋಚ್ ಆಗುವ ಸಾಧ್ಯತೆ ಇದೆ. ಕಳೆದ ವಾರ ಏಕದಿನ ವಿಶ್ವಕಪ್ ಮುಕ್ತಾಯವಾದ ನಂತರ ಒಪ್ಪಂದವನ್ನು ಮುಕ್ತಾಯಗೊಳಿಸಿರುವ ದ್ರಾವಿಡ್, ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿರುವುದಾಗಿ …

Read More »

ಹಾಸನದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವು…..

ಹಾಸನ: ಹಾಸನದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ ಘಟನೆ ಹಾಸನ-ಬೇಲೂರು ರಸ್ತೆಯ ಸೂಲದೇವರಹಳ್ಳಿ ಬಳಿ ನಡೆದಿದೆ. ಬುಧವಾರ ಸಂಜೆ ಹಾಸನ-ಬೇಲೂರು ರಸ್ತೆಯ ಸೂಲದೇವರಹಳ್ಳಿ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗೊಂಡಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿವ್ಯ (18) ಹಾಗೂ ಪ್ರಜ್ವಲ್ (24) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇತ್ತ ಬಾಕಿ ಬಿಲ್ ಪಾವತಿ ನೆಪ …

Read More »

ಬಿಜೆಪಿ ಶಾಸಕರು ಬಿ.ವೈ. ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾಧಾನ…

ಕರ್ನಾಟಕ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ, ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ನಿಯೋಜಿಸಿದ ನಂತರ ಸಾಕಷ್ಟು ಸಂಚಲನ ಸೃಷ್ಟಿಯಾಗಿದೆ. ಇದು ಯಾವ ಮಟ್ಟಿಗೆ ಎಂದರೆ ಬಹಿರಂಗವಾಗಿ ಬಿಜೆಪಿ ಶಾಸಕರು ಬಿ.ವೈ. ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಅದರಲ್ಲೂ ಹಿಂದೆ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗುಡುಗುತ್ತಿದ್ದ ಕೆಲ ಬಿಜೆಪಿ ನಾಯಕರು ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ. ಇದನ್ನೇ ಈಗ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಸಂಕಷ್ಟ …

Read More »

ಇವರೆಗೆ ಶತಕೋಟಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ…

ಬೆಂಗಳೂರ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊಟ್ಟ ಮೊದಲನೆಯದಾಗಿ ಜಾರಿಗೊಳಿಸಿದ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಐದು ತಿಂಗಳು ಪೂರೈಸಿದೆ. ಜೂನ್ 11 ರಿಂದ ನವೆಂಬರ್ 22 ವರೆಗೆ ಶತಕೋಟಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಲ್ಕು ನಿಗಮಗಳ ಬಸ್​ಗಳಲ್ಲಿ ಇಲ್ಲಿವರೆಗೆ ನೂರು ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ ಎಂಬ ಮಾಹಿತಿಯಿದ್ದು, ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ …

Read More »

ಪೋರ್ಜರಿ ವರದಿ ತಯಾರಿಸಿ ರಾಹುಲ್ ಗಾಂಧಿಯವರನ್ನು‌ ಮೆಚ್ಚಿಸಲು ಹೊರಟಿದ್ದೀರಾ: ಸುನೀಲ್‌ ಕುಮಾರ್‌.

ಬೆಂಗಳೂರು: ಬರೋಬ್ಬರಿ ೧೬೨ ಕೋಟಿ ರೂ. ವೆಚ್ಚ ಮಾಡಿ ತಯಾರಿಸಿದ ಜಾತಿ ಗಣತಿಯ ವರದಿಯೇ ಲಭ್ಯವಿಲ್ಲ ಎಂದರೆ ಇದಕ್ಕೆ ಹೊಣೆ ಯಾರು ? ಪೋರ್ಜರಿ ವರದಿ ತಯಾರಿಸಿ ರಾಹುಲ್ ಗಾಂಧಿಯವರನ್ನು‌ ಮೆಚ್ಚಿಸಲು ಹೊರಟಿದ್ದೀರಾ ? ಎಂದು ಮಾಜಿ ಸಚಿವ ಸುನೀಲ್‌ ಕುಮಾರ್‌ ಪ್ರಶ್ನಿಸಿದ್ದಾರೆ. ಬೆಂಗಳೂರು, ನವೆಂಬರ್‌ 23: ಬರೋಬ್ಬರಿ ೧೬೨ ಕೋಟಿ ರೂ. ವೆಚ್ಚ ಮಾಡಿ ತಯಾರಿಸಿದ ಜಾತಿ ಗಣತಿಯ ವರದಿಯೇ ಲಭ್ಯವಿಲ್ಲ ಎಂದರೆ ಇದಕ್ಕೆ ಹೊಣೆ ಯಾರು ? …

Read More »