Breaking News

ಪ್ರವಾಸಿ ತಾಣವೊಂದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಅದುವೇ ಬೇಳೂರು ಬಾಣೆ….

ಮಡಿಕೇರಿ: ಕೊಡಗಿಗೆ ಆಗಮಿಸುವ ಪ್ರವಾಸಿಗರನ್ನು ಇಲ್ಲಿನ ಬೆಟ್ಟಗುಡ್ಡಗಳು, ಜಲಪಾತಗಳು, ದೇಗುಲಗಳು, ಕೋಟೆ ಕೊತ್ತಲಗಳು, ತಿನಿಸುಗಳು ಹೀಗೆ ಹತ್ತಾರು ವಿಶೇಷತೆಗಳು ಸೆಳೆಯುತ್ತವೆ. ಇದರ ನಡುವೆಯೂ ಪ್ರವಾಸಿ ತಾಣವೊಂದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ ಅದುವೇ ಬೇಳೂರು ಬಾಣೆ.

ಮೇಲ್ನೋಟಕ್ಕೆ ಇದು ವಿಶಾಲ ಮೈದಾನ ಪ್ರದೇಶವಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಇಲ್ಲಿನ ಸುಂದರ ನೋಟ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಈ ಮಾರ್ಗದಲ್ಲಿ ಹಾದು ಹೋಗುವ ಪ್ರವಾಸಿಗರು ಇಲ್ಲಿ ಒಂದಷ್ಟು ಸಮಯವನ್ನು ಕಳೆದು ಸುತ್ತಲಿನ ಪ್ರಕೃತಿಯ ಚೆಲುವನ್ನು ಸವಿದು ಮುಂದೆ ಸಾಗುತ್ತಾರೆ. ಇಷ್ಟಕ್ಕೂ ಬೇಳೂರು ಬಾಣೆ ಎಂಬ ಸುಂದರ ನಿಸರ್ಗ ನಿರ್ಮಿತ ತಾಣವು ಕೊಡಗಿನ ಕುಶಾಲನಗರ – ಸೋಮವಾರಪೇಟೆ ಮಾರ್ಗದಲ್ಲಿದ್ದು, ಸೋಮವಾರಪೇಟೆಗೆ ಸಮೀಪದಲ್ಲಿದೆ.

ಕುಶಾಲಗರದಿಂದ ಸೋಮವಾರಪೇಟೆಗೆ ತೆರಳುವ ರಸ್ತೆ ಬದಿಯಲ್ಲಿಯೇ ಬೇಳೂರು ಬಾಣೆ ಇರುವುದರಿಂದ ಇಲ್ಲಿನ ಸೌಂದರ್ಯ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಲಭ್ಯವಾಗುತ್ತದೆ. ಇತ್ತೀಚೆಗಿನ ತನಕವೂ ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿರುವ ಕಾರಣ ಇಡೀ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅದರ ನಡುವೆ ಏರು ಪ್ರದೇಶದಲ್ಲಿ ಪ್ರಕೃತಿಯೇ ನಿರ್ಮಿಸಿರುವ ಹಸಿರು ಹುಲ್ಲಿನಿಂದ ನಿರ್ಮಿತವಾಗಿರುವ ಬಾಣೆ(ಮೈದಾನ ಪ್ರದೇಶ) ಕಣ್ಮನ ಸೆಳೆಯುತ್ತದೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *