Breaking News

ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ….

ಮಂಡ್ಯ: ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ, ಸಂಪೂರ್ಣ ಸಿದ್ದತೆಯನ್ನೂ ಮಾಡಿಲ್ಲ. ಗೊತ್ತಿಲ್ಲದೆ ಇರೋ ಶಾಲಾ ಮಕ್ಕಳಿಂದ ಸಹಿ ಹಾಕಿಸಿಕೊಂಡು ಅವರಿಗೆ ಬೇಕಾದಂತೆ ಸಿದ್ದತೆ ಮಾಡಿರುವ ಜಾತಿಗಣತಿ ವರದಿ ಅನ್ನೋದು ಜಗಜ್ಜಾಯಿರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮುಖ್ಯಮಂತ್ರಿ ಟ್ವೀಟ್ ಗಮನಿಸಿದ್ದೇನೆ, ಅವರ ಹೆಮ್ಮೆಯ ರಾಹುಲ್ ಗಾಂಧಿ ಭಾವನೆಗೆ ಸ್ಪಂಧಿಸಿ ಜಾತಿಗಣತಿ ಪಡೆಯೋದಾಗಿ ಹೇಳಿದ್ದಾರೆ. ಈಗಾಗಲೇ ಮಾಧ್ಯಮದಲ್ಲಿ ಕಾಂತರಾಜು ಅವರ ಮೂಲ ಪ್ರತಿ ಕಾಣೆಯಾಗಿದೆ ಅಂತ ಬಂದಿದೆ. ಪದೇ ಪದೇ ಕಾಂತರಾಜು ವರದಿಯನ್ನ ಕುಮಾರಸ್ವಾಮಿ ತಿರಸ್ಕರಿಸಿದರು ಅಂತ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು

ನನ್ನ ಕಾಲದಲ್ಲಿ ಕಾಂತರಾಜು ವರದಿ ಪಡಿಲಿಲ್ಲ ಸರಿ ಈ 6 ತಿಂಗಳ ಅವಧಿಯಲ್ಲಿ ಇವರು ಒಪ್ಪಿಗೆ ಕೊಡಲು ಏನಾಗಿತ್ತು? ಕಾಂತರಾಜು ವರದಿಗೆ ಅಂದಿನ ಮೆಂಬರ್ ಸೆಕ್ರೆಟರಿ ಸಹಿ ಹಾಕಿಲ್ಲ. ಕಾಂತರಾಜು ವರದಿ ಜಾರಿಗೆ ಸಂಪೂರ್ಣವಾಗಿ ಜನಗಣತಿ ಮಾಡಿಲ್ಲ, ಸಂಪೂರ್ಣ ಸಿದ್ದತೆ ಮಾಡಿಲ್ಲ. ಗೊತ್ತಿಲ್ಲದೆ ಇರೋ ಶಾಲ್ಮಾಕ್ಕಳಿಂದ ಸಹಿ ಹಾಕಿಸಿಕೊಂಡು ಅವರಿಗೆ ಬೇಕಾದಂತೆ ಸಿದ್ದತೆ ಮಾಡಿರುವ ವರದಿ ಅನ್ನೋದು ಜಗಜಾಯಿರಾಗಿರುವುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *