admin
January 5, 2022
Breaking News, ಆರೋಗ್ಯ, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಶಿವಮೊಗ್ಗ, ಸುದ್ದಿ
ಶಿವಮೊಗ್ಗ : ಕೋವಿಡ್ ಹೆಚ್ಚಳ ಹಿನ್ನೆಲೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬುಧವಾರ ಅಸಮಾಧಾನ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇರುವುದು ಹೌದು, ನಾನು ಇಲ್ಲ ಅಂತಾ ಹೇಳಿಲ್ಲ.ರಾಜ್ಯದ ಎಲ್ಲಾ ಕಡೆಯೂ ಇದು ಇಲ್ಲ.ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಅಷ್ಟಿಲ್ಲ.ಕೆಲವೆಡೆ 2-3-4-5 ಈ ರೀತಿ ಇದೆ. ಜಾಸ್ತಿ ಅಂದರೆ 10 ರವರೆಗೆ ಇದೆ. ಜಾಸ್ತಿ ಇದೆ ಅಂದುಕೊಂಡು ಇಡೀ ರಾಜ್ಯಕ್ಕೆ …
Read More »
admin
January 5, 2022
Breaking News, ಕರ್ನಾಟಕ, ದೆಹಲಿ, ಬೆಂಗಳೂರು, ರಾಜಕೀಯ ಸುದ್ದಿ, ರಾಮನಗರ, ಸುದ್ದಿ
ಬೆಳಗಾವಿ: ರಾಮನಗರದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳೇನು ಎನ್ನುವ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಉತ್ತರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸವಾಲು ಹಾಕಿದರು. ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಇದುವರೆಗೂ ಮನಬಂದಂತೆ ಮತ್ತು ಏನು ಮಾಡಿದರೂ ಜಯಿಸಿಕೊಳ್ಳುತ್ತೇವೆ ಎನ್ನುವಂತೆ ಅವರು ನಡೆದುಕೊಂಡು ಬಂದಿದ್ದಾರೆ. ನಮ್ಮ ತಾಳ್ಮೆಯ ಮಿತಿ ಮೀರುವಂತೆ ಮಾಡಿದ್ದಾರೆ. ಆದ್ದರಿಂದ ಬಹಳ ಸ್ಪಷ್ಟವಾಗಿ ಅವರಿಗೆ ಸಂದೇಶ ಕೊಡಬೇಕಾಗಿತ್ತು, …
Read More »
admin
January 5, 2022
Breaking News, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ
ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ. ನಾವು ಜನರನ್ನ ಉಳಿಸುವ ಕೆಲಸವನ್ನೂ ಮಾಡ್ತೇವೆ. ಪಾದಯಾತ್ರೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು. ಸ್ಯಾನಿಟೈಸ್ ಮಾಡಿಕೊಳ್ಳಬೇಕು, ಅಂತರ ಕಾಯ್ದುಕೊಳ್ಳಬೇಕು ಎಂಬ ಕೊರೋನಾ ನಿಯಮ ಪಾಲಿಸುತ್ತೇವೆ ಎಂದರು. ವೀಕೆಂಡ್ ಲಾಕ್ ಡೌನ್ ಇದ್ದರೂ ಜನವರಿ 9ರಿಂದ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ, ಇದರಲ್ಲಿ ಯಾವುದೇ ಬದಲಾವಣೆ …
Read More »
admin
January 5, 2022
Breaking News, ಕರ್ನಾಟಕ, ದೆಹಲಿ, ಬೆಂಗಳೂರು, ರಾಜಕೀಯ ಸುದ್ದಿ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಬೆಂಗಳೂರು: ಕೊರೋನಾ ಹಾಗೂ ಓಮಿಕ್ರಾನ್ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳದ ಕಾರಣದಿಂದಾಗಿ, ವಿಧಾನಸೌಧ ವಿಕಾಸಸೌಧಹಾಗೂ ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. 2 ಡೋಸ್ ಕೊರೋನಾ ಲಸಿಕೆ ಪಡೆದವರಿಗೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದು, ಕೊರೋನಾ, ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳದ ಕಾರಣದಿಂದಾಗಿ ರಾಜ್ಯ ಸರ್ಕಾರಿ ನೌಕರರ ಹಿತದೃಷ್ಠಿಯಿಂದ ವಿಧಾನಸೌಧ, …
Read More »
admin
January 4, 2022
Breaking News, ಕರ್ನಾಟಕ, ಸುದ್ದಿ, ಹಾವೇರಿ
ಹಾವೇರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ‘ಸರ್ವ ಸದಸ್ಯರ ಸಭೆ’ಯು ದಾವಣಗೆರೆಯ ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಫೆ.15 ಮತ್ತು 16ರಂದು ನಡೆಯಲಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಬುದ್ಧಿಜೀವಿಗಳನ್ನು ಸಭೆಗೆ ಕರೆಸಿ, ಸಮಿತಿಯ ಸಂಘಟನೆ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸುತ್ತೇವೆ’ ಎಂದರು.
Read More »
admin
January 4, 2022
Breaking News, ಕರ್ನಾಟಕ, ಗದಗ, ಸುದ್ದಿ
ಗದಗ: ಉತ್ತಮ ಅಭಿನಯ ತೀವ್ರತೆಯಿಂದಲೇ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಸ್ಯಾಂಡಲ್‌ವುಡ್ ನಟ ಧನಂಜಯ ಅವರು ಸೋಮವಾರ ಗದಗ ನಗರದಲ್ಲಿ ‘ಬಡವ ರ‍್ಯಾಸ್ಕಲ್’ ಚಿತ್ರದ ಪ್ರಚಾರ ನಡೆಸಿದರು. ನಗರದ ಮಹಾಲಕ್ಷ್ಮೀ ಚಿತ್ರಮಂದಿರ ಹಾಗೂ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈ ಊರಿಗೆ ಮೊದಲಬಾರಿಗೆ ಬಂದಿದ್ದರೂ ಗದುಗಿನ ಜನರು ಅಪಾರ ಪ್ರೀತಿ ತೋರಿಸಿದ್ದಾರೆ.
Read More »
admin
January 4, 2022
Breaking News, ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ ಅವರು ಸಚಿವ ಅಶ್ವಥ್ ನಾರಾಯಣ ಅವರ ಜೊತೆಗೆ ಕೈ ಕೈ ಮೀಲಾಯಿಸಿದನ್ನು ಖಂಡಿಸಿ, ಡಿ.ಕೆ. ಸುರೇಶ ಅವರ ಭಾವಚಿತ್ರ ದಹನ ಮಾಡಿ ಹು-ಧಾ ಮಹಾನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಂಸದ ಡಿ.ಕೆ.ಸುರೇಶ ಹಾಗೂ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ …
Read More »
BigTv News
January 3, 2022
Breaking News, Sports, ಧಾರವಾಡ, ಸುದ್ದಿ
ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಸ್ವಯಂ ರಕ್ಷಣಾ ಕೌಶಲ್ಯ ಬೆಳೆಸಲು ಸರ್ಕಾರವು ಕರಾಟೆ,ಜೂಡೋ,ಟೇಕ್ವಾಂಡೋ ಮತ್ತಿತರ ಸಮರ ಕಲೆಗಳ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.ಹುಬ್ಬಳ್ಳಿ ಧಾರವಾಡ ಅವಳಿ ನಗರದ ಐದು ಹಾಸ್ಟೇಲುಗಳಲ್ಲಿ ಜನವರಿ 1 ರಿಂದ ಕರಾಟೆ ತರಬೇತಿ ಪ್ರಾರಂಭವಾಗಿದೆ ,1105 ವಿದ್ಯಾರ್ಥಿನಿಯರಿಗೆ 60 ದಿನಗಳ ಕಾಲ ಈ ತರಬೇತಿ ನಡೆಯಲಿದೆ. ಸೈದಾಪೂರ,ಮಾಳಮಡ್ಡಿ,ಶಿವಗಿರಿ , ಕರ್ನಾಟಕ ವಿವಿ ಆವರಣ ಮತ್ತು ಹುಬ್ಬಳ್ಳಿಯ …
Read More »
admin
December 31, 2021
Breaking News, ಅಪರಾಧ, ಕರ್ನಾಟಕ, ಬೆಂಗಳೂರು ಗ್ರಾಮಾಂತರ, ಸುದ್ದಿ
ಹೊಸಕೋಟೆ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ವಂಚಿಸಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಬಂಧಿಸಲಾಗಿದೆ. ಆಂಧ್ರದ ಮದನಪಲ್ಲಿ ಮೂಲದ ಪಾಪಣ್ಣ ಅಲಿಯಾಸ್ ರೆಡ್ಡಿ 400ಕ್ಕೂ ಹೆಚ್ಚು ಜನರಿಗೆ ಉಂಡೆನಾಮ ತಿಕ್ಕಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪಾಪಣ್ಣ ಸೂಲಿಬಲೆಯಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ 30 ತಿಂಗಳು ಹಣ ಕಟ್ಟಿದವರಿಗೆ 10 ಸಾವಿರ ಸೇರಿಸಿ 70 …
Read More »
admin
December 31, 2021
Breaking News, ಆರೋಗ್ಯ, ಕರ್ನಾಟಕ, ದೇಶ-ವಿದೇಶ, ಬೆಂಗಳೂರು, ಸುದ್ದಿ
ಜೈಪುರ: ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ 73 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಉದಯಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಸೆಂಬರ್ 15 ರಂದು ಈ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿತ್ತು ಮತ್ತು ಜ್ವರ, ಕೆಮ್ಮು ಹಾಗೂ ಮೂಗು ಸೋರುವಿಕೆಯಂತಹ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಡಾ ಖಾರಾಡಿ ಹೇಳಿದ್ದಾರೆ. ಮೃತ ವ್ಯಕ್ತಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿದ್ದರು. …
Read More »