Breaking News

ಬಳ್ಳಾರಿ

ಖಡ್ಗ‌ ಹಿಡಿದು ನಿಷೇಧಾಜ್ಞೆ ವಿರುವ ಪ್ರದೇಶದಲ್ಲಿ ಬೈಕ್ ರ್ಯಾಲಿ : FIR ದಾಖಲು

ಬಳ್ಳಾರಿ: ನಿನ್ನೆ  ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಖಡ್ಗ‌ ಹಿಡಿದು ನಿಷೇಧಾಜ್ಞೆ ಇರುವ ಪ್ರದೇಶದಲ್ಲಿ ಬಳ್ಳಾರಿಯ ಸರಳಾದೇವಿ ಕಾಲೇಜು ಮುಂಭಾಗ 20 ಕ್ಕೂ ಹೆಚ್ಚು ಬೈಕ್​ಗಳಲ್ಲಿ ಬಂದು ಯುವಕರು ರ್‍ಯಾಲಿ ಮಾಡಿದ್ದರು.ಸದ್ಯ ಸರಳಾದೇವಿ ಕಾಲೇಜು ಬಳ್ಳಾರಿಯಲ್ಲಿ ಹಿಜಾಬ್ ವಿವಾದದ ಕೇಂದ್ರವಾಗಿದೆ. ಹೀಗಾಗಿ ಜಿಲ್ಲಾಡಳಿತ ಕಾಲೇಜಿನ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿದೆ.ಬೈಕ್ ರ್‍ಯಾಲಿ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ನಿಷೇಧಾಜ್ಞೆ ನಡುವೆಯೂ ಬೈಕ್ ರ್‍ಯಾಲಿ ಗಾದಿಲಿಂಗ, ಬಾಲಾಜಿ, ವಿನಯ್, …

Read More »

ಚನ್ನಣ್ಣನವರು ಮೇಲೆ ಮಾಡಿರುವ ಆರೋಪ ಸುಳ್ಳು: ಶ್ರೀರಾಮುಲು

ಬಳ್ಳಾರಿ: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್‌ ಒಬ್ಬ ಪ್ರಾಮಾಣಿಕ ಅಧಿಕಾರಿ ಅಂತ ಸಚಿವ ಶ್ರೀರಾಮುಲು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ಚನ್ನಣ್ಣನವರು ಮೇಲೆ ಬಂದಿರುವ ಆರೋಪ ಶುದ್ಧ ಸುಳ್ಳು ಅಂತ ಹೇಳಿದರು. ಇನ್ನೂ ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ರಾಜ್ಯದಲ್ಲಿ ಯುವಕರಿಗೆ ಮಾದರಿಯಾದ ವ್ಯಕ್ತಿ ರವಿ ಡಿ.ಚನ್ನಣ್ಣನವರ್‌ ಆಗಿದ್ದು, ಅವರನ್ನು ಲಕ್ಷಾಂತರ ಜನರು ಮೆಚ್ಚಿದ್ದಾರೆ. ಭ್ರಷ್ಟಾಚಾರದ ಆರೋಪಗಳು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನು ಬಿಟಿಲ್ಲ, ಹೀಗಾಗಿ ಅವರ ಮೇಲೆ …

Read More »

ಬಳ್ಳಾರಿಯಲ್ಲಿ 46 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಬಳ್ಳಾರಿ :  ಜಿಲ್ಲೆಯ ಕುರಗೋಡು ತಾಲೂಕಿನ ಯರಂಗನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ವಸತಿ ಶಾಲೆಯ 236 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿನಿಯರು, 11 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Read More »

ಹುಟ್ಟುಹಬ್ಬ ಆಚರಣೆ : ಕೋವಿಡ್ ನಿಯಮ ಉಲ್ಲಂಘಿಸಿದ ಜನಾರ್ದನರೆಡ್ಡಿ

ಬಳ್ಳಾರಿ: ನೂರಾರು ಸಂಖ್ಯೆಯಲ್ಲಿದ್ದ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರ ನಡುವೆ ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಹುಟ್ಟುಹಬ್ಬದ ವೇಳೆ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದ್ದರೂ ಕಾನೂನು ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ‘ಕಣ್ಣಿದ್ದು ಕುರುಡುತನ’ ಪ್ರದರ್ಶಿಸುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ಸಾರಿಗೆ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರದ ಶಾಸಕ ಸೋಮಶೇಖರರೆಡ್ಡಿ, ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಾಲಣ್ಣ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಈ …

Read More »

ಹುಟ್ಟು ಹಬ್ಬದ ದಿನವೇ ಬಿಜೆಪಿಗೆ ಟಾಂಗ್​ ಕೊಟ್ಟ ರೆಡ್ಡಿ

ಬಳ್ಳಾರಿ: ನಿನ್ನೆ ಜನಾರ್ದನರೆಡ್ಡಿ ಅವರು 55ನೇ ವಸತಂಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಹುಟ್ಟುಹಬ್ಬದ ದಿನವೇ ಮರು ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ಬಿಜೆಪಿಗೆ ಬಳ್ಳಾರಿ ಮೇಲೆ ಋಣ ಇದೆ ಎನ್ನುವ ಮೂಲಕವೇ ಬಿಜೆಪಿಗೆ ಟಾಂಗ್​ ಕೊಟ್ಟ ರೆಡ್ಡಿ, ಹತ್ತು ವರ್ಷದಲ್ಲಿ ಆಗದ ಕೆಲಸಗಳನ್ನ ಒಂದೇ ವರ್ಷದಲ್ಲಿ ಮಾಡುವ ಉತ್ಸಾಹ ಬಂದಿದೆ ಎನ್ನುವ ಮೂಲಕ ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗುವ ಸುಳಿವು ನೀಡಿದ್ದಾರೆ.

Read More »

ಸಿಸಿಬಿ ಅಧಿಕಾರಿಗಳ ಸಹಾಯದಿಂದಲೇ ಜನಾರ್ದನ ರೆಡ್ಡಿ ಎಸ್ಕೇಪ್…?

ಬೆಂಗಳೂರು: ಆ್ಯಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿಗೆ ಎಸ್ಕೇಪ್ ಆಗಲು ಸಿಸಿಬಿ ಅಧಿಕಾರಿಗಳೇ ಸಹಾಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಜನಾರ್ದನ್ ರೆಡ್ಡಿ ಅವರನ್ನ ಭೇಟಿ ಮಾಡುವ ನೆಪದಲ್ಲಿ ರೆಡ್ಡಿ ನಿವಾಸ ಪಾರಿಜಾತಗೆ ಹೋಗಿ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಅಂದರೆ ನವೆಂಬರ್ 4 ರಂದು ರಾಜ್ಯದಿಂದ ರೆಡ್ಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಹೈದ್ರಾಬಾದ್​ನಲ್ಲಿ ರೆಡ್ಡಿ …

Read More »