Breaking News
Featured Video Play Icon

ದರ್ಶನ ಕೇಸ್ ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ಖಂಡನೀಯ: ಇಂದ್ರಜಿತ್ ಲಂಕೇಶ್..!

ಅಪರಾಧಿಗಳಿಗೆ ರಾಜಮರ್ಯಾದೆ ನೀಡಬಾರದು: ಪತ್ರಕರ್ತರ ಪರವಾಗಿ ಹೋರಾಟಕ್ಕೆ ನಾನು ಸಿದ್ದ ಇಂದ್ರಜಿತ್ ಲಂಕೇಶ್..!!!

ಹುಬ್ಬಳ್ಳಿ: ಸುದ್ಧಿ ಮಾಡಲು ಹೋಗಿರುವ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಮಾಧ್ಯಮ ಇರುವುದರಿಂದಲೇ ಈಗ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿದೆ. ಈ ನಿಟ್ಟಿನಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.ದರ್ಶನ ಕೇಸ್ ಸಂಬಂಧಿಸಿದಂತೆ ಸುದ್ದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರೇಣುಕಾಸ್ವಾಮಿ‌ ಕೊಲೆಯಾಗಿರುವುದು ಖಂಡನೀಯವಾಗಿದೆ. ಅದರಲ್ಲೂ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಪತ್ರಕರ್ತರು ತಮ್ಮ ಕರ್ತವ್ಯ ಮಾಡುವ ವೇಳೆಯಲ್ಲಿ ಇಂತಹ ಘಟನೆಗಳು ನಡೆಯುವುದು ನಿಜಕ್ಕೂ ಚಿಂತಾಜನಕ‌ ಸಂಗತಿಯಾಗಿದೆ ಎಂದರು.ನಟ ದರ್ಶನಗೆ ರಾಜ ಮರ್ಯಾದೆ ಕೊಡುವುದು ನಿಜಕ್ಕೂ ಕಾನೂನು ವಿರೋಧಿಯಾಗಿದೆ. ಯಾರೇ ಆರೋಪಿಯಾಗಿದ್ದರೂ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿಯಲ್ಲಿ ರಾಜ ಮಾರ್ಯಾದೆ ಕೊಡುವುದು ಸರಿಯಲ್ಲ ಎಂದು ಅವರು ಹೇಳಿದರು.

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *