Breaking News

ಕರ್ನಾಟಕ

ಪೊಲೀಸ್ ಕಮೀಷನರೇಟ್ ಮತ್ತೊಂದು ಪ್ರಯೋಗ: ಸಾರ್ವಜನಿಕ ಸಹಭಾಗಿತ್ವದಲ್ಲಿ ಟ್ರಾಫಿಕ್ ಚಾಂಪಿಯನ್ಸ್..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಕೆಲಸ ನಿರ್ವಹಿಸಲು ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಪೊಲೀಸರಂತೆ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಂಡಿದ್ದು, ಟ್ರಾಫಿಕ್‌ ಚಾಂಪಿಯನ್ಸ್‌ ಹೆಸರಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಹೌದು.. ಸಂಚಾರ ಡಿಸಿಪಿ ರವೀಶ್‌ ಆರ್‌. ನೇತೃತ್ವದಲ್ಲಿ ತರಬೇತಿ ಪಡೆದ ಸ್ವಯಂ ಸೇವಕರನ್ನು ನಗರದ ಕಾರವಾರ ರಸ್ತೆಯ ಸಿಎಆರ್‌ ಮೈದಾನದಲ್ಲಿ ಭೇಟಿ ಮಾಡಿ, ಅವರ ಕವಾಯತು ಹಾಗೂ ಸಂಚಾರ ನಿಯಮಾವಳಿಗಳ ಸಂಜ್ಞೆಯನ್ನು ವೀಕ್ಷಿಸಿದರು. ಅವಳಿನಗರದಲ್ಲಿ …

Read More »
Featured Video Play Icon

ಗ್ಯಾರಂಟಿ ನೀಡಿರುವ ಕಾಂಗ್ರೆಸ್ಸಿನ ಸರ್ಕಾರಕ್ಕೆ ಗ್ಯಾರಂಟಿಯೇ ಇಲ್ಲ: ಕೇಂದ್ರ ಸಚಿವ ಜೋಶಿ ಕಿಡಿ..

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ‌ ಇಲ್ಲ.ಡಿ.ಕೆ.ಶಿವಕುಮಾರ ಹಾಗೂ ಸಿದ್ಧರಾಮಯ್ಯ ಕಚ್ಚಾಡುತ್ತಿದ್ದಾರೆ. ಹೆಚ್ಚಿನ‌ ಡಿಸಿಎಂಗಳನ್ನು ಮಾಡಿ‌ ಡಿ.ಕೆ.ಶಿವಕುಮಾರನನ್ನು ಮೂಲೆಗುಂಪು ಮಾಡುವ ತಂತ್ರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾನುನಾತ್ಮಕವಾಗಿಯೂ ಡಿ.ಕೆ. ಶಿವಕುಮಾರ್ ಗೆ ತೊಂದರೆ ಕೊಡುವ ಪ್ಲಾನ್ ಮಾಡಲಾಗಿದೆ. ಅದರಲ್ಲಿ‌ ಸಫಲವಾಗದಿದ್ದರೂ ಪ್ಲಾನ್ ಮಾಡುತ್ತಲೇ ಇದ್ದಾರೆ. ಗ್ಯಾರಂಟಿ‌ ಎಂದು ಹೇಳುವ ರಾಜ್ಯ ಸರ್ಕಾರಕ್ಕೇ …

Read More »

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ ಖಂಡಿಸಿ ಪ್ರತಿಭಟನೆ: ಹುಬ್ಬಳ್ಳಿಯಲ್ಲೂ ಕೇಂದ್ರಕ್ಕೆ ಧಿಕ್ಕಾರ..!

ಹುಬ್ಬಳ್ಳಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡಿದ್ದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಹುಬ್ಬಳ್ಳಿಯ ಮಿನಿವಿಧಾನಸೌಧಕ್ಕೆ ಪ್ರತಿಭಟನೆ ರ್ಯಾಲಿ ಮೂಲಕ ಆಗಮಿಸಿದ ಕಾರ್ಯಕರ್ತರು, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಎಪಿ ಬೆಂಬಲಿಗರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಅಬಕಾರಿ ನೀತಿ ಪ್ರಕರಣ ಸಂಬಂಧ ಇ.ಡಿ ಗುರುವಾರ ಕೇಜ್ರಿವಾಲ್ …

Read More »
Featured Video Play Icon

ಅಕ್ರಮ ಗಾಂಜಾ ಘಾಟು: ಆರೋಪಿ‌ ಹೆಡೆಮುರಿ‌ ಕಟ್ಟಿದ ಪೊಲೀಸರು..

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಯುವಕನನ್ನು ಸೈಬರ್ ಪೊಲೀಸರು ದಾಳಿ ಮಾಡಿ ಅರೆಸ್ಟ್ ಮಾಡಿದ್ದಾರೆ.ಹೌದು,,, ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ದಲ್ಲಿ, ಸಂಕೇಶ್ವರ ಮೂಲದ ಸೈಫ್ ಸುತಾರ್ (28) ಎಂಬಾತ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ, ಸಿಇಎನ್ ಪೊಲೀಸರು ದಾಳಿ ಮಾಡಿ ಐದು ಲಕ್ಷ ಮೌಲ್ಯದ 5 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸಿಇಎನ್ ಕ್ರೈಮ್ ಪೋಲಿಸ್ ಠಾಣೆಯ ಎಸಿಪಿ ಒಡೆಯರ್ ನೇತೃತ್ವದಲ್ಲಿ ಪಿಐ …

Read More »
Featured Video Play Icon

ಬಿಜೆಪಿಗೆ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ: ಶೆಟ್ಟರ್ ಗೆ ಟಿಕೆಟ್ ತಪ್ಪಿದರೇ ಉಗ್ರ ಹೋರಾಟ..!

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಲೋಕಸಭಾ ಟಿಕೆಟ್ ತಪ್ಪಿಸುವ ಕುತಂತ್ರ ನಡೆದಿದೆ. ಒಂದು ವೇಳೆ ಬೆಳಗಾವಿ ಕ್ಷೇತ್ರದ ಟಿಕೆಟ್ ತಪ್ಪಿದ್ದೇ ಆದರೇ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡಿದೆ.ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಮಹಾಸಭಾದ ಉಪಾಧ್ಯಕ್ಷ ಪ್ರೋ ವಿ.ಸಿ.ಸವಡಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ. ಈ ಹಿಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ಹುನ್ನಾರ …

Read More »

ಹಣಕಾಸಿನ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ…

ಹುಬ್ಬಳ್ಳಿ ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರೂರು ಗ್ರಾಮದ ಜಗದೀಶ ಢಾಬಾದಲ್ಲಿ ತಡರಾತ್ರಿ ನಡೆದಿದೆ.ವರೂರು ಗ್ರಾಮದ ಸುಧೀರ ಹುಲಗಣ್ಣವರ್ (31) ಕೊಲೆಯಾದ ಯುವಕನಾಗಿದ್ದಾನೆ. ಅದೇ ಗ್ರಾಮದ ಸಾಗರ ಮಹಾದೇವಪ್ಪ ಗಬ್ಬನ್ನವರ ಹಾಗೂ ಸುಧೀರ ಇಬ್ಬರೂ ಊಟ ಮಾಡುವ ವೇಳೆ ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿದೆ. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ಮೇಲೆ ಸಾಗರ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಆಗ ಸುಧೀರ ಸ್ಥಳದಲ್ಲಿಯೇ …

Read More »

ರಮೇಶ್ ಜಾರಕಿಹೊಳಿಯನ್ನು ಅರೆಸ್ಟ್ ಮಾಡದಂತೆ ಹೈಕೋರ್ಟ್ ಸೂಚನೆ‌

ಮಾರ್ಚ್‌ 15: ಅಪೆಕ್ಸ್ ಬ್ಯಾಂಕ್​ಗೆ ಸಾಲ ಪಾವತಿಸದೆ ಸಹಕಾರಿ ಬ್ಯಾಂಕ್ ಗೆ ವಂಚನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಿಐಡಿ ತನಿಖೆಗೆ ಸಹಕರಿಸುವಂತೆ ಹೈಕೋರ್ಟ್ ಸೂಚಿಸಿದೆ.ಲೋಕಸಭಾ ಚುನಾವಣೆಯ ತಯಾರಿ ಒಂದು ಕಡೆಯಾದ್ರೆ, ಇತ್ತ ತಮ್ಮ ತಮ್ಮ ವಿರುದ್ಧ ದಾಖಲಾಗಿರುವ ಸಹಕಾರಿ ಬ್ಯಾಂಕ್​ಗೆ ವಂಚನೆ ಪ್ರಕರಣವನ್ನು ರದ್ದುಕೋರಿ ಮಾಜಿ ಸಚಿವ ಹಾಗೂ ಗೋಕಾಕ್‌ ಸಾಹುಕಾರ್‌ ರಮೇಶ್ ಜಾರಕಿಹೊಳಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಈ ವೇಳೆ ಸರ್ಕಾರದ …

Read More »

ಧಾರವಾಡ ಲೋಕಸಭೆ: ಟಿಕೆಟ್ ಸಿಕ್ಕ ಬೆನ್ನಲ್ಲೇ ಕೇಂದ್ರ ಸಚಿವ ಜೋಶಿ ಅಭಿನಂದನೆ

ಹುಬ್ಬಳ್ಳಿ: ಐದನೇ ಬಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪರ್ಧಿಸುತ್ತಿದ್ದು, ಟಿಕೆಟ್ ನೀಡಿ ಮತ್ತೊಮ್ಮೆ ಅವಕಾಶ ನೀಡಿದ ಪಕ್ಷದ ವರಿಷ್ಠರಿಗೆ ಹಾಗೂ ಜಿಲ್ಲೆಯ ಜನರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ. ಹೌದು.. ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದಗಳನ್ನು ತಿಳಿಸಿರುವ ಪ್ರಹ್ಲಾದ ಜೋಶಿಯವರು ಐದನೇ ಬಾರಿಗೆ ಚುನಾವಣೆ ಅಖಾಡಕ್ಕೆ ಇಳಿಯುತ್ತಿರುವುದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅಲ್ಲದೇ ಕಳೆದ ಇಪ್ಪತ್ತು ವರ್ಷಗಳಿಂದ ಧಾರವಾಡ ಲೋಕಸಭಾ …

Read More »

ರಾಮೇಶ್ವರಂ ಕೆಫೆ ‘ಬಾಂಬ್ ಬ್ಲಾಸ್ಟ್ ಪ್ರಕರಣ’ SIT ತನಿಖೆಗೆ ; ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ..

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಇಂದು ಎಸ್ ಐ ಟಿಗೆ ನೀಡುವ ಸಾಧ್ಯತೆಯಿದ್ದು, ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದು ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಸಲಿದ್ದು, ಸಭೆ ಬಳಿಕ ಪ್ರಕರಣವನ್ನು ಎಸ್ ಐಟಿಗೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರು ನಗರದ ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲಾಗಿದ್ದು, …

Read More »

ಕಾಂಗ್ರೆಸ್ ಕಾರ್ಯಕರ್ತರಿಗೆ ಗುಡ್‌ ನ್ಯೂಸ್: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ..

ಬೆಂಗಳೂರು: ಲೋಕಸಭೆ ಚುನಾವಣೆಗೂ ಮೊದಲೇ, ಕಾಂಗ್ರೆಸ್‌ನ 44 ಮುಖಂಡರು ಹಾಗೂ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಭಾಗ್ಯ ಸಿಕ್ಕಿದೆ.ಕಳೆದ ತಿಂಗಳು ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇದೀಗ 44 ಮಂದಿ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.. ಯಾರಿಗೆ ಯಾವ್ಯಾವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ.. ಕಾಂತಾ ನಾಯ್ಕ-ಕೌಶಲ್ಯಾಭಿವೃದ್ಧಿ ನಿಗಮ ಮುಂಡರಗಿ ನಾಗರಾಜ್,ಜಗಜೀವನ್ ರಾಂ ಅಭಿವೃದ್ಧಿ ನಿಗಮ ವಿನೋದ್ …

Read More »