BigTv News
April 4, 2025
Breaking News, Crime, ಕರ್ನಾಟಕ
ಲೈಂಗಿಕ ಕಾರ್ಯಕರ್ತೆ ಮಹಿಳೆ ತಾನು ಸ್ವಂತ ಚಿಕ್ಕಪ್ಪನಿಂದಲೇ 15 ವರ್ಷಕ್ಕೆ ಮಾರಾಟವಾಗುತ್ತಾಳೆ. ನಂತರ, ಆಕೆಯನ್ನು ತೀರಾ ಕೆಟ್ಟದಾಗಿ ದುರ್ಬಳಕೆ ಮಾಡಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಸಿಕೊಂಡ ವ್ಯಕ್ತಿ ಸರ್ಕಾರದ ಬಿಗಿ ಕ್ರಮದಿಂದಾಗಿ ಮುಕ್ತಿ ಹೊಂದಿ ಸ್ವಂತವಾಗಿ ಹೊಸ ಜೀವನ ಕಟ್ಟಿಕೊಂಡಿದ್ದಾಳೆ. ಈಗ ಆಕೆಗೆ ಸುಮಾರು 28ರಿಂದ 30 ವರ್ಷ. ಮಹಿಳೆ ‘ನಾನು ಈ ಜೀವನವನ್ನು ಆರಿಸಿಕೊಳ್ಳಲಿಲ್ಲ, ಆದರೆ ಅವರು ನನ್ನ ಮನೆಯವರು ಆಗಿದ್ದರೂ ಸಮಾಜ ನನ್ನನ್ನು ನಾನು ನೋಡುವಂತೆಯೇ ನೋಡಿದರು’ ಹೇಳಿಕೊಂಡು …
Read More »
BigTv News
April 2, 2025
Breaking News, ಕರ್ನಾಟಕ, ರಾಜಕೀಯ
ಕರ್ನಾಟಕದಾದ್ಯಂತ ಟೋಲ್ ಸುಂಕ ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.ಕರ್ನಾಟಕದಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ ಬಳಕೆ ಮಾಡುವ ವಾಹನ ಸವಾರರು ಏಪ್ರಿಲ್ 1ರಿಂದ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಿದೆ.ಹೊಸ ನೀತಿಯಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿಗಳ ದೊರೆಯಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಇನ್ನೂ …
Read More »
BigTv News
April 1, 2025
Breaking News, ಕರ್ನಾಟಕ
ಕಲ್ಲಯ್ಯನಪಾಳ್ಯ ಗ್ರಾಮದ ಗಂಗಾಧರ ಮತ್ತು ಅವರಿಗೆ ಸೇರಿದ ಮತ್ತೊಂದು ಮನೆ ಹಾಗೂ ಸಾವಿತ್ರಮ್ಮ ಗುಡ್ಡಯ್ಯ, ರೂಪ ಮಂಜುನಾಥ್ ಎಂಬುವವರ ಮನೆಗೆ ಬೆಂಕಿ ತಗುಲಿದೆ.ಗಂಗಾಧರ ಮನೆಯಲ್ಲಿ ಬೆಂಕಿ ಅವಘಡದಿಂದಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಕಾರಣ ನಾಲ್ಕು ಸಾವಿರಕ್ಕೂ ಹೆಚ್ಚು ಕೊಬ್ಬರಿ, 80 ಗ್ರಾಂ ಚಿನ್ನ, ₹3.50 ಲಕ್ಷ, ರಾಗಿ, ಅಕ್ಕಿ, ದವಸ ಧಾನ್ಯಗಳು, ಮನೆ ಹಾಗೂ ಜಮೀನಿನ ದಾಖಲಾತಿ ಬೆಂಕಿಗೆ ಆಹುತಿಯಾಗಿದೆ. ಮನೆಯ ಸದಸ್ಯರು ಕೂಲಿ ಕೆಲಸಕ್ಕೆ ಹೋಗಿದ್ದರು. ಬೆಂಕಿ ಹೊತ್ತಿಕೊಂಡ …
Read More »
BigTv News
March 31, 2025
Breaking News, ಕರ್ನಾಟಕ
ಹುಣಸೆಕಟ್ಟೆ ಗ್ರಾಮದ ರತ್ನಮ್ಮ ಅವರ ಗುಡಿಸಲಿಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ಬಿದ್ದು ಎರಡು ಹಸು, ಒಂದು ಕರು, ಎರಡು ಕುರಿ ಹಾಗೂ ನಾಲ್ಕು ಮೇಕೆ ಸಹಿತ ಗುಡಿಸಲಿನಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಭಸ್ಮವಾಗಿದೆ.ಬೆಂಕಿ ಆರಿಸಲು ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಬಟ್ಟೆ, ಪಾತ್ರೆ, ದವಸಧಾನ್ಯ ಸಂಪೂರ್ಣವಾಗಿ ಭಸ್ಮವಾಗಿದೆ.
Read More »
BigTv News
March 30, 2025
Breaking News, ಕರ್ನಾಟಕ
ಅಮವಾಸ್ಯೆ ಪೂಜೆಗೆಂದು ಬೈಕ್ ನಲ್ಲಿ ಜಮೀನಿಗೆ ತೆರಳಿದ್ದ ದಂಪತಿ ಮರಳಿ ತಮ್ಮ ಸ್ವಗ್ರಾಮಕ್ಕೆ ತೆರಳುವಾಗ ರಸ್ತೆ ದಾಟುತ್ತಿರುವಾಗ ಈಚಲಕರಂಜಿಯಿಂದ ಯಾದಗಿರಿಗೆ ತೆರಳುತ್ತಿದ್ದ ಚಿಕ್ಕೋಡಿಗೆ ಘಟಕಕ್ಕೆ ಸೇರಿದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಶಂಕರಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶ್ರೀದೇವಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Read More »
BigTv News
March 27, 2025
Breaking News, ಕರ್ನಾಟಕ
ಶ್ರೀಶೈಲ ಅವರ ತಂದೆ, ಅಲ್ಲಿಪುರ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಮಂಗಳವಾರ ತಡರಾತ್ರಿ 11 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದರು.ಯರಗೋಳ ಪರೀಕ್ಷೆ ಕೇಂದ್ರಕ್ಕೆ ಶ್ರೀಶೈಲ ಬುಧವಾರ ತೆರಳಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮುಗಿದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
Read More »
BigTv News
March 27, 2025
Breaking News, ಕರ್ನಾಟಕ
ಕೊಳ್ಳೇಗಾಲ : ನಗರದ ಮೋಳೆ ಬಡಾವಣೆಯ ರೈತ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಜಮೀನಿಗೆ ಲಾರಿ ಉರುಳಿ ಬಿದ್ದಿದೆ.ಲಾರಿ ಚಾಮರಾಜನಗರದಿಂದ ಮಧ್ಯರಾತ್ರಿ ಕೂಲ್ ಡ್ರಿಂಕ್ಸ್ ತುಂಬಿಕೊಂಡು ಹೈದರಾಬಾದ್‌ಗೆ ಹೋಗುತ್ತಿತ್ತು. ಚಾಲಕ ಅಸ್ಫಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈ ಘಟನೆಯಿಂದ ನಾಶವಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಿ ವಾಹನವನ್ನು ಒಯ್ಯುವಂತೆ ಸ್ಥಳೀಯ ರೈತರು ಒತ್ತಾಯ ಮಾಡಿದರು.ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read More »
BigTv News
March 26, 2025
Breaking News, ಕರ್ನಾಟಕ, ದೆಹಲಿ, ರಾಜಕೀಯ ಸುದ್ದಿ
ಹಾಸನ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಸನ ವರ್ತುಲ ರಸ್ತೆ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿಗಳು,ರಾಜ್ಯಸಭೆ ಸದಸ್ಯರಾದ ಹೆಚ್.ಡಿ. ದೇವೇಗೌಡ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.ಅಲ್ಲದೆ, ಕರ್ನಾಟಕದ ಮೂಲಸೌಕರ್ಯ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಾವು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ನಾನಾ ಭಾಗಗಳಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಕ್ಷಿಪ್ರಗತಿಯ ಪೂರ್ಣಗೊಳಿಸಬೇಕು …
Read More »
BigTv News
March 25, 2025
Breaking News, ಕರ್ನಾಟಕ
ಪತ್ನಿ ನಡುವಿನ ಸಂಬಂಧ ಹಳಸಿತ್ತು, ಇಬ್ಬರೂ ದೂರವಾಗುವ ಬದಲು ಆಕೆಯನ್ನು ಹತ್ಯೆ ಮಾಡಲು ಕಾನ್ಸ್ಟೆಬಲ್ ಆಲೋಚಿಸಿದ್ದ. ಹಾಗಾಗಿ ಬೇರೆ ರೀತಿ ಕೊಲೆ ಮಾಡಿದರೆ ಅನುಮಾನ ಬರಬಹುದೆಂದು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಬೇಕೆಂದುಕೊಂಡಿದ್ದ, ಆತನ ಆಲೋಚನೆ ಪ್ರಕಾರ ಹಾವು ಕೂಡ ಕಚ್ಚಿದೆ, ಆದರೂ ಆಕೆ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಂಶಿಕಾಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಬಿಡುಗಡೆಯ ನಂತರ, ಅವರು ಮತ್ತು ಅವರ ತಂದೆ ಕಾನ್ಪುರದ …
Read More »
BigTv News
March 24, 2025
Breaking News, ಕರ್ನಾಟಕ
ಏನೇ ನಡಿದರೂ ಸಿಬಿಐ ತನಿಖೆಗೆ ಕೊಡಿ ಎನ್ನುವ ಬಿಜೆಪಿಯವರು ತಮ್ಮ ಸರಕಾರದಲ್ಲಿ ಸಿಡಿ ಪ್ರಕರಣ ನಡೆದಾಗ ತಡೆಯಾಜ್ಞ ತಡೆಯುವುದನ್ನು ಬಿಟ್ಟು ಸಿಬಿಐ ತಣಿಕೆಗೆ ಏಕೆ ವಹಿಸಲಿಲ್ಲ . ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ . ಸೋಮವಾರ ಪ್ರತಿಕ ಹೇಳಿಕೆ ನೀಡಿರುವ ಅವರು ಹನಿಟ್ರ್ಯಾಪ್ ಕುರಿತು ಈವರೆಗೆ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಸಮರ್ಥವಾಗಿ ತನಿಖೆ ನಡೆಸಲು ಅಧಿಕಾರಿಗಳಿದ್ದಾರೆ. ಅಷ್ಟಕ್ಕೂ ಹನಿಟ್ರ್ಯಾಪ್ ಬಗ್ಗೆ ಬಿಜೆಪಿಯವರು ಇಷ್ಟು ಕಾಳಜಿ ವಹಿಸುವುದು ಏಕೆ.
Read More »