admin
March 10, 2022
Breaking News, ಕರ್ನಾಟಕ
ಗಂಗಾವತಿ : ಅಯೋಧ್ಯೆಯಂತೆ ರಾಮಭಕ್ತ ಹನುಮಂತ ಜನಿಸಿದ ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ಧಿ ಕಾಣಬೇಕಿದೆ. ಸದ್ಯ ಬಜೆಟ್ ನಲ್ಲಿ ನೂರು ಕೋಟಿ ಅನುದಾನ ಮೀಸಲಿರಿಸಲಾಗಿದೆ. ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಬೆಳೆಸಲು ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದರ ಅವರು. ಶೀಘ್ರವೇ ಅಂಜನಾದ್ರಿಗೆ ಧಾರ್ಮಿಕ ದತ್ತಿ ಸೇರಿ ಇತರೆ ಸಚಿವರ ಜತೆ ಭೇಟಿ ನೀಡಿ ಅಗತ್ಯ ಸೌಕರ್ಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. …
Read More »
admin
February 15, 2022
Breaking News, ಕರ್ನಾಟಕ, ರಾಯಚೂರು
ರಾಯಚೂರು : ಚರಂಡಿ ವಿಚಾರಕ್ಕೆ ಯೋಧ ಹಾಗೂ ಗ್ರಾಮದ ಮುಖಂಡರ ನಡುವೆ ಗಲಾಟೆ ಸಂಭವಿಸಿ, ಯೋಧನ ತಾಯಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಡೆದಿದೆ. ಯೋಧ ಅಮರೇಶ ಹಾಗೂ ಗ್ರಾಮದ ಮುಖಂಡ ಶರಣಪ್ಪಗೌಡ ಅವರ ನಡುವೆ ಗಲಾಟೆಯಾಗಿದೆ. ಶರಣಪ್ಪಗೌಡ ಅವರ ಗುಂಪಿನಿಂದ ಅಮರೇಶ ಅವರ ತಾಯಿ ವೀರಮ್ಮ ಲಿಂಗಪ್ಪ(75) ಎನ್ನುವವರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು …
Read More »
admin
February 12, 2022
Breaking News, News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
admin
February 11, 2022
Breaking News, ಕರ್ನಾಟಕ
ದೇವನಹಳ್ಳಿ: ಮನೆ ಬಿಟ್ಟು ಬಂದಿದ್ದ ಯುವತಿಯನ್ನ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ನಾಗೇಶ್ ಬಂಧಿತ ಆರೋಪಿ. ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಿದ್ದು ಯುವತಿಯನ್ನು ಏರ್ಪೋಟ್ ಭದ್ರತಾ ಪಡೆ ಸಿಐಎಸ್‌ಎಪ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆರೋಪಿ ನಾಗೇಶನ್ನು …
Read More »
admin
February 8, 2022
Breaking News, ಕರ್ನಾಟಕ
ನವಲಗುಂದ: ಪಟ್ಟಣದ ನೀಲಮ್ಮನ ಕೆರೆ ಎದುರು ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಣ್ಣಿಗೇರಿಯತ್ತ ಹೊರಟ ಟಿಪ್ಪರ್‌ವೊಂದು ಪಟ್ಟಣದ ನೀಲಮ್ಮನ ಕೆರೆ ಎದುರು ಇರುವ ಕ್ರಾಸ್ ಬಳಿ ತಿರುಗುವ ಸಂದರ್ಭದಲ್ಲಿ ಏಕಾಏಕಿ ಬೈಕ್ ಮೇಲೆ ಹರಿದಿದೆ. ತಕ್ಷಣವೇ ಸವಾರ ಬೈಕ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಸ್ಥಳಕ್ಕೆ ನವಲಗುಂದ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಭೇಟಿ ನೀಡಿ, ಲಾರಿ ಹಾಗೂ ಚಾಲಕನನ್ನು ವಶಕ್ಕೆ …
Read More »
admin
February 7, 2022
Breaking News, ಕರ್ನಾಟಕ
ಗಂಗಾವತಿ: ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಯುವಕ ಯುವತಿ ಅಪ್ಪು ಫೋಟೊ ಎದುರಿಗೆ ಸತಿಪತಿಗಳಾಗಿ ಇಂದು ವಿವಾಹವಾಗಿ ಅಭಿಮಾನ ಮೆರೆದಿದ್ದಾರೆ. ಸೋಮವಾರ ಕಡೆಬಾಗಿಲು ಗ್ರಾಮದ ವಾಲ್ಮೀಕಿ ಬಂಧುಗಳ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿರುವ ನಿಂಗರಾಜ್ ಮತ್ತು ಲಕ್ಷ್ಮಿ ಇವರು ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರವನ್ನ ವೇದಿಕೆ ಮೇಲಿರಿಸಿ ಸತಿಪತಿಗಳಾದರು.
Read More »
admin
February 4, 2022
Breaking News, ಕರ್ನಾಟಕ, ಬೆಂಗಳೂರು
ಶ್ರೀನಿ ನಿರ್ದೇಶನ ಮತ್ತು ನಟನೆಯ ಬಹುನಿರೀಕ್ಷಿತ ಚಿತ್ರ ‘ಓಲ್ಡ್‌ಮಾಂಕ್’ ಫೆ.25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಅದೇ ಥರ ‘ವಿಕ್ರಾಂತ್ ರೋಣ’ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ಅವತ್ತೇ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿ ಕೊಟ್ಟಮಾತನ್ನು ಉಳಿಸಿಕೊಂಡಿದೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೇ ಫೆ.25ರಂದೇ ಸಿನಿಮಾ ಬಿಡುಗಡೆ ಆಗಲಿದೆ.
Read More »
admin
February 2, 2022
Breaking News, ಕರ್ನಾಟಕ
ಅವರಿಬ್ಬರೂ ಮೂಗರು , ಜೊತೆಗೆ ಕಿವುಡುತನ . ಶಾಲೆಯ ಅಂಗಳದಲ್ಲಿ ಸ್ನೇಹಿತರಾಗಿದ್ದ ಅವರು, ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತಿಯೇ ಅವರಿಬ್ಬರ ಮಧ್ಯದಲ್ಲಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಅವರ ಮಧ್ಯೆ ಆರಂಭದಲ್ಲಿ ಇದ್ದದ್ದು ಕೇವಲ ಕೈಸನ್ನೆ, ಕಣ್ಸನ್ನೆ ಮಾತ್ರ . ನಂತರ ಅವರಿಗೆ ವರದಾನವಾಗಿದ್ದು ವಾಟ್ಸಾಪ್ . ಇದೀಗ ಅದೇ ವಾಟ್ಸಾಪ್ ಮೂಲಕ ಅವರ ಪ್ರೀತಿ ಮದುವೆವರೆಗೂ ತಲುಪಿದೆ. ಹರಪನಹಳ್ಳಿ ತಾಲ್ಲೂಕಿನ ಕಡಬಗೇರಿ ಗ್ರಾಮದ ಅಕ್ಷತಾ ಬಿ . ಹಾಗೂ …
Read More »
admin
February 1, 2022
Breaking News, ಕರ್ನಾಟಕ
ಊಟಿ : ಮಹಿಳಾ ಪೊಲೀಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಉಪ ತಹಸೀಲ್ದಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಬು (35) ಊಟಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತನಿಗೆ ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ಸಹಕರಿಸಿದ್ದರು. ಮಹಿಳಾ ಪೇದೆಯೊಬ್ಬರಿಗೆ ಉಪ ತಹಸೀಲ್ದಾರ್ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪುರುಷ ಪೇದೆಯೊಬ್ಬರು ವಾಹನಗಳನ್ನು …
Read More »
admin
January 31, 2022
Breaking News, ಕರ್ನಾಟಕ
ಕಲಘಟಗಿ: ತಾಲ್ಲೂಕಿನ ತಂಬೂರ ಕ್ರಾಸ್ ಬಳಿ ಹುಬ್ಬಳ್ಳಿ- ಕಾರವಾರ ರಾಷ್ಟೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ಲಾರಿ, ಬೈಕ್ ಡಿಕ್ಕಿಯಲ್ಲಿ ಬೈಕ್ ಸವಾರರಾದ ಧಾರವಾಡ ಜಿಲ್ಲಾ ಆಸ್ಪತ್ರೆಯ ಇಬ್ಬರು ನೌಕರಾದ ನೂರಅಹ್ಮದ್ ಬೆಳಗಾಮ್ (38) ಹಾಗೂ ಜಾವಿದ್ ಪಠಾಣ್ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ …
Read More »