Breaking News

ಕರ್ನಾಟಕ

ಪೊಲೀಸ್ ಕಾನ್​ಸ್ಟೆಬಲ್​ ಹೆಂಡತಿ ನೇಣಿಗೆ ಶರಣು

ಚಿಕ್ಕನಾಯಕನಹಳ್ಳಿ: ಪೊಲೀಸ್ ಕಾನ್​ಸ್ಟೆಬಲ್​ವೊಬ್ಬರ ಹೆಂಡತಿ ನೇಣು ಹಾಕಿಕೊಂಡ ಪ್ರಕರಣ ನಡೆದಿದೆ. ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪೊಲೀಸ್​ ವಸತಿಗೃಹದಲ್ಲಿ ನೇಣು ಹಾಕಿಕೊಂಡ ಪ್ರಕರಣ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಪೊಲೀಸ್ ವಸತಿಗೃಹದಲ್ಲಿ ವಾಸವಿದ್ದ ಪೊಲೀಸ್ ಕಾನ್​ಸ್ಟೆಬಲ್ ಶಶಿಧರ್ ಎಂಬವರ ಪತ್ನಿ ಲಾವಣ್ಯ (21) ಆತ್ಮಹತ್ಯೆ ಮಾಡಿಕೊಂಡವರು. ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಲಾವಣ್ಯ-ಶಶಿಧರ್ ದಂಪತಿಗೆ 6 ತಿಂಗಳಿನ ಗಂಡು ಮಗುವಿದೆ. ಈಕೆ ಮೂಲತಃ ಹುಳಿಯಾರು ಹೋಬಳಿ ಕಲ್ಲಹಳ್ಳಿ …

Read More »

ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ಅನಿವಾರ್ಯತೆ ಇಲ್ಲ

ಕೋಲಾರ: ‘ಕಾಂಗ್ರೆಸ್‌ ಬಿಟ್ಟು ಬಂದ ನಮಗೆ ಮತ್ತೆ ಆ ಪಕ್ಷಕ್ಕೆ ಹೋಗುವ ಅನಿವಾರ್ಯತೆ ಇಲ್ಲ, ಬಿಜೆಪಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದೆ’ ಎಂದು ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ‘ಒಂದು ವೇಳೆ ಕಾಂಗ್ರೆಸ್‌ ಬಿಟ್ಟು ಬಂದವರ ಪೈಕಿ ಕನಿಷ್ಠ ಒಬ್ಬರೂ ಕಾಂಗ್ರೆಸ್‌ಗೆ ವಾಪಸ್‌ ಹೋದರೆ ಸಿದ್ದರಾಮಯ್ಯ ಅವರು ಆ ಪಕ್ಷದಲ್ಲಿ ಇರುವುದಿಲ್ಲ.ಏಕೆಂದರೆ ಸಿದ್ದರಾಮಯ್ಯರು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ನಾವು ಏನಾದರೂ ಕಾಂಗ್ರೆಸ್‌ಗೆ ವಾಪಸ್‌ ಹೋದರೆ …

Read More »

ಅಭಿವೃದ್ಧಿ ಕೆಲಸದ ಪ್ರತಿಫಲದಿಂದಲೇ ಬಳ್ಳಾರಿ ಉಸ್ತುವಾರಿ ಸಿಕ್ಕಿದೆ : ಸಚಿವ ಶ್ರೀರಾಮುಲು

ಬೆಂಗಳೂರು: ನನ್ನ ಒಳ್ಳೆ ಕೆಲಸದ ಹೆಜ್ಜೆ ಗುರುತುಗಳಿಂದಲೇ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯ ಅವಕಾಶ ಸಿಕ್ಜಿದೆ ಎಂದು ಸಚಿವ ಬಿ ಶ್ರೀರಾಮುಲು ಮಂಗಳವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿ ನನಗೆ ಜನ್ಮ ಕೊಟ್ಟ ಸ್ಥಳ, ನಾನು ಅನೇಕ ಜಿಲ್ಲೆಗಳಲ್ಲೂ ಒಳ್ಳೆ ಕೆಲಸ ಮಾಡಿದ್ದೇನೆ.ನಾನು ಎಲ್ಲ ಜಿಲ್ಲೆಗಳಲ್ಲೂ ನನ್ನ ಕೆಲಸದ ಹೆಜ್ಜೆ ಗುರುತು ಗಳನ್ನು ಹಾಕಿಕೊಂಡು ಬಂದಿದ್ದೇನೆ. ಅದಕ್ಕಾಗಿ ನನಗೆ ಇವಾಗ ಬಳ್ಳಾರಿ ಉಸ್ತುವಾರಿ ನೀಡಿದ್ದಾರೆ ಎಂದರು. ಇತ್ತೀಚೆಗೆ ನನಗೆ ಬಳ್ಳಾರಿಯಲ್ಲಿ ಸೇವೆ …

Read More »

ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್‌ ಪಲ್ಟಿ – ಹಾಲಿಗಾಗಿ ಮುಗಿಬಿದ್ದ ಜನ

ಮಂಡ್ಯ: ನಿಯಂತ್ರಣ ತಪ್ಪಿ ಹಾಲಿನ ಕ್ಯಾಂಟರ್ ಬಿದ್ದಿದ್ದೆ ತಡ ಅಕ್ಕ-ಪಕ್ಕದಲ್ಲಿ ಇದ್ದ ಜನರು ಬಿಂದಿಗೆ, ಕ್ಯಾನ್, ಪಾತ್ರೆಗಳನ್ನು ತಂದು ಹಾಲು ತುಂಬಿಕೊಳ್ಳಲು ಮುಗಿ ಬಿದ್ದ ಘಟನೆ ಮಂಡ್ಯದ ಇಂಡುವಾಳು ಗ್ರಾಮದ ಬಳಿ ಜರುಗಿದೆ. ಮಂಡ್ಯ ಹಾಲು ಒಕ್ಕೂಟಕ್ಕೆ ಸೇರಿದ ಹಾಲಿನ ಕ್ಯಾಂಟರ್ ರಾಗಿಮುದ್ದನಹಳ್ಳಿ ಗ್ರಾಮದಿಂದ, ಹಾಲನ್ನು ತುಂಬಿಕೊಂಡು ಮಂಡ್ಯದ ಗೆಜ್ಜಲುಗೆರೆಯಲ್ಲಿರುವ ಮನ್‍ಮುಲ್‍ಗೆ ಬರ್ತಾ ಇತ್ತು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ವೇಳೆ ಇಂಡುವಾಳು ಗ್ರಾಮದ ಬಳಿ ನಿಯಂತ್ರಣ ತಪ್ಪಿ ಹಾಲು ತುಂಬಿದ್ದ ಟ್ಯಾಂಕರ್ …

Read More »

19 ಐಎಎಸ್ ಅಧಿಕಾರಿಗಳು ವರ್ಗಾವಣೆ

ಬೆಂಗಳೂರು: ಕಳೆದ ಡಿಸೆಂಬರ್ ತಿಂಗಳ ಕೊನೆಯ ದಿನ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಆಡಳಿತ ವರ್ಗದಲ್ಲಿ ಭಾರೀ ಬದಲಾವಣೆ ಮಾಡಿದ್ದ ಮುಖ್ಯಮಂತ್ರಿಯವರು ಪುನಃ ಮತ್ತೆ ಸರ್ಜರಿ ನಡೆಸಿದ್ದಾರೆ. ಇದೀಗ ಆಡಳಿತವರ್ಗಕ್ಕೆ ಮತ್ತೆ ಮೇಜರ್ ಸರ್ಜರಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಗೊಂಡ ಅಕಾರಿಗಳ ಪಟ್ಟಿ1. ಅನಿಲ್‍ಕುಮಾರ್.ಬಿ.ಎಚ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.2.ಡಾ.ಶಾಮಲ ಇಕ್ಬಾಲ್ – ಕಾರ್ಯದರ್ಶಿ, …

Read More »

ಒಮಿಕ್ರಾನ್ ಕುರಿತು ಆತಂಕ ಪಡುವ ಅಗತ್ಯವಿಲ್ಲ

ಬೆಂಗಳೂರು : ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಪ್ರಭಾವದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ‌ ಒಂದೇ ದಿನ 50 ಸಾವಿರ ಹೊಸ ಪ್ರಕರಣ ಪತ್ತೆಯಾಗಿವೆ. ಇತ್ತ ಸೋಂಕಿತರ ಸಂಖ್ಯೆ ಇನ್ನಷ್ಟು ಉತ್ತುಂಗಕ್ಕೇರುವ ಸಾಧ್ಯತೆ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಕೋವಿಡ್ ಮೂರನೇ ಅಲೆಯು ಜ್ವರ, ಕೆಮ್ಮು, ನೆಗಡಿಗಷ್ಟೇ ಸೀಮಿತವಾಗುತ್ತಾ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡುತ್ತೆ.‌ ಯಾಕೆಂದರೆ, 50,000 ಕೇಸ್ ಬಂದ್ರೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ.‌ ಹೀಗಾಗಿ, ಆತಂಕ …

Read More »

ಟ್ವಿಟರ್ ವಾರ್ : ಸಿದ್ಧರಾಮಯ್ಯ ವಿರುದ್ಧ ಕಿಡಿ ಕಾರಿದ ಹೆಚ್ ಡಿಕೆ

ಬೆಂಗಳೂರು: ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ! ಅಂತಾರೆ. ಇದು ಭ್ರಮೆಯ ಪರಮಾವಧಿ. ಮತ್ತೆ ಸಿಎಂ ಆಗಲ್ಲ ಎಂದು ಖಚಿತವಾದ ಮೇಲೆ ಹತಾಶೆ, ಅಸಹನೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ, ಪಾಪ. ಇದು ವಿಪರೀತಕ್ಕೆ ಹೋಗಿದೆ ಎನ್ನುವುದಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕೊಟ್ಟ ಹೇಳಿಕೆಗಳೇ ಸಾಕ್ಷಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಿದ್ಧರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಅವರು, ‘ಸ್ವಯಂ ಘೋಷಿತ ಸಂವಿಧಾನ ಪಂಡಿತ …

Read More »

ಶಿಕ್ಷಕರ ನೇಮಕಾತಿ ಕುರಿತು ಅಧಿಸೂಚನೆ ಪ್ರಕಟ

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಬೋಧನೆಗೆ 15 ಸಾವಿರ ಪದವೀಧರ ಶಿಕ್ಷಕರ (ಜಿಪಿಟಿ) ನೇಮಕಾತಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಬಾರಿ ಎಂಜಿನಿಯರಿಂಗ್‌ ಶಿಕ್ಷಣ ಪಡೆದಿರುವವರಿಗೂ ಶಿಕ್ಷಕರಾಗುವ ಅವಕಾಶ ಕಲ್ಪಿಸಿದೆ. 45 ವರ್ಷಗಳ ವರೆಗಿನ ವಯೋಮಿತಿ ನೀಡಲಾಗಿದೆ. ಪದವಿಯಲ್ಲಿ ಶೇ.50ರಷ್ಟು ಅಂಕ ಮತ್ತು ‘ಬಿ.ಇಡಿ’ ವಿದ್ಯಾರ್ಹತೆ ಹೊಂದಿದವರನ್ನು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. …

Read More »

ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಟ್ಟು 23,078 ಮಂದಿ ಅತಿಥಿ ಶಿಕ್ಷಕರಿಗೆ ಒಟ್ಟು 121.47 ಕೋಟಿ ರೂ. ಗೌರವಧನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More »

ಸೋಮಶೇಖರ್‌ ವಿರುದ್ಧ ಹರಿಹಾಯ್ದ ಮಂಜುನಾಥ್‌

ಮೈಸೂರು: ‘ಸಚಿವ ಎಸ್.ಟಿ.ಸೋಮಶೇಖರ್‌ ಅವರು ಕೇವಲ ಬಾವುಟ ಹಾರಿಸಲು ಮೈಸೂರು ಜಿಲ್ಲೆಗೆ ಬಂದು ಹೋಗುವ ಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಬಿಡುಗಡೆ ಮಾಡಿ, ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ’ ಎಂದು ಹುಣಸೂರು ಶಾಸಕ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಹರಿಹಾಯ್ದರು. ‘ಸಚಿವರು ಜಿಲ್ಲೆಗೆ ಇದುವರೆಗೆ ಯಾವುದೇ ಕೊಡುಗೆ ನೀಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ₹ 22,365 ಕೋಟಿ ವಿಶೇಷ ಅನುದಾನ ನೀಡಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಮೈಸೂರು ಮಹಾನಗರಕ್ಕೇ ₹ 3,800 ಕೋಟಿ ನೀಡಿದ್ದಾರೆ. …

Read More »