Breaking News

ಹಾವೇರಿ

ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ದಂಪತಿಯ ಬಂಧನ.

‘ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಭಾಗ್ಯ ಗುಡಿಗಾರ ಹಾಗೂ ಅವರ ಪತಿ ರಮೇಶನನ್ನು ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪದಡಿ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 7 ಖಾಲಿ ಚೆಕ್ ಜಪ್ತಿ ಮಾಡಿದ್ದಾರೆ. ಖ್ವಾಜಾಮುದ್ದೀನ್, ಸ್ಥಳೀಯ ಬ್ಯಾಂಕ್‌ವೊಂದರಲ್ಲಿ ಫಿಗ್ಮಿ ಕಲೆಕ್ಟರ್ ಆಗಿದ್ದಾರೆ. ಮದುವೆ ಬಾಸಿಂಗ ತಯಾರಿ ಕೆಲಸ ಮಾಡುತ್ತಿದ್ದ ದಂಪತಿ, ವಿವಿಧ ಸಂಘಗಳಲ್ಲಿ ಸಾಲ ಪಡೆದು ಖ್ವಾಜಾಮುದ್ದೀನ್‌ಗೆ ನೀಡಿದ್ದರೆಂಬ ಮಾಹಿತಿ ಇದೆ. ಇಬ್ಬರ ನಡುವೆಯೂ ಹಲವು ಬಾರಿ ಹಣದ …

Read More »

ಅಣುತ್ತಿರ್ಣ ಶಂಕೆಯಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ವಿದ್ಯಾರ್ಥಿಗಳು ಅನುತ್ತೀರ್ಣ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರಿ ಈ ಬಗ್ಗೆ ಉಪಾಧ್ಯಾಯರು ಮನೆಯವರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಹಾವೇರಿಯ ವಿದ್ಯಾರ್ಥಿ ಗುರುವಾರ ಕೊನೆ ಪರೀಕ್ಷೆ ಮುಗಿಸಿ ಮನೆಗೆ ಬಂದು ಪರೀಕ್ಷೆ ಚೆನ್ನಾಗಿ ಆಗಿಲ್ಲ ಎಂದು ಕಣ್ಣೀರಿಟ್ಟು ಮನೆಯವರ ಮುಂದೆ ಹೇಳಿಕೊಂಡಿದ್ದಳು. ಸಂಜೆ ಕೊನೆ ಬಾಗಿಲನ್ನು ಹಾಕಿಕೊಂಡವಳು ತೆಗೆದೆ ಇರಲಿಲ್ಲ. ಶುಂಠಿಗೆ ತಂದ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಮನೆಯವರು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ …

Read More »

ಆತ್ಮಹತ್ಯೆ : ಆಟೊ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ

ಆಟೋ ಚಾಲಕ ವಿನಾಯಕ್ ಸುರೇಶ ಕಂಬಾಳಿಮಠ ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸೆಲ್ಫಿ ವಿಡಿಯೊ ಚಿತ್ರೀಕರಿಸಿ ಹಾಗೂ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ನೇಹಿತರು ಹಾಗೂ ಇತರರು ನನ್ನ ಬಳಿ ಸಾಲ ಪಡೆದಿದ್ದರ, ಅದನ್ನು ವಾಪಸು ಕೊಟ್ಟಿಲ್ಲ ಅದನ್ನು ವಸೂಲಿ ಮಾಡಿ ನನ್ನ ಮನೆಯವರಿಗೆ ಕೊಡಿಸಿ’ ಎಂದು ವಿನಾಯಕ್ ವಿಡಿಯೊದಲ್ಲಿ ಹೇಳಿದ್ದಾರೆ.ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು,ನಿಖರ ಕಾರಣವೇನು ಎಂಬುದು ಪೊಲೀಸರ ಸಮಗ್ರ ತನಿಖೆಯಿಂದ ತಿಳಿಯಬೇಕಿದೆ.

Read More »

ಹಾವೇರಿ : ಸ್ವಾತಿ‌ ಬ್ಯಾಡಗಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಯಾವುದೇ ಕಾರಣಕ್ಕೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡುವುದಿಲ್ಲ. ಹತ್ಯೆಗೀಡಾದ ಸ್ವಾತಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಹತ್ಯೆ ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಪ್ರಕರಣವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Read More »

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ , ತೀವ್ರ ಗಾಯಗೊಂಡ ವೃದ್ಧೆ.

‘ದಾವಣಗೆರೆ ಜಿಲ್ಲೆಯ ಹರಿಹರ ಗಾಂಧಿನಗರದ ನಿವಾಸಿ ಆಷಾಬಿ ಅವರು ಸೋಮವಾರ ಕುಟುಂಬ ಸಮೇತರಾಗಿ ಮಾರುತಿ ರಿಟ್ಜ್ ಕಾರಿನಲ್ಲಿ ಹಾನಗಲ್ ಕಡೆಯಿಂದ ಹಾವೇರಿ ಕಡೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಹಾವೇರಿ ತಾಲ್ಲೂಕಿನ ಸಂಗೂರು ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ತೀವ್ರ ಗಾಯಗೊಂಡು ವೃದ್ಧೆ ಆಷಾಬಿ ಹನೀಫ್‌ಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More »

ಹಾವೇರಿ:ಆಲದಮ್ಮ ಜಾತ್ರಾ ಮಹೋತ್ಸವ.

ಇಂದು ಹಾವೇರಿ ಜಿಲ್ಲೆಯ ಬಸ್ಸಾಪುರ ಗ್ರಾಮದಲ್ಲಿ ಆಲದಮ್ಮ ಜಾತ್ರಾಮಹೋತ್ಸವನ್ನು ವಿಜೃಂಭಣೆಯಿಂದ ಮಾಡಿದರು. ಗ್ರಾಮದ ಎಲ್ಲಾಜನರು ತಮ್ಮ ತಮ್ಮ ಬೇಡಿಕೆಗಳ್ಳನ್ನು ಈಡೇರಿಸಿದರು. ವಿಶೇಷ ಹಾರಗಳು, ಡೊಳ್ಳು, ನಗಾರಿ ಭಾರಿಸುತ್ತ ದೇವಿ ಗುಡಿಗೆ ಮೆರವಣಿಗೆ ಹೊರಟರು. ಸಂಜೆ ದೈವನಂಬಿಕೆ ಜೊತೆಗೆ ಕುರಿ ಕಡಿದು ಸಂಭ್ರಮಿಸುತ್ತಾರೆ. ಇಲ್ಲಿಯ ಜನರು ಗ್ರಾಮ ದೇವತೆಯೂ ಊರನ್ನು ಕಾಪಾಡುತ್ತಾಳೆ ಎಂದು ನಂಬುತ್ತಾರೆ. ಓಣಿಯ ಎಲ್ಲಾ ದೇವಸ್ಥಾನಗಳಿಗೂ ಹಣ್ಣು ಕಾಯಿ ನೀಡುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಹಿರಿಯರು, ಕಿರಿಯರು, ಯುವಕರು, ಯುವತಿಯರು, …

Read More »

ಅಕ್ರಮ:ಶ್ರೀಗಂಧ ಕಡಿದು ಇಬ್ಬರು ಪರಾರಿ, ಒಬ್ಬನ ಬಂಧನ

ಧುಂಡಶಿ ವಲಯದಲ್ಲಿ ಕಾಯ್ದಿಟ್ಟ ಅರಣ್ಯದ ಶ್ರೀಗಂಧ ನೆಡುತೋಪನಲ್ಲಿ ಅಕ್ರಮವಾಗಿ ಗಿಡಗಳನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು ಒಬ್ಬ ಆರೋಪಿ ನಾಗಪ್ಪ ರಾಮಪ್ಪ ಇಳಿಗೇರ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಶಿಗ್ಗಾಂವ ಶಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಪಿ.ಡಿ.ಮಣಕೂರ ಹಾಗೂ ಧುಂಡಶಿ ವಲಯದ ಗಸ್ತು ಅರಣ್ಯ ಪಾಲಕರಾದ ಗಣಪತಿ ಶಿವಣ್ಣನವರ,ಯಂಕಪ್ಪ ಹೊಸುರ, ಮಹೇಶ ಕಲ್ಲಮ್ಮನವರ, ಮೋಹನ ಶಾಮನೂರ, ಪ್ರಕಾಶಕುಮಾರ ಬಂಕಾಪುರ ಭಾಗವಹಿಸಿದ್ದರು.

Read More »

ಅನೈತಿಕ ಸಂಬಂಧ ಮುಚ್ಚಿ ಹಾಕಲು ಪುತ್ರ, ಮೈದುನ ಪತ್ನಿಯ ಕೊಲೆ – ತಾಯಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ.

ಅನೈತಿಕ ಸಂಬಂದ ಮುಚ್ಚಿ ಹಾಕಲು ಪುತ್ರ ಹಾಗೂ ಮೈದುನನ ಹೆಂಡತಿಯನ್ನು ಕೊಲೆಗೈದ ತಾಯಿ ಹಾಗೂ ಪ್ರಿಯಕರನಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.ಅಕ್ರಮ ಸಂಬಂಧಕ್ಕಾಗಿ ಬಾವಿಗೆ ದೂಕಿ ಸ್ವಂತ ಮಗನನ್ನು ಕೊಂದಿದ್ದಲ್ಲದೇ ಮಹಿಳೆಯೊಬ್ಬಳನ್ನು ಮಲಗಿದ್ದಾಗಲೇ ಬೆಂಕಿ ಹಚ್ಚಿ ಸುಟ್ಟಿರುವ ಆರೋಪದ ಮೇಲೆ ಸುಧಾ ಸುರೇಶ ಕರಿಗಾರ ಮತ್ತು ಆಕೆಯ ಪ್ರಿಯಕರ ರಮೇಶ ಕೆಂಚಪ್ಪ ಬಸ್ತವಾಡೆ ಅವರನ್ನು ಬಂಧಿಸಲಾಗಿದೆ.

Read More »

ಹಾವೇರಿ:ಮೃತ ಯುವತಿಯ ಮನೆಗೆ ಸಂಸದ ಬೊಮ್ಮಾಯಿ ಭೇಟಿ.

ಮಾಸೂರ ಗ್ರಾಮದ ಸ್ವಾತಿ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹತ್ಯೆಗೀಡಾದ ಸ್ವಾತಿ ಮನೆಗೆ ಭೇಟಿ ನೀಡಿದ್ದಾರೆ.ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಕೂಡ ಉಪಸ್ಥಿತರಿದ್ದರು.ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Read More »

ಅಪರಿಚಿತ ಶವ ಸಂಸ್ಕಾರ ಮಾಡಿದ ಪೊಲೀಸರು! ಕೊನೆಗೂ ಪತ್ತೆಯಾದ “ಪಾಪಿ”.

ರಾಣೇಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ರಮೇಶ್ ಬ್ಯಾಡಗಿ ಹಾವೇರಿಯ ಜಿಲ್ಲೆಯಲ್ಲಿ 22 ವರ್ಷದ ಯುವತಿಯ ಕೊಲೆ ಆಗಿದ್ದು ಜಸ್ಟಿಸ್ ಫಾರ್ ಸ್ವಾತಿ ಎಂಬ ಪೋಸ್ಟ್ ವೈರಲ್ ಆಗಿದ್ದು.ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ನಡೆದಿದೆ.ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿದೆ.ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು,ನಯಾಜ್‌ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Read More »