Breaking News

ಭರತ್ ಶಿಗ್ಗಾವಿಯಿಂದ ಸ್ಪರ್ಧಿಸಲ್ಲ : ಬೊಮ್ಮಾಯಿ

ಹುಬ್ಬಳ್ಳಿ: ನನ್ನ ಪುತ್ರ ಭರತ್ ಬೊಮ್ಮಾಯಿ ಗೆ ಶಿಗ್ಗಾವಿ ಟಿಕೇಟ್ ಕೇಳಿಲ್ಲ.‌ ಭರತ್ ಶಿಗ್ಗಾವಿಯಿಂದ ಸ್ಪರ್ಧಿಸಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ಸವಣೂರು ಕ್ಷೇತ್ರದ ಜನ ಭರತ್ ಗೆ ಟಿಕೇಟ್ ಕೊಡಲು ಒತ್ತಡ ತಂದಿಲ್ಲ.ಜೋಶಿಯವರನ್ನು ಭೇಟಿಯಾಗಲು ಶಿಗ್ಗಾವಿ ಕ್ಷೇತ್ರದ ಜನ ಹೋಗಿದ್ದ ಉದ್ದೇಶವೇ ಬೇರೆ.ಆದ್ರೆ ಅದು ಬೇರೆ ರೀತಿಯ ಪ್ರಚಾರವಾಗಿದೆ.ಪಕ್ಷಕ್ಕೆ ಕೆಲಸ ಮಾಡಿದ ನಿಷ್ಠರಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. ಕಷ್ಟದಲ್ಲಿ ಪಕ್ಷ ಕಟ್ಟಿದವರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಜೋಶಿಯವರು ಭರತ್ ಹೆಸರು ಹೇಳಿದ್ದಾರೆ. ನಾನು ನನ್ನ ಮಗನಿಗೆ ಟಿಕೇಟ್ ಕೇಳಿಲ್ಲ. ನನ್ನ ಮಗ ಸ್ಪರ್ಧೆ ಮಾಡುವ ವಿಚಾರವಿಲ್ಲ ಎಂದರು.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *