ಮೈಸೂರು: ದೇಶದಲ್ಲಿ ಉತ್ತರ ಪ್ರದೇಶದ ಸಿ.ಎಂ ಯೋಗಿ ಆದಿತ್ಯನಾಥ ಅವರಂತೆ ಮತ್ತೊಬ್ಬ ಲೀಡರ್ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆಗಾಗಿ 350ಕ್ಕೂ ಹೆಚ್ಚು ಜನ ಕ್ರಿಮಿನಲ್‌ಗಳನ್ನು ಉತ್ತರ ಪ್ರದೇಶದಲ್ಲಿ ಎಂಟರ್ ಮಾಡಲಾಗಿದೆ. ದೇಶದಲ್ಲಿ ಈ ರೀತಿಯ ಮತ್ತೊಬ್ಬ ಲೀಡರ್ ಇಲ್ಲ.
ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಕಳೆದ ಏಳು ವರ್ಷಗಳಿಂದ ಕಾನೂನು ಸುವ್ಯವಸ್ಥೆಗೆ ಮಾದರಿಯಾಗಿದೆ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಪ್ರಭಾವ ಇರುವ ಇದೆ. ರೌಡಿಗಳ ಹಾವಳಿ ಇದೆ. ಈ ರೀತಿಯ ಹಲವು ಸಮಸ್ಯೆಗಳಿರುವ ರಾಜ್ಯದಲ್ಲಿ ಅಧಿಕಾರ ನಡೆಸುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ, ಯೋಗಿ ಆದಿತ್ಯನಾಥ ಅವರು ರೌಡಿಗಳು ಹಾಗೂ ಗುಂಡಾಹಿಸಂನನ್ನು ಮಟ್ಟವಾಕಿದ್ದಾರೆ ಎಂದಿದ್ದಾರೆ.
ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಸಣ್ಣ ವಿಚಾರವಲ್ಲ. ಯೋಗಿ ಆದಿತ್ಯ ಅವರು ಅದನ್ನು ಸಾಬೀತು ಮಾಡಿದ್ದಾರೆ. ಆ ರೀತಿ ಧೈರ್ಯ ತೋರಿಸುವ ಮತ್ತೊಬ್ಬ ಲೀಡರ್ ಎಲ್ಲಿದ್ದಾರೆ ತೋರಿಸಿ. ಮುನ್ನೂರಕ್ಕೂ ಹೆಚ್ಚು ಎಂಟರ್ ಎಂದರೆ ಸುಮ್ಮೆನಾ ಎಂದು ಪ್ರತಾಪ್ ಸಿಂಹ ಕೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

