Breaking News

ದೇಶ ವಿರೋಧಿ ವಿಡಿಯೋ ಹೇಳಿಕೆ, ಪೋಸ್ಟ್‌ಗಳನ್ನು ಮಾಡಿದವರಿಗೆ ಜೀವಾವಧಿ ಶಿಕ್ಷೆ

ಉತ್ತರಪ್ರದೇಶ: ಉತ್ತರ ಪ್ರದೇಶದ ಡಿಜಿಟಲ್ ಮಿಡಿಯಾ ಪಾಲಿಸಿ ಅನ್ವಯ ದೇಶ ವಿರೋಧಿ ವಿಡಿಯೋ ಹೇಳಿಕೆ ಹಾಗೂ ಪೋಸ್ಟ್‌ಗಳನ್ನು ಮಾಡಿದವರಿಗೆ ಕಠಿಣ ಅಂದ್ರೆ ಜೀವಾವಧಿ ಶಿಕ್ಷೆ ಹಾಗೂ ರಾಷ್ಟ್ರೀಯತೆಯನ್ನು ಉತ್ತೇಜಿಸುವವರಿಗೆ ದೊಡ್ಡ ಆಫರ್ ಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರ ಜನರಿಗೆ ನೀಡಿದೆ.

ಉತ್ತರ ಪ್ರದೇಶದ ಹೊಸ ನಿಯಮದನ್ವಯ, ಸೋಷಿಯಲ್ ಮಿಡಿಯಾಗಳಾದ ಎಕ್ಸ್ ಫೇಸ್‌ಬುಕ್, ಯೂಟ್ಯೂಬ್, ವಾಟ್ಸಾಪ್ ಈ ತರಹದ ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಅನಿಸುವ ಪೋಸ್ಟ್‌ಗಳನ್ನಾಗಲಿ, ವಿಡಿಯೋಗಳನ್ನಾಗಲಿ ಹೇಳಿಕೆಗಳನ್ನಾಗಲಿ ನೀಡಿದವರಿಗೆ ದಂಡದ ಜೊತೆ ಜೊತೆಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.

ಈ ರೀತಿಯ ಚಟುವಟಿಕೆಗಳನ್ನು ಐಟಿ ಆ್ಯಕ್ಟ್ ಸೆಕ್ಷನ್ 66E ಮತ್ತು 66F ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ. ಯುಪಿ ಸರ್ಕಾರ ತಂದಿರು ಹೊಸ ನೀತಿ ನಿಯಮಗಳಲ್ಲಿ ರಾಷ್ಟ್ರೀಯತೆಯನ್ನು ಉತ್ತೇಜಿಸುವ ಖಾತೆ ಹೊಂದಿದವರಿಗೆ ಭರ್ಜರಿ ಬಹುಮಾನ ಘೋಷಿಸಿದೆ.

ಎಕ್ಸ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಗಳಲ್ಲಿ ರಾಷ್ಟ್ರೀಯತೆಯ ಕುರಿತು ಧನಾತ್ಮಕ ಅಂಶಗಳನ್ನು ಉಲ್ಲೇಖಿಸುವವರಿಗೆ. ವಿಡಿಯೋ ಮಾಡುವವರಿಗೆ ತಿಂಗಳು ತಿಂಗಳು ಹಣ ನೀಡಲು ಸರ್ಕಾರ ನಿರ್ಧರಿಸಿದೆ ಅದು ಸಾವಿರ ಹತ್ತು ಸಾವಿರ ಅಲ್ಲ 5 ಲಕ್ಷ, 4 ಲಕ್ಷ ಹಾಗೂ 3 ಲಕ್ಷ ರೂಪಾಯಿಗಳನ್ನು ನೀಡಲು ನಿರ್ಧರಿಸಲಾಗಿದೆ. ಯೂಟ್ಯೂಬ್‌ನಲ್ಲಿ ಶಾರ್ಟ್ಸ್ ಹಾಗೂ ಪೋಡೋ ಕಾಸ್ಟ್‌ಗಳಿಗೆ ತಿಂಗಳಿಗೆ 8 ಲಕ್ಷ 7 ಲಕ್ಷ 6 ಲಕ್ಷ 4 ಲಕ್ಷ ರೂಪಾಯಿಗಳನ್ನು ಆಯಾ ವಿಡಿಯೋ ಹಾಗೂ ಶಾರ್ಟ್ಸ್ಗಳ ಮಾನದಂಡಗಳ ಮೇಲೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *