Breaking News

ಬಾರದ ಪರಿಹಾರ ಜಪ್ತಿ ಆಯ್ತು ಐರಾವತ : ಪರಿಹಾರ ಕೊಡದಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತಾ ಸಂಸ್ಥೆ

ಹುಬ್ಬಳ್ಳಿ : ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೋರ್ವ ಅಪಘಾತದಲ್ಲಿ ಮೃತಪಟ್ಟರೂ ನೀಡಬೇಕಾದ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಾರೆಂಟ್ ಅನ್ವಯ ಕೋರ್ಟ್ ಸಿಬ್ಬಂದಿ ಐರಾವತ ಬನ್ನೊಂದನ್ನು ಜಪ್ತಿ ಮಾಡಿ ಹುಬ್ಬಳ್ಳಿ ಕೋರ್ಟ್‌ ಎದುರು ತಂದು ನಿಲ್ಲಿಸಿದ್ದಾರೆ .

2019 ರಲ್ಲಿ ಸಂಭವಿಸಿದ ನವಲಗುಂದ ಹುಬ್ಬಳ್ಳಿ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು . ಮೃತ ಚಾಲಕನ ತಾಯಿ ಶಾಂತವ್ವ ಕರವೀರಪ್ಪ ಕುಲಕರ್ಣಿ ಇವರು ನಗರದ ಎರಡನೇ ಹಿರಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು . ನ್ಯಾಯಾಲಯ 28 ಲಕ್ಷ ಪರಿಹಾರ ಅದಕ್ಕೆ ಶೇ .6 ಬಡ್ಡಿ ಹಾಕಿ ನೀಡುವಂತೆ ಸೂಚಿಸಿತ್ತು . ಆದರೇ ಸಾರಿಗೆ ಸಂಸ್ಥೆಯವರಿಗೆ ವಾರೆಂಟ್ ನೀಡಿದರೂ ಪರಿಹಾರ ನೀಡಿರಲಿಲ್ಲ .

ಈ ಹಿನ್ನೆಲೆಯಲ್ಲಿ ಜಪ್ತಿ ವಾರಂಟ್ ಅನ್ವಯ ಇಂದು ನ್ಯಾಯಾಲಯದ ಸಿಬ್ಬಂದಿ ಕೆಎ 17 , ಎಫ್ 1945 ವಾಹನ ಜಪ್ತಿ ಮಾಡಿ ತಂದು ಕೋರ್ಟ್ ಎದುರು ನಿಲ್ಲಿಸಿದ್ದಾರೆ . ಮೃತ ಪ್ರಯಾಣಿಕನ ಪರ ಅರುಣ ಪಾಟೀಲ ವಕಾಲತ್ತು ವಹಿಸಿದ್ದರು

ಒಟ್ಟಿನಲ್ಲಿ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಜಪ್ತಿ ಮಾಡಿದ್ದಾರೆ .

ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಂಡು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ .

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *