Breaking News

ಬಿಎಂಟಿಸಿ ಬಸ್‌ : ಡಿಜಿಟಲ್ ಮಾದರಿಯ ಬಸ್‌ಪಾಸ್ ವ್ಯವಸ್ಥೆ ಜಾರಿ

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಓಡಾಡುವವರಿಗೆ ಡಿಜಿಟಲ್ ಮಾದರಿಯ ಬಸ್‌ಪಾಸ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಆ ಮೂಲಕ ಡಿಜಿಟಲ್ ಸೇವೆಗೆ ಉತ್ತೇಜನ ನೀಡುವುದರ ಜೊತೆಗೆ ಪ್ರಯಾಣವನ್ನು ಸುಗಮವನ್ನಾಗಿಸಲು ಸಹಾಯ ಮಾಡುತ್ತಿದೆ.

ಸೆ.15ರಂದು ಮೊಬೈಲ್ ಆ್ಯಪ್ ಮೂಲಕ ಈ ಸೇವೆಯನ್ನು ವಿತರಿಸಲು ಮುಂದಾಗಿದೆ. ಬಿಎಂಟಿಸಿ ಬಸ್ ಪ್ರಯಾಣಿಕರು ಈವರೆಗೆ ವಾರದ ಮತ್ತು ಮಾಸಿಕ ಬಸ್‌ಪಾಸ್ ಬಳಸುತ್ತಿದ್ದರು. ಪೂರ್ವ ಮುದ್ರಿತ ಪಾಸ್‌ ಇದಾಗಿತ್ತು. ಆದರೆ ಇನ್ಮುಂದೆ ಡಿಜಿಟಲ್ ಮಾದರಿಯ ಟುಮೋಕ್ ಹೆಸರಿನ ಆ್ಯಪ್‌ನಲ್ಲಿ ಬಸ್ ಪಾಸ್ ಸಿಗಲಿದೆ. ಅದರ ಮೂಲಕ ಬಸ್‌ ಪ್ರಯಾಣ ಮಾಡಬಹುದಾಗಿದೆ.

ಬಿಎಂಟಿಸಿಯಲ್ಲಿ ದಿನನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅವರೆಲ್ಲರ ಪ್ರಯಾಣವನ್ನು ಸುಗಮಗೊಳಿಸಲು. ಸುಲಭವಾಗಿ ಬಸ್ ಪಾಸ್ ಸಿಗುವಂತೆ ಮಾಡಲು, ನಗದು ಮತ್ತು ಕಾಗದ ರಹಿತವಹಿವಾಟಿಗಾಗಿ ಡಿಜಿಟಲ್ ಪಾಸ್ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ. ಬಿಎಂಟಿಸಿಯಲ್ಲಿ ಪ್ರಯಾಣಿಕರು ಪ್ರಯಾಣಿಸಲು ಟುಮೋಕ್ ಆ್ಯಪ್ ಡೌನ್‌ಲೋಡ್ ಮಾಡಬೇಕಿದೆ. ಬಳಿಕ ನೋಂದಣಿ ಮಾಡಬೇಕಿದೆ.

ಬಸ್ ಪಾಸ್ ಮಾದರಿಯನ್ನು ಆಯ್ಕೆ ಮಾಡಿ ವಿವರವನ್ನು ಭರ್ತಿ ಮಾಡಬೇಕು. ನಂತಗರ ಭಾವಚಿತ್ರವನ್ನು ಕ್ಲಿಕ್ಕಿಸಬೇಕು. ಇದಾದ ಬಳಿಕ ಪಾಸ್ ಮೊತ್ತವನ್ನು ಪಾವತಿಸಿದರೆ ಡಿಜಿಟಲ್ ಪಾಸ್ ಬಳಕೆಗೆ ಸಿಗಲಿದೆ. ಬಿಎಂಟಿಸಿಯಲ್ಲಿ ಪ್ರಯಾಣಿಸುವವರು ಡಿಜಿಟಲ್ ಪಾಸ್‌ `ಹಾಗೂ ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದಾಗಿದೆ. ಒಟ್ಟಿನಲ್ಲಿ ಪ್ರಸ್ತುತತೆಗೆ ಡಿಜಿಟಲ್ ಪಾಸ್‌ ಹೇಳಿ ಮಾಡಿಸಿದಂತಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *