Breaking News

ಗಣೇಶ ಮೂರ್ತಿ ಪ್ರತಿಷ್ಠಾಪನೆ : ಮಹತ್ವದ ಸೂಚನೆ ನೀಡಿದ ಹೆಸ್ಕಾಂ

ನವಲಗುಂದ : ಶಹರ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಸಾರ್ವಜನಿಕ ಗಣೇಶ ಮಂಡಳಿಯವರು ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಹೆಸ್ಕಾಂ ಕಂಪನಿಯ ವಿದ್ಯುತ್ ಲೈನ್ ಕೆಳಗಡೆ ಹಾಗೂ ಲೈನಿನ ಅಕ್ಕಪಕ್ಕದಲ್ಲಿ ಪೆಂಡಾಲನ್ನು ಹಾಕಬಾರದು ಮತ್ತು ಸುರಕ್ಷತಾ ಅಂತರವನ್ನು ಕಾಯ್ದುಕೊಂಡು ಪೆಂಡಾಲ ಹಾಕಿಕೊಳ್ಳಬೇಕು ಎಂದು ಹೆಸ್ಕಾಂ ಶಾಖಾಧಿಕಾರಿ ಹಣಮರಡ್ಡಿ ರೋಗಿ ತಿಳಿಸಿದ್ದಾರೆ.

ಗಣೇಶ ಮಂಡಳಿ ಆಯೋಜಕರು ಅನಧಿಕೃತವಾಗಿ ವಿದ್ಯುತ್ತನ್ನು ಬಳಸದೆ ತಾತ್ಕಾಲಿಕ ಸ್ಥಾವರವನ್ನು ಪಡೆದು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯುತ್ತನ್ನು ಪಡೆಯಬಹುದು.

ಒಂದು ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೆ ಏನಾದರೂ ಅವಗಡಗಳು ಸಂಭವಿಸಿದರೆ ಅದಕ್ಕೆ ಹೆಸ್ಕಾಂ ಜವಾಬ್ಬಾರಿಯಾಗಿರುವುದಿಲ್ಲ. ಹಾಗಾಗಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಗಣೇಶ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *