Breaking News

ಆರ್ ಸಿ ಬಿ ಗೆ ಮತ್ತೋರ್ವ ಸ್ಟಾರ್ ಕನ್ನಡಿಗನ ಎಂಟ್ರಿ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದ್ದು, ತಂಡಕ್ಕೆ ಮತ್ತೊಬ್ಬ ಸ್ಟಾರ್‌ ಕನ್ನಡಿಗನ ಎಂಟ್ರಿ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್​​​ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್​ಗಳ ಗೆಲುವು ಸಾಧಿಸಿತ್ತು.
ಮೈಸೂರು ತಂಡದ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ ಕರುಣ್​ ನಾಯರ್​​ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್​ ಬಾರಿಸಿದರು. ಭರ್ಜರಿ ಶತಕ ಸಿಡಿಸಿ ಮಿಂಚಿದ ಕರುಣ್‌ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟು ಸಂಭ್ರಮಿಸಿದರು.
2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ ಮೆಗಾ ಆಕ್ಷನ್​​ ನಡೆಯಲಿರುವ ಹೊತ್ತಿನಲ್ಲೇ ಕನ್ನಡಿಗ ಕರುಣ್​​ ನಾಯರ್​ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹೀಗಾಗಿ ಕರುಣ್​ ನಾಯರ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಕರುಣ್​ ನಾಯರ್​​ ಹೋಮ್​ ಗ್ರೌಂಡ್​​​ ಚಿನ್ನಸ್ವಾಮಿ ಸ್ಟೇಡಿಯಂ. ಬೆಂಗಳೂರು ಸ್ಥಳೀಯರು ಆಗಿರುವ ಕರುಣ್ ಟಾಪ್​ ಆರ್ಡರ್​ ಬ್ಯಾಟ್ಸಮನ್‌ ಆಗಿದ್ದಾರೆ. ತಾವು ಬಿಗ್​ ಹಿಟ್ಟರ್​ ಎಂದು ಕಳೆದ 2 ವರ್ಷಗಳಿಂದ ಮಹಾರಾಜ ಟ್ರೋಫಿಯಲ್ಲಿ ಸಾಬೀತು ಮಾಡಿದ್ದಾರೆ. ಅವಕಾಶ ಸಿಗದೆ ಗಾಯಗೊಂಡಿರುವ ಹುಲಿಯಾಗಿರೋ ಕರುಣ್​ ಅವರನ್ನು ಆರ್​​ಸಿಬಿ ಕರೆ ತಂದರೆ ಘರ್ಜಿಸೋದು 100% ಗ್ಯಾರಂಟಿ. ಫಾಫ್ ಡು ಪ್ಲೆಸ್ಸಿಸ್ ಸ್ಥಾನಕ್ಕೆ ಕರುಣ್ ಒಳ್ಳೆಯ ಆಯ್ಕೆ ಅನ್ನುವುದು ಆರ್​​ಸಿಬಿ ಪ್ಲಾನ್​ ಆಗಿದೆ.

Share News

About BigTv News

Check Also

ಪ್ಯಾಂಟ್ ಜೇಬಿನಲ್ಲಿ ₹1.30 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಯುವಕನ ಬಂಧನ

ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 25ರಂದು …

Leave a Reply

Your email address will not be published. Required fields are marked *