Breaking News

ಮಂಗಳೂರಿನಲ್ಲಿ 386 ಕಡೆ ಸಾರ್ವಜನಿಕ ಗಣೇಶೋತ್ಸವ: ಮುನ್ನೆಚ್ಚರಿಕೆ ವಹಿಸಿದ ಪೊಲೀಸ್ ಇಲಾಖೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 386 ಕಡೆ ಸಾರ್ವಜನಿಕ ಗಣೇಶೋತ್ಸವ ಜರಗಲಿದ್ದು ಇದರಲ್ಲಿ 30 ಕಡೆಗಳ ಗಣೇಶೋತ್ಸವ ಮೆರವಣಿಗೆಗಳನ್ನು ಅತೀ ಸೂಕ್ಷ್ಮವೆಂದು ಪೊಲೀಸ್‌ ಇಲಾಖೆ ಗುರುತಿಸಿದೆ.
ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸೆ. 6ರಿಂದ ಸೆ.17ರ ವರೆಗೆ ಒಟ್ಟು 165 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ ಇದರಲ್ಲಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ ಮತ್ತು 79 ಸಾಮಾನ್ಯ ಗಣೇಶ ಪ್ರತಿಷ್ಠಾಪನಾ ಮೆರವಣಿಗೆಯೆಂದು ಪರಿಗಣಿಸಲಾಗಿದೆ.
ದ.ಕ ಜಿಲ್ಲಾ ಪೊಲೀಸ್‌ ಘಟಕ ವ್ಯಾಪ್ತಿಯಲ್ಲಿ ಸೆ. 6ರಿಂದ ಸೆ.13ರ ವರೆಗೆ ಒಟ್ಟು 221 ಕಡೆಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಇದರಲ್ಲಿ 8 ಅತೀ ಸೂಕ್ಷ್ಮ, 53 ಸೂಕ್ಷ್ಮ ಹಾಗೂ 160 ಸಾಮಾನ್ಯ ಗಣೇಶೋತ್ಸವ ಪ್ರತಿಷ್ಠಾಪನಾ ಮೆರವಣಿಗೆಗಳು ಎಂಬುದಾಗಿ ಪರಿಗಣಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಹಾಗೂ ಪೊಲೀಸ್‌ ಅಧೀಕ್ಷಕ ಯತೀಶ್‌ ಎನ್‌. ತಿಳಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *