Breaking News

ಪಿಎಸ್‌ಐ ಅಕ್ರಮ : “ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ’



ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮ “ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ’ ಎಂದು ತೀಕ್ಷ್ಣ ವಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಇದರಲ್ಲಿ ಭಾಗಿಯಾದವರು ಮತ್ತು ಅದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಕಾನೂನು ರೀತಿ ಶಿಕ್ಷೆ ಆಗಬೇಕು ಎಂದು ಹೇಳಿದೆ.

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್‌ ಪೌಲ್‌ ಬಂಧನಾನಂತರದ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾ| ಎಚ್‌.ಪಿ. ಸಂದೇಶ್‌ ಈ ಅಭಿ ಪ್ರಾಯ ಪಟ್ಟರು.

ಪ್ರಕರಣದ ಆರೋಪಿಗಳಾದ ಸಿ.ಎನ್‌. ಶಶಿಧರ್‌ ಮತ್ತು ಇತರರು ಸಲ್ಲಿಸಿರುವ ಜಾಮೀನು ಅರ್ಜಿ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ನ್ಯಾ| ಎಚ್‌.ಪಿ. ಸಂದೇಶ್‌, ನೇಮಕಾತಿಯಲ್ಲಿ ಅಕ್ರಮ ಸಮಾಜಕ್ಕೆ ದೊಡ್ಡ ಅಪಾಯ.
ಲಹಗರಣದಲ್ಲಿ 25 ಕೋ.ರೂ. ಉನ್ನತ ಪೊಲೀಸ್‌ ಅಧಿಕಾರಿ ಒಬ್ಬರ ಕೈಸೇರಿರುವ ಸ್ಫೋಟಕ ಸಂಗತಿ ಅಮೃತ್‌ ಪೌಲ್‌ ವಿಚಾ ರಣೆ ವೇಳೆ ಬೆಳಕಿಗೆ ಬಂದಿದೆ.

ಅಕ್ರಮದ ಇಂಚಿಂಚು ಮಾಹಿತಿ ಕಲೆ ಹಾಕ ಲಾಗುತ್ತಿದ್ದು, ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂ. ಪೈಕಿ 25 ಕೋ.ರೂ. ಈ ಉನ್ನತ ಪೊಲೀಸ್‌ ಅಧಿ ಕಾರಿ ಪಾಲಾಗಿದೆ ಎಂಬ ಅಂಶವನ್ನು ಪೌಲ್‌ ಬಾಯ್ಬಿಟ್ಟಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಶಾಮೀಲಾಗಿರುವ  ಉನ್ನತ ಪೊಲೀಸ್‌ ಅಧಿಕಾರಿ ಮತ್ತು ಪ್ರಭಾವಿ ಗಳು ತಮ್ಮ ಹೆಸರು ಬಹಿರಂಗ ವಾಗಬಾರದು ಎಂದು ಪೌಲ್‌ ಬಂಧನವಾಗು ವಂತೆ ಮಾಡಿ ದ್ದಾರೆ ಎಂದೂ ಹೇಳಲಾಗುತ್ತಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *