Breaking News

ಮೆಡಿಕಲ್ ಕಾಲೇಜ್ ನಲ್ಲಿ ಓಣಂ ಹಬ್ಬ ಆಚರಣೆ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ಬಾಗಲಕೋಟೆ: ಅದು ಪಕ್ಕಾ ಕನ್ನಡ ನೆಲ, ಅದರಲ್ಲೂ ಜವಾರಿ ನಾಡು ಉತ್ತರ ಕರ್ನಾಟಕ. ಇಂತಹ ನಾಡಲ್ಲಿ ಕೇರಳ ಕುಟ್ಟಿಗಳು ಒಂದೇ ಸಮನೆ ಹೆಜ್ಜೆ ಹಾಕುತ್ತಿದ್ದರು‌. ಚಂಡೆ ಮದ್ದಳೆ ಸದ್ದಿಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು. ಉತ್ತರ ಕರ್ನಾಟಕದಲ್ಲಿ ಕೇರಳ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದರು.
ಹುರುಪಿನಿಂದ ಚಂಡೆ ಬಾರಿಸುತ್ತಿರುವ ಕಲಾವಿದರು ಚಂಡೆ ಮದ್ದಳೆ ಸದ್ದಿಗೆ ಯುವತಿಯರ ಭರ್ಜರಿ ಕುಣಿತ. ಕೇರಳ ಸಾಂಪ್ರದಾಯಿಕ ಉಡುಗೆಯಲ್ಲಿ ಕಲರ್ ಪುಲ್ ಸಂಭ್ರಮ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಕ್ಯಾಂಪಸ್‌ನಲ್ಲಿ.
ಈಗ ಎಲ್ಲ ಕಡೆ ಗಣೇಶ ಹಬ್ಬದ ಸಂಭ್ರಮ, ಅದರಂತೆ ಬಾಗಲಕೋಟೆ ಬಿವಿವಿ ಸಂಘದಲ್ಲಿ ಮೆಡಿಕಲ್‌ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಗಣಪನನ್ನು ಪ್ರತಿಷ್ಟಾಪನೆ ಮಾಡಿದ್ದಾರೆ‌. ಆದರೆ, ವಿಶೇಷ ಅಂದರೆ ಇಲ್ಲಿ ಕೇವಲ ಗಣಪನ ಸಂಭ್ರಮ ‌ಮಾತ್ರ ಇರಲಿಲ್ಲ. ಜೊತೆಗೆ ಕೇರಳದ ಪ್ರಸಿದ್ದ ಓಣಂ ಹಬ್ಬದ ಆಚರಣೆ ಇತ್ತು. ಬಲಿ ಚಕ್ರವರ್ತಿ ವೇಷಧಾರಿ ಜೊತೆಗೆ ಚಂಡೆ ಮದ್ದಳೆ ಸದ್ದು ಎಲ್ಲರ ಗಮನ ಸೆಳೆಯಿತು.
ಒಣಂ ಹಬ್ಬವನ್ನು ಜ್ಯೋತಿ ಬೆಳಗುವ ಮೂಲಕ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟನೆ ‌ಮಾಡಿದರು. ನಂತರ‌ ಮಲಯಾಳಿ ಹಾಡಿಗೆ ಕೈಮುಗಿದು ಗುಂಪಾಗಿ ಭರತನಾಟ್ಯ ಸ್ಟೆಪ್ ಹಾಕಿದ ಕುಟ್ಟಿಗಳ ಸಾಂಪ್ರದಾಯಿಕ ನೃತ್ಯ ಎಲ್ಲರ ಮನ ಸೆಳೆಯಿತು. ಎಲ್ಲರೂ ಗಣೇಶ ಹಬ್ಬದ ಜೊತೆಗೆ ಓಣಂ ಆಚರಿಸಿ ಹರ್ಷ ಪಟ್ಟರು.
ಆಡಳಿತ ಮಂಡಳಿ ಕೇರಳಿಗರಿಗೆ ಓಣಂ ಹಬ್ಬಕ್ಕೆ ವ್ಯವಸ್ಥೆ ಮಾಡಿತ್ತು. ಗಣೇಶ ಹಬ್ಬದ ಜೊತೆಗೆ ಓಣಂ ಕೇರಳ ಕುಟ್ಟಿಗಳಿಗೆ ಡಬಲ್ ಸಂಭ್ರಮ ನೀಡ್ತು‌. ಕರುನಾಡಿನಲ್ಲಿ ಕೇರಳಿಗರಿಗೆ ಓಣಂ ಆಚರಿಸುವ ವ್ಯವಸ್ಥೆ ಕಲ್ಪಿಸಿದ್ದು ಶ್ಲಾಘನೀಯ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *