Breaking News

ಈರುಳ್ಳಿ ದರ ಕುಸಿತ : ಕಂಗಲಾದ ರೈತರು

ಚಿತ್ರದುರ್ಗ:  ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು ಚಿತ್ರದುರ್ಗದ ಈರುಳ್ಳಿ ಬೆಳೆಗಾರ ಮತ್ತೆ ಸಂಕಷ್ಟಕ್ಕೆ ನೂಕಲ್ಪಟ್ಟಿದ್ದಾನೆ. ಕಳೆದ ಎರಡು ತಿಂಗಳಿನಿಂದ ಕುಸಿತ ಕಂಡ ಈರುಳ್ಳಿ ದರ ಮತ್ತೆ ಚೇತರಿಸಿಲ್ಲ.

ಬೆಂಗಳೂರಿನಲ್ಲಿ ವಿವಿಧ ದರ್ಜೆಯ ಈರುಳ್ಳಿ .5ರಿಂದ .12ರವರೆಗೆ ಮಾರಾಟವಾಗುತ್ತಿದ್ದು, ಚಿತ್ರದುರ್ಗದಲ್ಲಿ ಸ್ಥಳೀಯ ವ್ಯಾಪಾರಿಗಳಿಗೆ ಮಾರಿದರೆ ಕೆ.ಜಿ.ಗೆ ಮೂರೂವರೆ ರುಪಾಯಿಯಷ್ಟೇ ಸಿಗುತ್ತಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ಗುಟಮಟ್ಟದ ಈರುಳ್ಳಿ ಸೋಮವಾರದ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲ .500ರಿಂದ .600ರವರೆಗೆ ಮಾರಾಟವಾಗಿದೆ. ಎರಡನೇ ದರ್ಜೆಯ ಈರುಳ್ಳಿ ಚೀಲಕ್ಕೆ .250ರಿಂದ .300ರಂತೆ ಬಿಕರಿಯಾಗಿದೆ. ಒಂದು ಚೀಲ ಈರುಳ್ಳಿ ಬೆಳೆಯಲು ಸರಿಸುಮಾರು .600 ಖರ್ಚಾಗುತ್ತದೆ. ಹೀಗಿರುವಾಗ ಸದ್ಯ ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಒಯ್ದರೆ ಲಾರಿ ಬಾಡಿಗೆ ಕೂಡಾ ಸಿಗುವುದಿಲ್ಲವೆಂಬುದು ರೈತರ ಅಳಲಾಗಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *