Breaking News

ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತ

ನವಲಗುಂದ: ಹೆಸರು ಖರೀದಿಗೆ ಮಿತಿ ಹೆಚ್ಚಳ ಹಾಗೂ ತೇವಾಂಶ ವಿನಾಯಿತಿ ನೀಡಬೇಕು ಹಾಗೂ ಕಳಸಾ ಬಂಡೂರಿ ಜಾರಿ ಮಾಡದೆ ಹೋದರೆ ಹೋರಾಟ ತೀವ್ರಗೊಳಿಸಲಾಗುವುದು. ನಮ್ಮ ನೀರನ್ನು ನಾವು ರಕ್ಷಿಸಲು ಮಿನಾಮೇಷ ಮಾಡಲ್ಲ ಎಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕರ ಅಂಬ್ಲಿ ಪ್ರಹ್ಲಾದ ಜೋಶಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹೆಸರು ಖರೀದಿಗೆ ಕನಿಷ್ಠ ಮಿತಿಗೊಳಿಸಿದ್ದು, ತೇವಾಂಶದ ಮಿತಿ 12% ರಷ್ಟು ನಿಗದಿ ಪಡಿಸಿದೆ. ಆದರೆ, ಹವಾಮಾನ ವೈಪರೀತ್ಯದಿಂದ ತೇವಾಂಶ ಹೆಚ್ಚಾಗಿದೆ. ಆದ್ದರಿಂದ ತೇವಾಂಶ ಮಿತಿಯನ್ನು 18%ಕ್ಕೆ ಏರಿಸಬೇಕು. ಬಹುದಿನದ ಬೇಡಿಕೆಯಾದ ಮಹ ದಾಯಿ, ಕಳಸಾ ಬಂಡೂರಿಗೆ ಸಂಬಂಧಿಸಿದ ವನ್ಯ ಜೀವಿ ಇಲಾಖೆಯ ಅನುಮತಿ ನಿರಾಕರಣೆ ಮಾಡಿರುವುದು ನಮ್ಮ ರೈತ ಕುಲಕ್ಕೆ ಹಾಗೂ ಸಾರ್ವಜನಿಕರಿಗೆ ಕುಡಿ ಯುವ ನೀರಿಗೆ ಅಡ್ಡಿಯಾಗಿದೆ. ಕೋರ್ಟ್‌ ಆದೇಶ ನೀಡಿದರೂ ವನ್ಯಜೀವಿ ಇಲಾಖೆಯಿಂದ ಅನುಮತಿ ತಡೆ ಹಿಡಿದಿದ್ದು, ನೋವುಂಟು ಮಾಡಿದೆ. ಕೂಡಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅ. 2ರೊಳಗೆ ಅನುಮತಿ ಕೊಡಿಸಿ, ಈ ಯೋಜನೆ ಜಾರಿಗೊಳಿಸಲು ಸಹಕರಿಸಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದರು.

ಈ ವೇಳೆ ರಘುನಾಥ ನಡುವಿನಮನಿ, ಜಿ.ಎಚ್‌. ದೊಡಮನಿ. ಎಪ್.ಬಿ. ವೆಂಕನಗೌಡರ ಇತರರು ಉಪಸ್ಥಿತರಿದ್ದರು.

Share News

About bigtvnews22

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *