ಹುಬ್ಬಳ್ಳಿ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳಿಗೆ ಹೃದಯ ಆರೋಗ್ಯಕ್ಕೆ ಪೂರಕವಾದ ಪ್ರವಿಲೇಜ್ ಕಾರ್ಡನ್ನು ನಗರದ ಎಸ್.ಡಿ.ಎಂ.ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ನೀಡಲಾಗುತ್ತದೆ ಎಂದು ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕರಾದ ಶಶಿಕುಮಾರ್ ಪಟ್ಟಣಶೆಟ್ಟಿ ತಿಳಿಸಿದರು.ನಗರದ ಪತ್ರಿಕಾಭವನದಲ್ಲಿಂದು ಮಾಧ್ಯಮ ದಿನಾಚರಣೆ ಪ್ರಯುಕ್ತ ಹಿರಿಯ ಪತ್ರಕರ್ತರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಬಳಿಕ ಮಾತನಾಡಿದ ಅವರು, ಕೆಲಸದ ಒತ್ತಡದಲ್ಲಿ ಹಾಗೂ ಸಮಾಜಿಕ ಜವಾಬ್ದಾರಿ ನಿಭಾಯಿಸುವ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಾಧ್ಯಮ ಮಿತ್ರರಿಗೆ ಹೃದಯ ಆರೋಗ್ಯದ ಕುರಿತು ಈ ಕಾರ್ಡನ್ನು ನೀಡಲಾಗುತ್ತಿದೆ ಎಂದರು. ಈ ಕಾರ್ಡನ್ನು ಹೊಂದಿದವರು ಕಾರ್ಡನಲ್ಲಿ ಹಣ ತುಂಬಿಸಿ ಭಾರತದ ಯಾವುದೇ ನಾರಾಯಣ ಹೆಲ್ತ್ ಹಾಸ್ಪಿಟಲನಲ್ಲಿ ನಗದು ರಹಿತ ಸೇವೆ ಪಡೆಯಬಹುದು. ಕಾರ್ಡುದಾರರಿಗೆ ಒಪಿಡಿ ತಪಾಸಣೆ ಮತ್ತು ಐಪಿಡಿ ಚಿಕಿತ್ಸೆ ಸಂಬಂಧಿಸಿದಂತೆ ಎಲ್ಲ ಕೆಲಸದ ದಿನಗಳಲ್ಲಿ ಆದ್ಯತೆ ಮೇರೆಗೆ ಸೇವೆ ಒದಗಿಸಲಿದೆ ಎಂದು ಅವರು ಹೇಳಿದರು.ಮೈ ಪ್ರಿವಿಲೇಜ್ ಕಾರ್ಡ್ ಮೂರು ವರ್ಗದಲ್ಲಿ ಅಂದರೇ ಪ್ಲಾಟಿನಂ, ಗೋಲ್ಡ್ ಮತ್ತು ಸಿಲ್ವರ್ ಕಾರ್ಡ್ ರೂಪದಲ್ಲಿ ಬರಲಿದೆ.ಪ್ಲಾಟಿನಂ ಕಾರ್ಡ್ ಒಬ್ಬರಿಗೆ ಅಥವಾ ದಂಪತಿಗಳಿಗೆ ಅವರ ತಂದೆ ತಾಯಿಗಳಿಗೆ ಹಾಗೂ 18 ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಅನ್ವಯವಾಗಲಿದೆ.ಗೋಲ್ಡ್ ಕಾರ್ಡ್ 60ವರ್ಷ ವಯೋಮಿತಿಯ ಹಿರಿಯ ನಾಗರಿಕರಿಗೆ ಅನ್ವಯವಾಗುವಂತೆ ರೂಪಿಸಲಾಗಿದೆ.ಸಿಲ್ವರ್ ಕಾರ್ಡ್ ಒಬ್ಬರಿಗೆ ಅಥವಾ ದಂಪತಿಗಳಿಗೆ ಹಾಗೂ18 ವಯಸ್ಸಿನ ಒಳಗಿರುವ ಎರಡು ಮಕ್ಕಳಿಗೆ ಅನ್ವಯವಾಗುವಂತೆ ರೂಪಿಸಲಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ನಾರಾಯಣ ಹಾರ್ಟ್ ಸೆಂಟರ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





