ಯಾದಗಿರಿ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಳೆ ಬಸ್‍ನಿಲ್ದಾಣ ಹತ್ತಿರದ ರಾಜ್ಯ ಹೆದ್ದಾರಿ 15 ವನಮಾರಪಲ್ಲಿ ರಾಯಚೂರು ರಸ್ತೆ ಸೇತುವೆ (ರೈಲ್ವೆ ಮೇಲ್ಸೆತುವೆ)ಯ ಕಳೆದ ಮೂರ್ನಾಲ್ಕು ವರ್ಷಗಳಿಂದ ಪದೇ ಪದೇ ಒಂದೇ ಸ್ಥಳದಲ್ಲಿ ಬಿರುಕು ಬಿಡುತ್ತಿದೆ, ಇದು ಪ್ರತಿವರ್ಷ ಮಳೆಗಾಲದಲ್ಲಿ ನಡೆದುಕೊಂಡು ಬಂದಿದೆ.
ಅಧಿಕ ಮಳೆಯಿಂದ ನಗರದ ರೈಲ್ವೆ ಮೇಲ್ಸೇತುವೆ ರಸ್ತೆ ಕುಸಿದಿದೆ, ಬ್ಯಾರಿಕೇಡ್ ಇಟ್ಟು ಅಲ್ಲಲ್ಲಿ ಕಲ್ಲುಗಳನ್ನು ಇಡಲಾಗಿದೆ ವಾಹನಗಳ ಸಂಚಾರ ತುಂಬಾ ತೊಂದರೆ ಉಂಟಾಗಿದೆ. ಸುತ್ತಿ ಬಳಸಿ ಯಾದಗಿರಿಗೆ ಹೋಗುವಂತಾಗಿದೆ ಸಾರ್ವಜನಿಕರು ಸರ್ಕಾರ ಹಾಗೂ ಜಿಲ್ಲಾಡಳಿತದ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆದರೂ ಪೊಲೀಸರ ಕಣ್ತಪ್ಪಿಸಿ ಜನರ ಸಂಚಾರ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ ಧಾರಾಕಾರ ಸುರಿದ ಮಳೆಗೆ ಇದೆ ತರಹ ಹೆದ್ದಾರಿ ಕುಸಿತಗೊಂಡಿತ್ತು. ಆಗ 15 ದಿನಗಳವರೆಗೆ ಸಂಚಾರ ಬಂದ್ ಮಾಡಲಾಗಿತ್ತು. ಅಂದು ₹ 1 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಿದರೂ ಪುನಃ ಮತ್ತೆ ಹೆದ್ದಾರಿ ಕುಸಿತವಾಗಿದೆ. ಗುಣಮಟ್ಟದ ಕಾಮಗಾರಿ ಸಮರ್ಪಕ ಮಾಡದೇ ಇರುವುದರಿಂದ ಇಂಥ ಘಟನೆಗಳು ಸಂಭವಿಸುತ್ತಲಿವೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನವೇ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





