ಹುಬ್ಬಳ್ಳಿ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ಸಂಘಟನೆಗೆ ಮರು ಜೀವ ಕೊಡುವ ಲಕ್ಷಣಗಳು ಕಾಣುತ್ತಿವೆ. ಹುಬ್ಬಳ್ಳಿಯ ಹೊರವಲಯದ ಖಾಸಗಿ ಹೋಟೆಲ್‌ವೊಂದರಲ್ಲಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಗೌಪ್ಯ ಸಭೆ ಇದಕ್ಕೆ ಪುಷ್ಠಿ ನೀಡುತ್ತಿದೆ.
ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕುರಿತು ಚರ್ಚೆ ನಡೆಯುತ್ತಿದ್ದು, ಸೆಪ್ಟೆಂಬರ್ 22ರಂದು ಕೂಡಲಸಂಗಮದಲ್ಲಿ ಸಂಘಟನಾ ಸಭೆಗೆ ನಿರ್ಧಾರ ಮಾಡಲಾಗಿದೆ. ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಧಿಕಾರದ ಲಾಲಸೆಗೆ ಒಳಗಾಗದಂತೆ ಸಂಘಟನೆಗೆ ಕೆಲವರು ಸಲಹೆ ನೀಡಿದ್ದಾರೆ. ಯುವ ನಾಯಕತ್ವ, ನಾಯಕತ್ವದಿಂದ ವಂಚಿತರಿಗೆ ಅವಕಾಶ ಕಲ್ಪಿಸಿಕೊಡಲು ಚಿಂತನೆ ಇಟ್ಟುಕೊಳ್ಳಲಾಗಿದೆ. ಕೆ.ಎಸ್ ಈಶ್ವರಪ್ಪ ಅವರು ಬ್ರಿಗೇಡ್ ಸಂಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲು ಪದಾಧಿಕಾರಿಗಳ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಸೇರ್ಪಡೆಗೆ ಮರು ಅವಕಾಶ ಬಂದರೆ ವಿಚಾರಿಸಿ ಸೇರ್ಪಡೆಗೆ ಸಲಹೆ ನೀಡಿದ್ದಾರೆ. ಅಹಿಂದ ಸಂಘಟನೆ ಮಾಡಿ ಕೆಲವರ ಕೈಯಲ್ಲಿ ಮಾತ್ರ ಅಧಿಕಾರ ನೀಡಲಾಯಿತು. ಅಹಿಂದ ಸಂಘಟನೆಯಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಆಗಬಾರದು. ಈ ಸಲ ಬಿಜೆಪಿ ಸೇರ್ಪಡೆಗೆ ಆಹ್ವಾನ ಬಂದರೆ ತಂದೆ ಮಕ್ಕಳಿಂದ ಮುಕ್ತಿ ನೀಡಬೇಕು. ಸಂಪೂರ್ಣ ಮುಕ್ತವಾದ ಸಂಘಟನೆಗೆ ನಾಯಕತ್ವ ಕ್ಕೆ ಅವಕಾಶ ಕೊಡಬೇಕು. ತಮ್ಮ ಕರಾರುಗಳಿಗೆ ಒಪ್ಪಿದರೆ ಮಾತ್ರ ಮರು ಸೇರ್ಪಡೆಯ ಇಂಗಿತವನ್ನು ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.