ಧಾರವಾಡ:– ಮರಾಠಾ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮರಾಠಾ ವಿದ್ಯಾಪ್ರಸಾರಕ ಮಂಡಳ ಮಂಡಳದ ಚುನಾವಣೆಯಲ್ಲಿ ನನ್ನನ್ನು ಹಾಗೂ ಎಮ್.ಎನ್.ಮೋರೆ ತಂಡವನ್ನು ಬೆಂಬಲಿಸಿ ಅಮುಲ್ಯವಾದ ಮತವನ್ನು ಉದಯಿಸುತ್ತಿರುವ ಸೂರ್ಯನ ಗುರುತಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಸಿ, ಆಶೀರ್ವದಿಸಬೇಕೆಂದು ಮರಾಠಾ ಸಮಾಜದ ಮುಖಂಡರಾದ ಸುಭಾಸ ಶಿಂದೆ ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮರಾಠಾ ಸಮಾಜ ಬಾಂಧವರು ಅಭಿವೃದ್ಧಿಗೆ ಒತ್ತು ಕೊಟ್ಟು ನಮ್ಮನ್ನು ಜಯಶಾಲಗೊಳಿಸಿದ್ದೀರಿ, ಅದರಂತೆ ಮರಾಠಾ ಮಂಡಳದ ಅನೇಕ ಅಭಿವೃದ್ಧಿ ಹಗಲರುಳು ನಮ್ಮ ತಂಡದೊಂದಿಗೆ ಶ್ರಮಿಸಿ ಶೈಕ್ಷಣಿಕವಾಗಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದೇವೆ.ನಾವು ನುಡಿದಂತೆ ನಡೆದಿದ್ದೇವೆ ಎಂದರು.
ಮತದಾನ ದಿ.13- ಮುಂಜಾನ 8-00 ರಿಂದ ಸಂಜೆ 4-00 ರವರೆಗೆ ಮರಾಠಾ ವಿದ್ಯಾಪಾರಕ ಮಂಡಳದಲ್ಲಿ ನಡೆಯಲಿದ್ದು ಮನೋಹರ ನಿಂಗಪ್ಪ ಮೋರೆ ಬಣವನ್ನು ಬೆಂಬಲಿಸುವಂತೆ ಕೋರಿದರು.ಮರಾಠಾ ವಿದ್ಯಾಪ್ರಸಾರಕ ಮಂಡಳ ಮಂಡಳ (ರಿ) ವನ್ನು ಅಭಿವೃದ್ಧಿಯ ಪಥದಂತ ತೆಗೆದುಕೊಂಡು ಹೋಗಲು ಹಲವಾರು ಯೋಜನೆ ಗಳು ಇಟ್ಟುಕೊಂಡಿದ್ದೆವೆ.2020 ರಿಂದ 2023 ರವರೆಗೆ ನಮ್ಮ ಅಡಳತ ಅವಧಿಯ ಸಂಪೂರ್ಣ ಲೆಕ್ಕಪತ್ರಗಳನ್ನು ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಪ್ರಸ್ತುತ ಪಡಿಸಿ ಅನುಮೋದನೆ ಪಡೆದಿರುತ್ತೇವೆ. ಎಲ್ಲ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿ ನಡೆದಿರುತ್ತವೆ ಎಂದರು.
ಮತ್ತೆ 2023 ರ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದೇನೆ. ಮುಂಬರುವ ದಿನಗಳಲ್ಲಿ ತಮ್ಮ ಅಶೀರ್ವಾದದಿಂದ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬಯಸಿದ್ದೇವೆ. ಮುಂದಿನ ದಿನಗಳಲ್ಲಿ ಕೈಗೊಳ್ಳುವ ಶೈಕ್ಷಣಿಕ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೆವೆ ಎಂದರು.
ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸುವುದು ಹಾಗೂ ವಿಜ್ಞಾನ ವಿಷಯವನ್ನು ಮನರಾರಂಭಿಸಲು ಅನುಮೋದನೆ ಪಡೆಯುವದು ಜೊತೆಗೆ ಹೊಸದಾಗಿ ಐಟಿಐ ಕಾಲೇಜ ಪ್ರಾರಂಭಿಸುವದು ಜೊತೆಗೆ ಕಂಪ್ಯೂಟರ್ ತರಬೇತಿ ಕೇಂದ್ರ ಸ್ಥಾಪಿಸಲಾಗುವದು.
ಶಾಲಾ ಮೈದಾನದಲ್ಲಿ ರನ್ನಿಂಗ ಟ್ರ್ಯಾಕ್ ಸಹಿತ ವಿವಿಧ ಪಂದ್ಯಗಳಿಗೆ ಬೇಕಾದಂತಹ ಸಂಪೂರ್ಣ ವ್ಯವಸ್ಥೆ ಕಲ್ಪಿಸುವುದು 3. ಧಾರವಾಡ ಹಾಗೂ ಇತರೆ ಪ್ರದೇಶಗಳಲ್ಲಿ ಮ.ವಿ.ಪ, ಮಂಡಳದ ವತಿಯಿಂದ 5 ಎಕರೆ ಹೊಲವನ್ನು ಖರೀದಿಸಿ ಅಂಗಸಂಸ್ಥೆಗಳನ್ನು ಸ್ಥಾಪಿಸುವುದು ಎಂದರು.
ಆಡಳಿತ ಕಛೇರಿ ನಿರ್ಮಾಣ, ಮಳಿಗೆಗಳ ಕಟ್ಟಡ ನವೀಕರಣ ಮರಾಠಾ ಮಹಿಳೆಯರಿಗೆ ಉಚಿತ ಟೇಲರಿಂಗ್ ತರಬೇತಿಯನ್ನು ಮತ್ತು ಜೊತೆಗೆ ಟೇಲರಿಂಗ್ ಮಶೀನ್ ಕೊಟ್ಟು ಮಹಿಳಾ ಸಬಲೀಕರಣಗೊಳಿಸುವದು, ಜೀಜಾಮಾತಾ ಕೋ-ಆಪರೇಟಿವ ಸೊಸಾಯಿಟಿ ಸ್ಥಾಪಿಸುವದು. ಜಿಮ್ ಸ್ಥಾಪಿಸಿ ಮರಾಠಾ ಸಮಾಜದ ಯುವಕರನ್ನು ಶಾರೀರಿಕವಾಗಿ ಸದೃಢಗೊಳಿಸುವದು ಎಂದರು.
ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ – ಪ್ರತಿಭಾ ಪುರಸ್ಕಾರ, ಶಿಷ್ಯವೇತನ ಹಾಗೂ ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ (ಸಾಲರೂಪದ ಶಿಷ್ಯವೇತನ) ಅಂದಾಜು 20 ಲಕ್ಷ ರೂ, ಗಳನ್ನು ಮೀಸಲಿಡಲಾಗುವದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಯಲ್ಲಪ್ಪ ಚವ್ಹಾಣ , ದತ್ತಾ ಮೋಟೆ ,ಮೋಹನ ಕೇಂಮಕರ, ಶಂಕರ ಶೇಳಕೆ, ಶಿವಾಜಿ ಘಾಟಗೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





