Breaking News

ಗಡಿಯಲ್ಲಿ ಹೆಚ್ಚು ಸೈನಿಕರ ನಿಯೋಜನೆಯೆ ದೊಡ್ಡ ಸಮಸ್ಯೆ: ಸಚಿವ ಎಸ್.ಜೈಶಂಕರ್‌

ಜಿನೀವಾ: ಚೀನಾದೊಟ್ಟಿಗೆ ಇರುವ ಶೇ 75ರಷ್ಟು ಸಮಸ್ಯೆಗಳು ಇತ್ಯರ್ಥವಾಗಿವೆ, ಆದರೆ ಗಡಿಯಲ್ಲಿ ಹೆಚ್ಚು ಸೈನಿಕರನ್ನು ನಿಯೋಜಿಸುತ್ತಿರುವುದೇ ದೊಡ್ಡ ಸಮಸ್ಯೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದರು.
ಸ್ವಿಸ್‌ ನಗರದಲ್ಲಿ ಚಿಂತಕರ ಚಾವಡಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಜೂನ್‌ 2020ರಲ್ಲಿ ನಡೆದ ಗಲ್ವಾನ್‌ ಕಣಿವೆ ಸಂಘರ್ಷವು ಭಾರತ ಚೀನಾ ಸಂಬಂಧದ ಮೇಲೆ ದುಷ್ಪರಿಣಾಮ ಬೀರಿದೆ, ಬಿಕ್ಕಟ್ಟು ಶಮನಕ್ಕೆ ಉಭಯ ದೇಶಗಳ ಮಾತುಕತೆ ಚಾಲ್ತಿಯಲ್ಲಿದೆ ಎಂದು ಹೇಳಿದರು.
ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ, ಇದಕ್ಕೆ ಪ್ರತಿಯಾಗಿ ನಾವೂ ನಿಯೋಜಿಸುತ್ತಿದ್ದೇವೆ ಅತ್ಯಂತ ಎತ್ತರ ಮತ್ತು ತೀವ್ರ ಚಳಿ ಇರುವ ಪ್ರದೇಶದಲ್ಲಿ ಹೆಚ್ಚು ಸೈನಿಕರ ನಿಯೋಜನೆ ಅತ್ಯಂತ ಅಪಾಯಕಾರಿ ಬೆಳವಣಿಗೆ 2020ರಲ್ಲಿ ಅಗಿದ್ದೂ ಇದೇ ಎಂದು ತಿಳಿಸಿದರು.
ಗಡಿಯಲ್ಲಿ ಶಾಂತಿ ಸ್ಥಾಪನೆಯಾಗದ ಹೊರತು ಉಭಯ ದೇಶಗಳ ಸಂಬಂಧ ಸುಧಾರಣೆ ಅಸಾಧ್ಯ, ಈ ನಿಟ್ಟಿನಲ್ಲಿ ಒಂದಷ್ಟು ಪ್ರಗತಿಯಾಗುತ್ತಿದೆ ಎಂದೂ ಅವರು ಹೇಳಿದರು.

Share News

About BigTv News

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *