ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು, ದಸರಾ ಅವಧಿಯೂ ಸೇರಿದಂತೆ ಸುಮಾರು ಒಂದು ತಿಂಗಳ ಕಾಲ ಇಡೀ ಮೈಸೂರು ನಗರ ದೀಪಧಾರಿಣಿಯಂತೆ ಕಂಗೊಳಿಸುತ್ತದೆ. ವರ್ಷದಿಂದ ವರ್ಷಕ್ಕೂ ಇದರ ಮಹತ್ವ, ಜನಾಕರ್ಷಣೆ ಹೆಚ್ಚುತ್ತಲೇ ಇದೆ. ಪಾರಂಪರಿಕ ಕಟ್ಟಡ, ವೃತ್ತ,ರಸ್ತೆಗಳಲ್ಲಿ ಅಳವಡಿಸುವ ದೀಪದ ಬಗೆಯಿಂದ ಇದು ಆಕರ್ಷಣೀಯ.
ಈ ಬಾರಿ ಇನ್ನಷ್ಟು ವಿಭಿನ್ನವಾಗಿ ದೀಪಾಲಂಕಾರ ಆಯೋಜಿಸುವ ಚಟುವಟಿಕೆಗಳು ಶುರುವಾಗಿವೆ. ಚೀನಾದಲ್ಲಿ ದೀಪಾಲಂಕಾರಕ್ಕೆ ಬಳಸುವ ತಂತ್ರಜ್ಞಾನಗಳನ್ನು ಮೈಸೂರು ದಸರಾ ದೀಪಾಲಂಕರಾದಲ್ಲೂ ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವ ಕುರಿತು ತಂಡಗಳು ಪರಿಶೀಲನೆ ನಡೆಯುತ್ತಿದೆ. ಇದರಿಂದ ಖಂಡಿತವಾಗಿಯೂ ದೀಪಾಲಂಕಾರಕ್ಕೆ ಹೊಸ ಹೊಳಪು ಬರಲಿದೆ ಎನ್ನುವ ನಿರೀಕ್ಷೆಯಿದೆ.
ಯಾವುದೇ ಉತ್ಸವ, ಹಬ್ಬಗಳಲ್ಲಿ ದೀಪಾಲಂಕಾರಗಳಿಗೆ ಈಗ ಎಲ್ಲಿಲ್ಲದ ಮಹತ್ವ. ಮುಂಬೈನ ಗಣೇಶೋತ್ಸವ, ಕೋಲ್ಕತ್ತಾದ ಕಾಳಿ ಉತ್ಸವ ಸಹಿತ ಭಾರತದ ನಾನಾ ಭಾಗಗಳಲ್ಲೂ ಉತ್ಸವಗಳಿಗೆ ಭಾರೀ ದೀಪಾಲಂಕಾರ ಮಾಡಲಾಗುತ್ತಿದೆ. ಇದರಲ್ಲಿ ಮೈಸೂರಿನ ದಸರಾವೂ ಸೇರಿದೆ. ಎರಡು ದಶಕದ ಹಿಂದೆ ಆರಂಭಗೊಂಡ ದಸರಾ ದೀಪಾಲಂಕಾರವೂ ಈಗ ಹೊಸ ಆಯಾಮಗಳನ್ನ ಪಡೆದುಕೊಳ್ಳುತ್ತಲೇ ಇದೆ. ಮೊದಲೆಲ್ಲಾ ಸಾಮಾನ್ಯ ಬಲ್ಬ್ ಬಳಸಲಾಗುತ್ತಿತ್ತು. ನಂತರ ಎಲ್‌ಇಡಿ, ವಿವಿಧ ಆಕಾರದ ಬಲ್ಬ್‌ಗಳ ಬಳಕೆ ಹೆಚ್ಚಿಸಲಾಯಿತು.
ತಂತ್ರಜ್ಞಾನ ಬಳಸಿಕೊಂಡು ವಿವಿಧ ಬಣ್ಣದ ದೀಪಗಳು ಏಕಕಾಲದಲ್ಲಿಯೇ ನೋಡುವಂತೆ ಮಾಡಲಾಯಿತು. ಈಗಲೂ ಅದಕ್ಕೆ ಇನ್ನಷ್ಟು ಹೊಳಪು ಹೊಸತನ ನೀಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

