Breaking News

‘ಮುಂದೆ ಕಳ್ಳರಿದ್ದಾರೆ, ಆಭರಣ ಕೊಡಿ’- ಪೊಲೀಸರ ಸೋಗಿನಲ್ಲಿ ಬೈಕ್ ತಡೆದು ಚಿನ್ನ ದೋಚಿದ ಖದೀಮರು!

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವೈಎಸ್‌ಆರ್ ಶಾಲೆ ಬಳಿ ನಕಲಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಖದೀಮರು ಬೈಕ್ ಸವಾರನನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದಾರೆ. ಜವಳಗೇರಾ ಗ್ರಾಮದ ಎಂ. ಅಮರೇಶ ಈ ವಂಚನೆಗೆ ಒಳಗಾದವರು. ತಾವು ಪೊಲೀಸರೆಂದು ಪರಿಚಯಿಸಿಕೊಂಡ ಆರೋಪಿಗಳು, ರಸ್ತೆಯಲ್ಲಿ ಕಳ್ಳರಿದ್ದಾರೆ ಎಂದು ನಂಬಿಸಿ ಆಭರಣಗಳನ್ನು ಸುರಕ್ಷಿತವಾಗಿ ಚೀಲದಲ್ಲಿ ಇಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಅಮರೇಶ 2 ತೊಲೆಯ ಚಿನ್ನದ ಸರ ಹಾಗೂ 1 ತೊಲೆಯ ಉಂಗುರವನ್ನು ಅವರಿಗೆ ನೀಡಿದ್ದಾರೆ. ಆಭರಣಗಳ ಬದಲಿಗೆ ಚೀಲದಲ್ಲಿ ಕಲ್ಲುಗಳನ್ನು ಹಾಕಿ ಅಮರೇಶ ಅವರಿಗೆ ನೀಡಿ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ವಂಚನೆ ಅರಿತ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

Share News

About BigTv News

Check Also

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ, ಆರೋಪಿ ಮನೆ ಮೇಲೆ ದಾಳಿ

ಮುಂಡಗೋಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ 65 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. …

Leave a Reply

Your email address will not be published. Required fields are marked *