ಕೆಮಿಕಲ್ ಹಾಲು ತಯಾರಿಕಾ
ಘಟಕದ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆ ಬೆಳಗಾವಿ
ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಕೆಮಿಕಲ್
ಮಿಶ್ರಣ ಮಾಡಿ ಹಾಲಿನ ಪ್ಯಾಟ್ ಜಾಸ್ತಿ ಮಾಡುತ್ತಿದ್ದ ಖದೀಮರ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ರಾತ್ರೋರಾತ್ರಿ ಪೋಲಿಸರು ದಾಳಿ ನಡೆಸಿದ್ದು, ೬ ಜನ ಖದೀಮರನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಿಂದ ಕೆಮಿಕಲ್ ತರುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಕುಮಾರ ಹಾರೂಗೇರಿ ಎಂಬುವವರಿಗೆ ಸೇರಿದ ಡೈರಿಯಲ್ಲಿ ಹಾಲಿಗೆ ಕೆಮಿಕಲ್ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ, ಇದರ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಆಹಾರ ನಿರೀಕ್ಷಕರು
ಹಾಗೂ ಅವರ ತಂಡ ಭೇಟಿ ನೀಡಿ ಪರೀಶಿಲನೆ ನಡೆಸಿದರು. ಈ ಕುರಿತು ಕುಡುಚಿ ಪೋಲಿಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





